More

    ಹೂತಗೆರೆ ಗ್ರಾಮದಲ್ಲಿ ಶಿವರಾತ್ರಿ ಸಂಭ್ರಮ: ಸತ್ಯಶನೇಶ್ಚರಸ್ವಾಮಿ ದೇವರಿಗೆ ವಿಶೇಷ ಪೂಜೆ

    ಮದ್ದೂರು: ತಾಲೂಕಿನ ಹೂತಗೆರೆ ಗ್ರಾಮದ ಪುರಾಣ ಪ್ರಸಿದ್ಧ ಸತ್ಯಶನೇಶ್ಚರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ವಿಶೇಷ ಪೂಜೆ ಮಾಡಲಾಯಿತು.
    ಶಿವರಾತ್ರಿ ಹಬ್ಬ ಮುಗಿದ ಹಲವು ದಿನದ ಬಳಿಕ ಈ ದೇವಸ್ಥಾನದಲ್ಲಿ ಆಚರಣೆ ಮಾಡುವುದು ವಾಡಿಕೆ. ಹಲವು ದಶಕದಿಂದಲೂ ಈ ಪದ್ಧತಿಯನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವೂ ಸಂಭ್ರಮ, ಸಡಗರದಿಂದ ಧಾರ್ಮಿಕ ಕೈಂಕರ್ಯಗಳು ನಡೆದವು. ಗುಡ್ಡಪ್ಪ ಗಂಗಪ್ಪ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಯಿತು.
    ಶನಿವಾರ ಮುಂಜಾನೆ ದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ಪಾದಪೂಜೆ ಮಾಡಲಾಯಿತು. ಬಳಿಕ ನವಗ್ರಹ ಹೋಮ, ಶನಿಶಾಂತಿ, ಹೋಮ ನಡೆಸಲಾಯಿತು. ರಾತ್ರಿ ಹೂ ಹೊಂಬಾಳೆಯೊಂದಿಗೆ ಗಂಡಿಯನ್ನು ತರಲಾಯಿತು. ಅಂತೆಯೇ ಶನಿ ಪ್ರಭಾವ ಹರಿಕಥೆ ನಡೆಯಿತು. ಭಾನುವಾರ ಬೆಳಗ್ಗೆ ಅನ್ನದಾಸೋಹಕ್ಕೆ ಚಾಲನೆ ನೀಡಲಾಯಿತು. ಹರಕೆ ಹೊತ್ತವರು ಹಾಗೂ ಭಕ್ತರು ಮುಡಿ ಸೇವೆ ನೆರವೇರಿಸಿದರೆ, ಕೆಲವರು ಅನ್ನದಾಸೋಹಕ್ಕೆ ತಮ್ಮಿಂದಾಗುವ ಸಹಕಾರ ನೀಡಿದರು. ಇನ್ನು ಹೂತಗೆರೆ, ಅವಸರದಹಳ್ಳಿ, ಕುರುಬರದೊಡ್ಡಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts