More

    ಕ್ರೀಡೆಯಿಂದ ಶರೀರ ಸದೃಢ- ಪ್ರಾಚಾರ್ಯ ವಿಜಯಕುಮಾರ್ ಅಭಿಮತ

    ಹೂವಿನಹಡಗಲಿ: ಹಾಕಿ ಮಾಂತ್ರಿಕ ಧ್ಯಾನ್‌ಚಂದ್, ಸುನೀಲ್ ಗಾವಸ್ಕರ್ ಸಾಧನೆಗಳು ಇಂದಿನ ಕ್ರೀಡಾಪಟುಗಳಿಗೆ ಮಾರ್ಗದರ್ಶನವಾಗಬೇಕು ಎಂದು ಪ್ರಾಚಾರ್ಯ ವಿಜಯಕುಮಾರ್ ಹೇಳಿದರು.

    ಪಟ್ಟಣದ ಶ್ರೀಮತಿ ರುದ್ರಾಂಬ ಎಂ.ಪಿ.ಪ್ರಕಾಶ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಶ್ರೀಕೃಷ್ಣದೇವರಾಯ ವಿ.ವಿ. ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರ್ ಮಹಾವಿದ್ಯಾಲಯ ಮಟ್ಟದ ಕುಸ್ತಿ ಹಾಗೂ ಜುಡೋ ಪಂದ್ಯಾವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ವಿದ್ಯಾರ್ಥಿ ಜೀವನ ಸಾಧನೆಯ ಹಾದಿಯಲ್ಲಿರಬೇಕು. ಆ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕಾದಲ್ಲಿ ವಿದ್ಯಾರ್ಥಿಗಳು ಸದಾ ಕ್ರಿಯಾತ್ಮಕ ಆಲೋಚನೆ ಹೊಂದಿರಬೇಕು. ಕ್ರೀಡೆ ಮನುಷ್ಯ ಶರೀರವನ್ನು ಸದೃಢಗೊಳಿಸುತ್ತದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಅಧ್ಯಕ್ಷ ಜ್ಯೋತಿಮಲ್ಲಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಪಾಠದ ಜತೆ ಆಟವೂ ಮುಖ್ಯ ಎಂದರು. ಸಿಡಿಸಿ ನಿರ್ದೆಶಕ ಜಾತಪ್ಪ ಹಾಗೂ ವಕೀಲ ಅಟವಾಳಗಿ ಕೊಟ್ರೇಶ್ ಮಾತನಾಡಿದರು. ಉಪನ್ಯಾಸಕರಾದ ಹೆಬ್ಬಾಳ್ ಬಸವರಾಜ್, ರಮೇಶ್, ವಿಜಯ್. ಗಂಟೆಪ್ಪ ಶೆಟ್ಟಿ, ಉಮಾದೇವಿ, ನಾಗವೇಣಿ, ಎನ್. ರಮೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts