More

    ಗಂಡನ ಮಿತಿಮೀರಿದ ವರ್ತನೆಗೆ ಬೇಸತ್ತು ಬಿಟ್ಟು ಹೋಗಲು ಮುಂದಾದ ಸುಂದರಿಗೆ ಕಾದಿತ್ತು ಶಾಕ್​!

    ನ್ಯೂಯಾರ್ಕ್​: ತೆವಳಲು ಸಾಧ್ಯವಾಗದಂತಹ ಜಾಗದಲ್ಲಿ ಪತ್ನಿಯ ಮೃತದೇಹವನ್ನು ಇಡುವ ಮುನ್ನ ಆಕೆಯನ್ನು ಪ್ಲಾಸ್ಟಿಕ್​ ಬ್ಯಾಗ್​ನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದ ಪಾಪಿ ಪತಿರಾಯ ಇದೀಗ ನ್ಯಾಯಾಲಯದ ಮುಂದೆ ತಪ್ಪಿತಸ್ಥ ಮನೋಭಾವ ಕಾಡುತ್ತಿರುವುದಾಗಿ ಕಣ್ಣೀರಿಟ್ಟಿದ್ದಾನೆ.

    ಅಮೆರಿಕದ ಮಿನ್ನೇಸೋಟ ನಗರದ ನಿವಾಸಿಯಾಗಿರುವ ಆರೋಪಿ ಜೊಶುವಾ ಡೇವಿಡ್​ (28) ತನ್ನ ಪತ್ನಿ ಮರಿಯಾಳನ್ನು ಉಸಿರುಗಟ್ಟಿಸಿ ಕೊಲೆಗೈದ ಆರೋಪದಲ್ಲಿ ಬಂಧಿಯಾಗಿ 35 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾನೆ.

    ಇದನ್ನೂ ಓದಿ: ಮಳೆ ನೀರಿಗೆ ಕೊಚ್ಚಿ ಹೋಯ್ತು 264 ಕೋಟಿ ರೂ…!; ಉದ್ಘಾಟನೆಗೊಂಡು ತಿಂಗಳು ಕಳೆದಿರಲಿಲ್ಲ

    ಮರಿಯಾ ಏಪ್ರಿಲ್​ 30ರಂದು ನಾಪತ್ತೆಯಾಗಿದ್ದಳು. ಅದಾದ ಎರಡನೇ ದಿನದಲ್ಲಿ ಆಕೆಯ ಮೃತದೇಹ ಮಿನ್ನೇಸೋಟದ ಆರೋಪಿ ಡೇವಿಡ್​ ಮನೆಯಲ್ಲೇ ಪತ್ತೆಯಾಗಿತ್ತು. ಆಕೆಯ ಮುಖವನ್ನು ಪ್ಲಾಸ್ಟಿಕ್​ ಬ್ಯಾಗ್​ನಿಂದ ಮುಚ್ಚಿ ಟೇಪ್​ ಅಂಟಿಸಿದ್ದರಿಂದ ಉಸಿರುಗಟ್ಟಿ ಸಾವಿಗೀಡಾಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು. ಬಳಿಕ ಪತಿಯೇ ಕೊಲೆ ಮಾಡಿದ್ದಾನೆಂದು ತಿಳಿದು ಆತನನ್ನು ಬಂಧಿಸಲಾಗಿತ್ತು. ಆದರೆ, ಪೊಲೀಸರ ಮುಂದೆ ಮನಬಂದತೆ ಹೇಳಿಕೆ ನೀಡಿದ ಡೇವಿಡ್, ಆಕೆಯ ಕೊಲೆಗೆ ಮಾಜಿ ಪ್ರಿಯಕರನೆ ಕಾರಣ ಎಂದು ಹೇಳಿದ್ದ. ​

    ಆದರೆ, ಕೊನೆಗೆ ಪಾಪಪ್ರಜ್ಞೆ ಕಾಡಿ ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದ. ಈತನ ಬಗ್ಗೆ ಮರಿಯಾ ಕುಟುಂಬ ಹಾಗೂ ಆಪ್ತರನ್ನು ವಿಚಾರಿಸಿದಾಗ, ಕುಟುಂಬ ಕಲಹ ಇದ್ದುದ್ದಾಗಿ ತಿಳಿಸಿದ್ದರು. ನಿಯಂತ್ರಣ ಹೇರುವ ಹಾಗೂ ಯಾವುದನ್ನು ಸಹಿಸಿಕೊಳ್ಳದ ಸ್ವಭಾವ ಡೇವಿಡ್​ನದ್ದು, ಹೀಗಾಗಿ ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿಸಿದ್ದಾರೆ.​

    ಇದನ್ನೂ ಓದಿ: ಅತ್ಯಾಚಾರ ಮತ್ತು ಕೊಲೆ ಬೆದರಿಕೆ … ಸೈಬರ್​ ಪೊಲೀಸ್​ ಮೊರೆ ಹೋದ ಸುಶಾಂತ್​ ಪ್ರೇಯಸಿ

    ಗಂಡನ ಮಿತಿಮೀರಿದ ವರ್ತನೆಯನ್ನು ಸಹಿಸಲಾಗದೇ ಆತನನ್ನು ಬಿಟ್ಟು ಹೋಗಲು ಮುಂದಾದಾಗ ಇಬ್ಬರ ನಡುವೆ ಗಲಾಟೆ ನಡೆದಿದೆ. ಇದು ತಾರಕಕ್ಕೇರಿದಾಗ ಪಾಪಿ ಪತಿ ತನ್ನ ಎರಡು ಕೈಗಳಿಂದ ಮೆರಿಯಾ ಕುತ್ತಿಗೆಯನ್ನು ಹಿಸುಕಿದ್ದಾನೆ. ಆದರೆ, ಇನ್ನು ಉಸಿರಾಡುವುದನ್ನು ಗಮನಿಸಿದ ಆತ ಬಳಿಕ ಪ್ಲಾಸ್ಟಿಕ್​ ಬ್ಯಾಗ್​ನಿಂದ ಅವಳ ಮುಖವನ್ನು ಮುಚ್ಚಿ ಟೇಪ್​ ಅಂಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಎಳೆದೊಯ್ದು ತೆವಳುವಂತಹ ಪ್ರದೇಶದಲ್ಲಿ ಹಳ್ಳ ತೆಗೆದು ಅದರಲ್ಲಿಟ್ಟು, ಕತ್ತರಿಸಿದ ಪ್ಲಾಸ್ಟಿಕ್​ ಅನ್ನು ಮೃತದೇಹದ ಮೇಲೆ ತುಂಬಿದ್ದಾನೆ. ಬಳಿಕ ಏನು ಆಗಿಲ್ಲವಂತೆ ಬಿಂಬಿಸಲು ಸ್ಥಳದ ಸುತ್ತಾಮುತ್ತಾ ಸ್ವಚ್ಛಗೊಳಿಸಿದ್ದಾನೆ.

    ಸಾಕಷ್ಟು ಶೋಧ ನಡೆಸಿದ್ದ ಪೊಲೀಸರು ಕೊನೆಗೆ ಆರೋಪಿಯ ಮನೆಯನ್ನು ಹುಡುಕಾಡಿದಾಗ ಮೃತದೇಹ ದೊರಕಿದೆ. (ಏಜೆನ್ಸೀಸ್​)

    VIDEO| ನಿತ್ಯಾ ಮೆನನ್ ಅಭಿನಯದ ವೆಬ್​ ಸೀರಿಸ್​ ದೃಶ್ಯ ಲೀಕ್​: ಲೆಸ್ಬಿಯನ್​ ಲಿಪ್​ಲಾಕ್​ ವಿಡಿಯೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts