More

    ಗಂಡ ಅರೆಸ್ಟ್​ ಆಗಿದ್ದೇ ಶಿಲ್ಪಾ ಶೆಟ್ಟಿಗೆ ಮುಳುವಾಯ್ತಾ?

    ಮುಂಬೈ: ಶಿಲ್ಪಾ ಶೆಟ್ಟಿ ಪೂರ್ಣಪ್ರಮಾಣದಲ್ಲಿ ನಟಿಸಿದ ಕೊನೆಯ ಚಿತ್ರವೆಂದರೆ, ಅದು 2007ರಲ್ಲಿ ಬಿಡುಗಡೆಯಾದ ‘ಅಪ್ನೇ’. ಈ 14 ವರ್ಷಗಳಲ್ಲಿ ಎರಡ್ಮೂರು ಚಿತ್ರಗಳಲ್ಲಿ ಐಟಂ ನಂಬರ್​ ಮತ್ತು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಮಿಕ್ಕಂತೆ ಅವರು ಯಾವ ಚಿತ್ರದಲ್ಲೂ ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿಯೇ ಅವರ ರೀಎಂಟ್ರಿ ಚಿತ್ರವಾದ ‘ಹಂಗಾಮಾ 2’ ಬಗ್ಗೆ ಪ್ರೇಕ್ಷಕರಲ್ಲಿ ಒಂದಿಷ್ಟು ನಿರೀಕ್ಷೆಗಳಿದ್ದವು. ಆದರೆ, ಆ ನಿರೀಕ್ಷೆ ಇದೀಗ ಸುಳ್ಳಾಗಿದೆ.

    ಇದನ್ನೂ ಓದಿ: ಈ ಬಾರಿ ‘ಬಿಗ್​ ಬಾಸ್​’ನ ನಿರೂಪಣೆಯ ಜವಾಬ್ದಾರಿ ಕರಣ್​ ಜೋಹರ್​ ಹೆಗಲಿಗೆ …

    ‘ಹಂಗಾಮಾ 2’ ಚಿತ್ರವು ಶುಕ್ರವಾರ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ನೋಡಿರುವ ಪ್ರೇಕ್ಷಕರಲ್ಲಿ ಶೇ. 90ರಷ್ಟು ಜನ ಚಿತ್ರ ಕೆಟ್ಟದಾಗಿದೆ ಎಂದು ವಿಮರ್ಶೆ ಮಾಡಿದ್ದಾರೆ. ಉಳಿದವರು ಚಿತ್ರ ಸುಮಾರಾಗಿದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಐಎಂಡಿಬಿಯಲ್ಲಿ ಚಿತ್ರಕ್ಕೆ 10ಕ್ಕೆ 3.7 ರೇಟಿಂಗ್​ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಈ ರೇಟಿಂಗ್​ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ.

    ‘ಹಂಗಾಮಾ 2’ ಬಿಡುಗಡೆಯಾಗುವುದಕ್ಕೆ ಮೂರು ದಿನಗಳ ಹಿಂದಷ್ಟೇ ಶಿಲ್ಪಾ ಗಂಡ ರಾಜ್​ ಕುಂದ್ರಾ ನೀಲಿ ಚಿತ್ರಗಳ ಕೇಸ್​ನಲ್ಲಿ ಅರೆಸ್ಟ್​ ಆಗಿದ್ದರು. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಜನ ಶಿಲ್ಪಾ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವಿಷಯವಾಗಿ ಮಾತನಾಡಿದ್ದ ಶಿಲ್ಪಾ, ‘ಚಿತ್ರಕ್ಕೂ ರಾಜ್​ ಕುಂದ್ರಾಗೂ ಸಂಬಂಧವಿಲ್ಲದಿ. ಅವರಿಂದಾಗಿ ಚಿತ್ರಕ್ಕೆ ತೊಂದರೆಯಾಗಬಾರದು. ಚಿತ್ರ ನಿಜಕ್ಕೂ ಚೆನ್ನಾಗಿ ಮೂಡಿಬಂದಿದೆ. ಇಡೀ ತಂಡ ಬಹಳ ಕಷ್ಟಪಟ್ಟು ಕೆಲಸ ಮಾಡಿದೆ ಎಂದು ಹೇಳಿಕೊಂಡಿದ್ದರು. ರಾಜ್​ ಕುಂದ್ರಾ ಅರೆಸ್ಟ್​ ಆಗಿದ್ದರಿಂದ ಚಿತ್ರಕ್ಕೆ ಎಷ್ಟು ಸಮಸ್ಯೆಯಾಗಿದೆಯೋ ಗೊತ್ತಿಲ್ಲ. ಆದರೆ, ಚಿತ್ರ ನೋಡಿದವರೆಲ್ಲ ‘ಹಂಗಾಮಾ’ದಷ್ಟು ಈ ಚಿತ್ರ ಚೆನ್ನಾಗಿ ಮೂಡಿಬಂದಿಲ್ಲ ಎಂಬ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ‘ಗುಚಿ’ಯೊಂದಿಗೆ ರಣವೀರ್​ ಸಿಂಗ್​ರ ಆಕರ್ಷಕ ಲುಕ್ಸ್​ ನೋಡಿ!

    ‘ಹಂಗಾಮಾ 2’ ಚಿತ್ರವು ಬರೀ ಶಿಲ್ಪಾ ಶೆಟ್ಟಿಗೆ ಮಾತ್ರವಲ್ಲ, ನಿರ್ದೇಶಕ ಪ್ರಿಯದರ್ಶನ್​ ಅವರಿಗೂ ಬಹಳ ಮಹತ್ವದ್ದಾಗಿತ್ತು. ಕಾರಣ, ಬಾಲಿವುಡ್​ನಲ್ಲಿ ಒಂದು ಕಾಲಕ್ಕೆ ಹಲವು ಹಿಟ್​ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರಿಯದರ್ಶನ್​, ಕಳೆದ ಎಂಟು ವರ್ಷಗಳಿಂದ ಯಾವುದೇ ಚಿತ್ರ ಮಾಡಿರಲಿಲ್ಲ. ಈ ಬಾರಿ ಅವರು ಕಾಮಿಡಿ ಚಿತ್ರದೊಂದಿಗೆ ವಾಪಸ್ಸಾಗಿದ್ದು, ಚಿತ್ರದಲ್ಲಿ ಪರೇಶ್​ ರಾವಲ್​, ಜಾನಿ ಲಿವರ್​, ರಾಜ್​ಪಾಲ್​ ಯಾದವ್​, ಅಶುತೋಶ್​ ರಾಣ, ಕನ್ನಡತಿ ಪ್ರಣೀತಾ ಸುಭಾಶ್​ ಸೇರಿದಂತೆ ಹಲವರು ನಟಿಸಿದ್ದರು. ಹಾಗಾಗಿ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಿದ್ದವು. ಆದರೆ, ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ರಾಮನಾಗುವುದಕ್ಕೆ ನೋ ಎಂದ ಮಹೇಶ್​ ಬಾಬು … ಕಾರಣ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts