More

    ನೂರಾರು ವಿಧದ ಹಲಸು ಬೆಳೆಯುವ ಸೊಗಸು

    ಹಲಸಿನ ಗಿಡಗಳನ್ನು ಬೆಳೆಸಬೇಕೆಂದಿದ್ದೇನೆ. ಯಾವುದೇ ಮಣ್ಣಿನಲ್ಲೂ ಅದನ್ನು ಬೆಳೆಸಬಹುದೇ? ಅವುಗಳ ತಳಿಗಳನ್ನು ತಿಳಿಸಿರಿ. ಕೆಂಪು ಬಣ್ಣದ್ದು ಚಂದವೆಂದು ಹೇಳುತ್ತಾರೆ. ಹೌದೇ?

    | ಸುಧೀರ್ ಶಿವಮೊಗ್ಗ

    ಹಲಸಿನಲ್ಲಿ ನೂರಾರು ವಿಧಗಳಿವೆ. ಈಗ ಹಲಸು ಹಣ್ಣಾಗುವ ಸಮಯ. ನೀವು ಹಲಸನ್ನು ಹಾಕುವ ಮೊದಲು ಅವುಗಳನ್ನು ತಿಂದು ನೋಡಿಯೂ ನೆಡಬಹುದು. ಕೆಂಪು ಬಣ್ಣದ್ದು ನೋಡಲಂತೂ ಚಂದ. ಕೆಂಪು ಹಲಸು, ಚಂದ್ರ ಬಕ್ಕೆ, ರೆಡ್ ಜಾಕ್ ಎಂದೆಲ್ಲಾ ಹೇಳಲಾಗುವ ಹಲಸಿನಲ್ಲಿ ಸುಮಾರು 50ಕ್ಕೂ ಹೆಚ್ಚು ವಿಧಗಳಿವೆ (ಇನ್ನೂ ಹೆಚ್ಚಿರಬಹುದು). ಅವುಗಳಲ್ಲಿ ದೇಶವಿದೇಶಗಳದ್ದೂ ಸೇರಿವೆ. ಜೊತೆಗೆ ಹಳದಿ, ಬಂಗಾರದ ಬಣ್ಣ ಮತ್ತು ಬಿಳಿ ಹೀಗೆ ಇನ್ನಷ್ಟು ಬಣ್ಣಗಳ ತೊಳೆಗಳ ತಳಿಗಳೂ ಇವೆ. ಒಂದಕ್ಕಿಂತ ಒಂದು ರುಚಿ, ಪೌಷ್ಠಿಕ ಹಾಗೂ ಸುಂದರ. ಕನ್ನಡದ ಪತ್ರಿಕೆಗಳನ್ನು ನೀವು ಓದುತ್ತಿದ್ದರೆ ಎಷ್ಟೆಲ್ಲಾ ರೀತಿಯ ತಳಿ ವೈವಿಧ್ಯಗಳ ಮಾಹಿತಿ ನಿಮಗೆ ಸಿಗುತ್ತಿತ್ತು. ಬೇಳೂರಿನ ಬಿ.ಟಿ. ನರೇಂದ್ರರವರು ತಳಿಗಳ ಹೆಸರು ಮತ್ತು ಕೆಲವು ವಿವರಗಳನ್ನು ನೀಡಿದ್ದಾರೆ. ಹಾಗೇ ಅನೇಕರು ಮನೆ ಮಟ್ಟದಲ್ಲಿ ಹಲಸಿನ ಕಸಿ ಮಾಡಿಕೊಂಡು ಬೆಳೆಸುತ್ತಿದ್ದಾರೆ. ಇಲ್ಲಿ ಅನೇಕರ ಹೆಸರನ್ನು ನೀಡಿದ್ದೇವೆ. ನೀವು ಫೋನ್ ಮಾಡುವಾಗ ಅವರ ಸಮಯವನ್ನು ಮೊದಲೇ ಕೇಳಿ ಮಾತನಾಡುವ ವೇಳೆಯನ್ನು ನಿಗದಿಮಾಡಿಕೊಳ್ಳಿ. ಅವರಿಗೆ ತೊಂದರೆಯಾಗದಂತೆ ಮಾತನಾಡಿಸಿ ಮಾಹಿತಿ ಪಡೆದುಕೊಳ್ಳಿರಿ.

    ನೂರಾರು ವಿಧದ ಹಲಸು ಬೆಳೆಯುವ ಸೊಗಸುತಳಿ ವಿಧಗಳು: ಅಮ್ಮನಳ್ಳಿ ಚಂದ್ರ ಹಲಸು, ಬೆಳಕೆರೆ ಚಂದ್ರ ಹಲಸು, ಬೈರಚಂದ್ರ ಹಲಸು, ಭದ್ರಾವತಿ ಗೋಲ್ಡ್, ಬೋದಿಲ್ ಚಂದ್ರ ಹಲಸು, ಕಾಣಿಕೆ ಕೆಂಚ, ಚಂದ್ರಾಂಜಿನ, ಚಿಪಗೇರಿ ಚಂದ್ರ ಹಲಸು, ಹೊನ್ನಾವರ ರೆಡ್, ಹೇಮ ಚಂದ್ರ ಹಲಸು, ಕಾಡುಸಿಂಗ ರೆಡ್, ಕುಕ್ಕನಮನೆ ಚಂದ್ರ ಹಲಸು, ಕೇರಳಾ ರೆಡ್, ಕಾಚೋಹಳ್ಳಿ ರೆಡ್, ಮಂಕಾಳೆ ರೆಡ್, ಮಲ್ಲೇಶ್ವರಮ್ ರೆಡ್, ಮಂಚಾಲೆ ಕಾನುಗೋಡು ರೆಡ್, ಮಜ್ಜಿಗೆಸರ ರೆಡ್, ಲಿಗಾಡಿ ರೆಡ್, ನಗರ ಚಂದ್ರ ಹಲಸು, ಪೆರಡೂರು ಚಂದ್ರ ಹಲಸು, ಪ್ರಕಾಶ್ ಚಂದ್ರ ಹಲಸು, ನೇರಲಬಳ್ಳಿ ಚಂದ್ರ ಹಲಸು, ಸೊರಬಾ ರೆಡ್, ರಾಮ ಚಂದ್ರ ಹಲಸು, ರುದ್ರಾಕ್ಷಿ ರೆಡ್ ಕಾಸರಗೋಡು, ಶೃಂಗೇರಿ ರೆಡ್, ಸಿರ್ಸಿ ರೆಡ್ ದೇವರಗದ್ದೆ, ರುದ್ರಾಕ್ಷಿ ರೆಡ್ ಹೊಸನಗರ, ಸಖರಾಯ್ ಪಟ್ಣ ರೆಡ್, ಸಿರ್ಸಿರೆಡ್-2, ಸಾಗರೀ ಚಂದ್ರ ಹಲಸು, ಉದುರು ಕೇಸರಿ, ಥಾಯ್ಲೆಂಡ್ ರೆಡ್, ತೂಬುಗೆರೆ ರೆಡ್, ಥಾಯ್ಲೆಂಡ್ ರೆಡ್ ಗಮ್ೆಸ್, ಥಾಯ್ಲೆಂಡ್ ರೆಡ್ ಎಲ್ಲೋ.

    ಕೆಲವರು ಮನೆಯಲ್ಲೇ ಬೆಳೆಸಿ ದೊಡ್ಡ ಮರ ಮಾಡಿದ್ದಾರೆ. ಅವರು ಕಸಿ ಮಾಡಿ ಗಿಡ ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ ಮಾಡುತ್ತಿಲ್ಲ. ಅವು ಉದ್ರೆ ರೆಡ್, ನೀಚಡಿ ರೆಡ್, ಹೊಸಕೊಟ್ಟಿಗೆ ರೆಡ್, ಬೆಂಗಳೂರು ರೆಡ್, ಭೀಮನೇರಿ ರೆಡ್, ಆನಂದಪುರ ರೆಡ್, ಅಬಸೆ ರೆಡ್, ಹಸಬಾಳೆ ರೆಡ್, ಕೋಣನಕಟ್ಟೆ ರೆಡ್, ಕಾನುಗೋಡು ರೆಡ್, ಕುಂದುಗೋಡು ರೆಡ್, ಜಯಾ ಟೈಲರ್ ರೆಡ್, ಪ್ರಕಾಶ ಸ್ಟೂಡಿಯೋ ರೆಡ್ ಇತ್ಯಾದಿ… ಅವುಗಳ ಫಸಲು, ಇಳುವರಿ ಅಥವಾ ತಳಿಗಳ ಕುರಿತಾಗಿ ಹೆಚ್ಚು ಅಧ್ಯಯನ ಸಹ ಆಗಿಲ್ಲ. ನೀವು ನಿಮ್ಮ ಪರಿಚಯದ ಯಾವ ಮಾಹಿತಿಯನ್ನೂ ನಮಗೆ ನೀಡಿಲ್ಲ. ನಾವು ವಿಳಾಸವನ್ನು ನೀಡಿದಾಗ ಅವರಿಗೊಂದು ಮಾಹಿತಿಯನ್ನೂ ನೀಡದೆ ಅವರ ಊರಿಗೆ ಹೋಗಿ ತೊಂದರೆ ಕೊಡುವವರಿದ್ದಾರೆ. ಫೋನ್ ಸಂಖ್ಯೆ ನೀಡಿದರೆ, ಮಿಸ್ಡ್ ಕಾಲ್ ಕೊಡುವವರು, ಹೊತ್ತಲ್ಲದ ಹೊತ್ತಿನಲ್ಲಿ ಫೋನ್ ಮಾಡುವವರು ಇದ್ದಾರೆ. ಹೀಗಾಗಿ ಅನೇಕರು ನಮ್ಮ ನಂಬರ್ ಕೊಡಬೇಡಿ ಎನ್ನುವ ತೀರ್ವನಕ್ಕೆ ಬಂದಿದ್ದಾರೆ. ದಯವಿಟ್ಟು ಇವರಾರಿಗೂ ತೊಂದರೆ ಕೊಡುವುದಿಲ್ಲ ಎಂದು ಭಾವಿಸಿದ್ದೇನೆ.

    ಅನಂತ ಜವಳಿ 9448554514; ಬಿ ಆರ್ ಕೃಷ್ಣ 08182234466, 9449742477, 9480672599; ಮಹಾಂತೇಶ್ ಡಿ ಜೆ 9902887300; ಸಿಎಂ ಮುನಿವೆಂಕಟಪ್ಪ 9379099550, 9845246690; ಅಶೋಕ ವಿ 9481822038; ವಿಶ್ವೇಶ್ವರ ಹೆಗಡೆ ಅಂಚೆಮನೆ 08283245505; ದೀವರಗದ್ದೆ ಸುಬ್ಬಣ್ಣ 08283260245;

    ವಾರಣಾಸಿ ಹಲಸು ಬೆಳೆಗಾರರ ಸಂಘ 08255- 270254, 270686; ಹಲಸು ಮಾದಯ್ಯ 9448244634; ನಾರಾಯಣ ಸ್ವಾಮಿ 8277450107; ಸಖರಾಯಪಟ್ಣ ಶಿವಣ್ಣ9481409660; ಜಾಕ್ ಅನಿಲ ಕಬಕ 9448778497; ವಾಸು 9916013328; ಜಯದೇವ 8762287457; ಈಶ್ವರಪ್ಪ ಬಿಸ್ಲೇಹಳ್ಳಿ 9480116936; ದೊಡ್ಡಬಸವಯ್ಯ 08263-234244; ಖಂಡಿಗೆ ಕೃಷ್ಣಭಟ್ 08173-247333, 247001; ಎಚ್ ಆರ್ ನಾಯಕ್ 9448999234 9448321919; ಹೊಯ್ಸಳ ಅಪ್ಪಾಜಿ 9449462397; ಡಾ. ಪ್ರಕಾಶ ಪಾಟೀಲ್ 080-28466421/22—273; ಸಿದ್ದಪ್ಪ ಕಾಚೋಹಳ್ಳಿ 9141585878; ಬೈರಾರೆಡ್ಡಿ 9448059865; ಎಳನೀರುಗುಂಡಿ ಚಂದ್ರಶೇಖರ್ 92426137407; ಪರಮಶಿವಯ್ಯ 9591024999; ಶರತ್ ಹೊಳೆನರಸೀಪುರ 9731504381. ಸಿದ್ದವನ ನರ್ಸರಿ ಧರ್ಮಸ್ಥಳ, ಜಿಕೆವಿಕೆ ಹಲಸು ವಿಭಾಗ ಇಲ್ಲೂ ಸಹಾ ನೀವು ವಿಚಾರಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts