More

    ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಲು ರೈತರ ಒತ್ತಾಯ

    ಹೂವಿನಹಡಗಲಿ: ಮಾರುಕಟ್ಟೆಯಲ್ಲಿ ಕಡಲೆ (ಕರೆಕಡ್ಲಿ)ಬೆಲೆಯ ಕುಸಿತವಾಗಿದ್ದರಿಂದ ಸರ್ಕಾರ ರೈತರಿಂದ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಸಲು ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ತಾಲೂಕಿನ ಹೊಳಗುಂದಿ ರೈತರು ಉಪ ತಹಸೀಲ್ದಾರ್ ಮಲ್ಲಿಕಾರ್ಜುನ್‌ಗೆ ಮನವಿ ಸಲ್ಲಿಸಿದರು.

    ನೇತೃತ್ವ ವಹಿಸದ್ದ ರೈತರಾದ ವೈ.ಕೊಟ್ರೇಶ, ಮಾತನಾಡಿದರು. ರಾಜ್ಯದಲ್ಲಿ ಕಡಲೆ ಬೆಳೆದ ರೈತರು ಇನ್ನೇನು ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ವೇಳೆಯಲ್ಲಿ ದರ ಕುಸಿದಿದ್ದು ತೀವ್ರ ಬೇಸರಕ್ಕೆ ಕಾರಣವಾಗಿದೆ. ಆದರೆ ಸರ್ಕಾರ ವಿಜಯನಗರ ಜಿಲ್ಲೆ ಹೊರತುಪಡಿಸಿ ಇತರೆ 11ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ಸ್ಥಾಪಿಸಿದೆ. ವಿಜಯನಗರ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದ್ದು, ರೈತರಲ್ಲಿ ತಾರತಮ್ಯ ಮಾಡಿದಂತಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿದ್ದಾಗ ಹೂವಿನಹಡಗಲಿ ತಾಲೂಕಿನಲ್ಲಿ ಕಡಲೆ(ಕರೆಕಡ್ಲಿ) ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರ ಜಾರಿಯಲ್ಲಿದೆ. ಆದರೆ ವಿಜಯನಗರ ಹೊಸ ಜಿಲ್ಲೆ ರಚನೆಯಾದ ನಂತರ ಖರೀದಿ ಕೇಂದ್ರ ತೆರೆದಿಲ್ಲ. ಕಳೆದ ಎರಡು ವರ್ಷದಿಂದ ತಾಲೂಕಿನ ರೈತರು ದಲ್ಲಾಳಿಗಳಿಗೆ ಮಾರಾಟ ಮಾಡುವುದರಿಂದ ರೈತರು ತುಂಬಾ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಕೂಡಲೇ ಸರ್ಕಾರ ಹೂವಿನಹಡಗಲಿ ತಾಲೂಕಿನಲ್ಲಿ ಖರೀದಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿದರು.

    ರೈತರಾದ ಎ.ಜಿ.ಹಾಲನಗೌಡ, ಎಂ.ಅಶೋಕ, ಡಿ.ಹುಲುಗಪ್ಪ, ಹೆಚ್.ಎಂ. ಮಲ್ಲಿಕಾರ್ಜುನ, ಚಾವಡಿ ಮಂಜುನಾಥ, ಎನ್.ಸೋಮೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts