More

    ಪ್ರಾಚಾರ್ಯೆ ವಿರುದ್ಧ ಅತಿಥಿ ಉಪನ್ಯಾಸಕರ ಆಕ್ರೋಶ

    ಹೂವಿನಹಡಗಲಿ: ಪಟ್ಟಣದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯೆ ಶಶಿಕಲಾ ಪಾಟೀಲ್ ತಮ್ಮನ್ನು ಶೋಷಣೆ ಮಾಡುತ್ತಿದ್ದು, ಸಂಬಳ ಪಾವತಿಗೆ ಲಂಚ ಬೇಡುತ್ತಿದ್ದಾರೆ ಎಂದು ಆರೋಪಿಸಿ ಅತಿಥಿ ಉಪನ್ಯಾಸಕರು ಮಂಗಳವಾರವೂ ಪ್ರತಿಭಟನೆ ಮುಂದುವರಿಸಿದರು.

    ಶೈಕ್ಷಣಿಕ ವೇಳಾಪಟ್ಟಿಯಂತೆ ಬೋಧನಾ ಕೆಲಸ ನಿರ್ವಹಿಸಿದರೂ ಪ್ರಾಚಾರ್ಯರು ಕಾರ್ಯಭಾರ ತಿದ್ದುಪಡಿ ಮಾಡಿ ವೇತನ ಕಡಿಮೆ ಬರುವಂತೆ ಮಾಡುತ್ತಿದ್ದಾರೆ. ಅವರ ಹಣದ ಬೇಡಿಕೆ ಈಡೇರಿಸಿದರೆ ಪೂರ್ಣ ವೇತನ ನೀಡುತ್ತಾರೆ. ವಾರ್ಷಿಕ 8 ತಿಂಗಳ ಕೆಲಸಕ್ಕೆ ಮಾತ್ರ ಸರ್ಕಾರ ನಮಗೆ ವೇತನ ನೀಡುತ್ತಿದೆ. ಕಾಲೇಜಿನ ಪ್ರಾಚಾರ್ಯರು 8 ತಿಂಗಳ ವೇತನ ನೀಡಲು ಒಂದು ತಿಂಗಳ ಸಂಬಳ ಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ. ಇದಕ್ಕೆ ಒಪ್ಪದಿದ್ದರೆ ತಾಂತ್ರಿಕ ಕಾರಣಗಳ ನೆಪ ಹೇಳಿ ವೇತನ ತಡೆಹಿಡಿಯುತ್ತಾರೆ ಎಂದು ಪ್ರತಿಭಟನಾ ಉಪನ್ಯಾಸಕರು ಆರೋಪಿಸಿದರು.

    ಕಾಲೇಜ್‌ಗೆ ತಹಸೀಲ್ದಾರ್ ಜೆ.ನಟರಾಜ್ ಭೇಟಿ ನೀಡಿ ಉಪನ್ಯಾಸಕರ ಬೇಡಿಕೆಗಳನ್ನು ಆಲಿಸಿದರು. ನಂತರ ಕಾಲೇಜು ಪ್ರಾಚಾರ್ಯ ಶಶಿಕಲಾ ಪಾಟೀಲ್‌ರನ್ನು ತರಾಟೆಗೆ ತೆಗದುಕೊಂಡರು. ನೀವು ಸರ್ಕಾರದ ಆದೇಶವನ್ನು ಪಾಲಿಸಬೇಕು. ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸ್ಪಂದನೆ ನೀಡಬೇಕು. ಇಲ್ಲವಾದರೆ ನಾನು ಜಿಲಾಧಿಕಾರಿಗೆ ನಿಮ್ಮ ವಿರುದ್ಧ ದೂರು ನೀಡುತ್ತೇನೆ ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts