More

    ಪತಿ ಹಾಗೂ ಮನೆಯವರಿಂದ ಮಾನಸಿಕ ಕಿರುಕುಳ: ತಲಾಕ್ ನೀಡುವ ಬೆದರಿಕೆ

    ಪಡುಬಿದ್ರಿ: ಪತಿ ಹಾಗೂ ಅವರ ಮನೆಯವರು ಮಾನಸಿಕ ಕಿರುಕುಳ ನೀಡಿರುವುದಲ್ಲದೆ, ಪತಿ ದೈಹಿಕ ಹಿಂಸೆ ನೀಡಿ ತಲಾಕ್ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಕಾಪು ಮಲ್ಲಾರಿನ ಆಯಿಶಾ ಫರೀನ್(26) ಎಂಬುವರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಪತಿ ಮನೆಯವರಿಂದ ನಿರಂತರ ಕಿರುಕುಳ

    ಆಯಿಶಾ ಫರೀನ್ ಅವರಿಗೆ 2017ರ ಏ.6ರಂದು ಕೊಂಬುಗುಡ್ಡೆಯ ಪರ್ವೇಜ್ ಅವರೊಂದಿಗೆ ವಿವಾಹವಾಗಿತ್ತು. ಮದುವೆಯಾದ 20 ದಿನಕ್ಕೆ ಪತಿ ಓಮನ್ ದೇಶಕ್ಕೆ ಹೋಗಿದ್ದು, ಆ ಸಮಯದಲ್ಲಿ ಪತಿ ಮನೆಯಲ್ಲಿದ್ದ ಫರೀನ್‌ಗೆ ಮಾವ ಶುಕೂರ್, ಅತ್ತೆ ಜೋಹರಾಬಿ, ಗಂಡನ ಸಹೋದರ ಫಾರೂಕ್, ಸಹೋದರಿ ಅನ್ಹೋದಾ ಹಾಗೂ ತಮ್ಮಂದಿರಾದ ಫೈಸಲ್ ಮತ್ತು ಫರ್ಹಾನ್ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಕಿರುಕುಳ ನೀಡಿದ್ದರು.

    ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ

    ಅಲ್ಲದೆ ಫಾರೂಕ್ ಬೆದರಿಕೆ ಹಾಕುತ್ತಿದ್ದರು. ಶುಕೂರ್, ಜೊಹರಾಬಿ ಮತ್ತು ಅನ್ಹೋದಾ ನಿಂದಿಸಿ ತವರು ಮನೆಯಿಂದ ಇನ್ನೂ ಚಿನ್ನ ಮತ್ತು ಹಣವನ್ನು ತಂದುಕೊಡು, ಇಲ್ಲದಿದ್ದರೆ ಮನೆಯಲ್ಲಿ ಇರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹಲ್ಲೆ ಮಾಡುತ್ತಿದ್ದರು.

    ಚಿನ್ನ ಮಾರಾಟ ಮಾಡಿ ಹಣ ಪಡೆದುಕೊಂಡರು

    ಗಂಡ ಕೂಡಾ ಚಿನ್ನ ಕೊಡು ಎಂದು ಕೇಳುತ್ತಿದ್ದು, 6 ಲಕ್ಷ ರೂಪಾಯಿಯಷ್ಟು ಚಿನ್ನವನ್ನು ಮಾರಾಟ ಮಾಡಿಸಿ ಹಣ ಪಡೆದುಕೊಂಡಿದ್ದರು. ಪತಿ ಮೂರು ಸಲ ಓಮನ್‌ಗೆ ಕರೆಸಿಕೊಂಡು ಹೋಗಿ ಅಲ್ಲಿ ದೈಹಿಕ ಮಾನಸಿಕ ಹಿಂಸೆ, ತಲಾಕ್ ಕೊಡುವ ಬೆದರಿಕೆ ಹಾಕಿದ್ದಾರೆ. ಕಳೆದ 6 ವರ್ಷಗಳಿಂದ ಖರ್ಚಿಗೂ ಹಣ ಕೊಡದೇ, ಮಾನಸಿಕ ದೈಹಿಕ ಹಿಂಸೆ ನೀಡಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts