More

    ಗೌರವಧನ ಖಾತೆಗೆ ಜಮಾ ಮಾಡಿ – ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್, ಎಐಟಿಯುಸಿ ಒತ್ತಾಯ

    ಹೂವಿನಹಡಗಲಿ: ಬಿಸಿಯೂಟ ತಯಾರಕರ ಗೌರವಧನವನ್ನು ಅವರವರ ಖಾತೆಗೆ ಜಮಾ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಹಾಗೂ ಎಐಟಿಯುಸಿ ತಾಲೂಕು ಘಟಕ ಸೋಮವಾರ ತಾಪಂ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದವು.

    ಸಂಘಟನೆಗಳ ಪ್ರಮುಖರು ಇಒ ಎಸ್.ಎಸ್.ಪ್ರಕಾಶ್‌ಗೆ ಮನವಿ ಪತ್ರ ಸಲ್ಲಿಸಿದರು. ಕ.ರಾ.ಅ.ದಾ.ಬಿ.ತ. ಫೆಡರೇಷನ್ ಜಿಲ್ಲಾಧ್ಯಕ್ಷೆ ಎಚ್.ಅನಸೂಯಾ ಮಾತನಾಡಿ, ರಾಜ್ಯ ಸರ್ಕಾರದಿಂದ ಬಿಸಿಯೂಟ ತಯಾರಕರಿಗೆ 4 ತಿಂಗಳ ವೇತನ ಬಿಡುಗಡೆಯಾಗಿದೆ. ಆದರೆ, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬಿಸಿಯೂಟ ತಯಾರಿಕರಿಗೆ ಆ ವೇತನದ ಹಣ ಅವರವರ ಖಾತೆಗಳಿಗೆ ಜಮಾ ಆಗಿಲ್ಲ. ಬಿಸಿಯೂಟ ತಯಾರಕರು ಅತ್ಯಲ್ಪ ಮೊತ್ತದ ಸಂಬಳದಿಂದ ಜೀವನ ಸಾಗಿಸುತ್ತಿದ್ದಾರೆ. ವೇತನವನ್ನು ಖಾತೆಗೆ ಜಮಾ ಮಾಡುವಂತೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಸಬೂಬು ನೀಡಿ ಕಳುಹಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳನ್ನು ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ. ಸರ್ಕಾರ ಮತ್ತು ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿ ಬಿಸಿಯೂಟ ತಯಾರಕರ ಖಾತೆಗಳಿಗೆ ಕೂಡಲೆ ವೇತನ ಜಮಾ ಮಾಡಬೇಕು ಎಂದರು.

    ಎಐಕೆಎಸ್ ತಾಲೂಕು ಅಧ್ಯಕ್ಷ ಡಿ.ಮುಕುಂದಗೌಡ ಮಾತನಾಡಿ, ಬಿಸಿಯೂಟ ಮಹಿಳೆಯರಲ್ಲಿ ವಿಧವೆಯರು ಮತ್ತು ಬಡಕುಟುಂಬದ ಮಹಿಳೆಯರೇ ಹೆಚ್ಚಾಗಿರುವುದರಿಂದ ತಮ್ಮ ಸಂಸಾರ ನಡೆಸಲು ಅನೇಕ ಕಡೆಗಳಲ್ಲಿ ಸಾಲ ಮಾಡಿಕೊಂಡು, ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಪ್ರತಿ ತಿಂಗಳು ಬರಬೇಕಾದ ವೇತನ ಖಾತೆಗೆ ಜಮಾ ಆಗದೇ ಬಿಸಿಯೂಟ ತಯಾರಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರ ಈ ಕಷ್ಟ ನಿವಾರಣೆಗೆ ಅಧಿಕಾರಿಗಳು ವೇತನದ ಹಣವನ್ನು ಅವರ ಖಾತೆಗಳಿಗೆ ಕೂಡಲೇ ಜಮಾ ಮಾಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts