More

    ದೇಗುಲಗಳನ್ನು ಸರ್ಕಾರದ ತೆಕ್ಕೆಗೆ ಪಡೆಯಲು ಹುನ್ನಾರ

    ಶಿಕಾರಿಪುರ: ಸರ್ಕಾರ ದೇವಾಲಯಗಳನ್ನು ಮುಜರಾಯಿ ವ್ಯಾಪ್ತಿಗೆ ತರದಂತೆ ಆಗ್ರಹಿಸಿ ತಾಲೂಕು ವೀರಶೈವ ಜಂಗಮ ಅರ್ಚಕ, ಪುರೋಹಿತರ ಸಂಘದ ಸದಸ್ಯರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು.
    ಸಂಘದ ಅಧ್ಯಕ್ಷ ಪ್ರಭುಸ್ವಾಮಿ ಆರಾಧ್ಯಮಠ ಮಾತನಾಡಿ, ರಾಜ್ಯಾದ್ಯಂತ ಒಂದಿಲ್ಲೊAದು ಕಾರಣಗಳ ನೆಪ ಹೇಳಿ ದೇವಾಲಯಗಳಿಗೆ ನೋಟಿಸ್ ನೀಡಲಾಗಿದೆ. ಇದರ ಅರ್ಥ ದೇವಾಲಯಗಳನ್ನು ಸರ್ಕಾರದ ಸುಪರ್ದಿಗೆಗೆ ತೆಗೆದುಕೊಳ್ಳುವ ಹುನ್ನಾರ ನಡೆದಿದೆ ಎಂದು ದೂರಿದರು. ಸಂಘದ ನಿರ್ದೇಶಕ ಶಿವಯ್ಯ ಶಾಸಿö ಮಾತನಾಡಿ, ಜಾತ್ಯತೀತ ಸರ್ಕಾರದ ಸೋಗಿನಲ್ಲಿರುವ ನೀವು ಹಿಂದು ದೇವಾಲಯಗಳನ್ನು ಉಪೇಕ್ಷೆ ಮಾಡುತ್ತಿದ್ದೀರಿ. ಹಿಂದುಗಳಿಗೆ ಒಂದು ಕಾನೂನು, ಅನ್ಯ ಧರ್ಮಿಯರಿಗೆ ಒಂದು ಕಾನೂನು ಎಷ್ಟು ಸರಿ. ಹಿಂದು ದೇವಾಲಯಗಳಿಗೆ ಕಡಿವಾಣ ಹಾಕಿ ಮಸೀದಿ, ಚರ್ಚ್ಗಳಿಗೂ ಕಡಿವಾಣ ಹಾಕಿ ಎಂದು ಆಗ್ರಹಿಸಿದರು.
    ಶಿವಕುಮಾರ್ ಶಾಸಿö, ಸದಾಶಿವ ಶಾಸಿö, ಯೋಗೇಶ್ವರ್ ಶಾಸಿö, ಚನ್ನಬಸವೇಶ್ವರ ಮಹಾಂತೇಶ್ ಶಾಸಿö, ಮೃತ್ಯುಂಜಯ, ವೀರಯ್ಯ, ಮಲ್ಲಿಕಾರ್ಜುನ ಶಾಸಿö, ಚನ್ನವೀರಯ್ಯ ಶಾಸಿö, ಮಲ್ಲಿಕಾರ್ಜುನ ಶಾಸಿö, ಚನ್ನವೀರಯ್ಯ ಶಾಸಿö, ಪುಟ್ಟಯ್ಯ ಶಾಸಿö, ಪುರೋಹಿತ ವರ್ಗದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts