More

    ರೈತರ ಜಮೀನಿಗೆ ನೀರು ಕಲ್ಪಿಸೋಣ

    ಹುನಗುಂದ: ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ಹಾಗೂ ಇಸ್ರೇಲ್ ಮಾದರಿಯ ಮರೋಳ ಏತ ನೀರಾವರಿ 2ನೇ ಹಂತದ ಹನಿ ನೀರಾವರಿ ಯೋಜನೆ ಕಾಮಗಾರಿಯೂ ಗುತ್ತಿಗೆ ಪಡೆದ ಕಂಪನಿಗಳ ನಿರ್ಲಕ್ಷೃದಿಂದ ಸಂಪೂರ್ಣ ಕಳಪೆಯಾಗಿದ್ದು, ಸದ್ಯ ವಾಲ್ಮಿ ಸಂಸ್ಥೆಯ ಸಹಕಾರದೊಂದಿಗೆ ಮತ್ತೆ ಹನಿ ನೀರಾವರಿ ಯೋಜನೆಗೆ ಜೀವ ತುಂಬವ ಮೂಲಕ ರೈತರ ಜಮೀನಿಗೆ ನೀರು ತರುವ ಕಾರ್ಯ ಮಾಡೋಣ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಧಾರವಾಡದ ನೆಲ ಮತ್ತು ಜಲ ನಿರ್ವಹಣೆ (ವಾಲ್ಮಿ) ಸಂಸ್ಥೆ ಶುಕ್ರವಾರ ನಡೆಸಿದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ತಾಲೂಕಿನ 60 ಸಾವಿರ ಹೆಕ್ಟೇರ್ ಪ್ರದೇಶಕ್ಕೆ 870 ಕೋಟಿ ರೂ. ಅನುದಾನದಲ್ಲಿ ಗುತ್ತಿಗೆ ಪಡೆದ ಕಂಪನಿಗಳ ತಾಂತ್ರಿಕ ಮತ್ತು ಇನ್ನಿತರ ಉದ್ದೇಶದಿಂದ ಲೋಕಾರ್ಪಣೆಗೊಂಡು ಮೂರು ವರ್ಷಗಳು ಕಳೆದರೂ ಯಾವ ರೈತರಿಗೂ ಸಮರ್ಪಕ ನೀರು ಬರುತ್ತಿಲ್ಲ. ಮಹಾರಾಷ್ಟ್ರದ ಓಜಾರ ಹನಿ ನೀರಾವರಿ ಯೋಜನೆಯಂತೆ ಮರೋಳ ಹನಿ ನೀರಾವರಿ ಯೋಜನೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಲು ವಾಲ್ಮಿ ಸಂಸ್ಥೆಯು ಈ ಯೋಜನೆ ಪುಶ್ಚೇತನಕ್ಕೆ ಪೂರ್ಣ ಪ್ರಮಾಣದ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಗುತ್ತಿಗೆ ಪಡೆದ ಕಂಪನಿಗಳು, ಅಧಿಕಾರಿಗಳು ಮತ್ತು ರೈತರ ಸಹಕಾರ ಅಗತ್ಯವಾಗಿದೆ ಎಂದರು.

    ನೆಲ-ಜಲ ಸಂರಕ್ಷಣಾ ಸಂಸ್ಥೆ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಮಾತನಾಡಿ, ರಾಮಥಾಳ ಹನಿ ನೀರಾವರಿ ಯೋಜನೆ ವಿಲತೆ ಕುರಿತು ಗುತ್ತಿಗೆ ಪಡೆದ ಜೈನ ಮತ್ತು ನೆಟಾಪೇಮ್ ಕಂಪನಿಗಳ ಅಧಿಕಾರಿಗಳೊಂದಿಗೆ 19 ಅಂಶಗಳ ಮುಂದಿಟ್ಟುಕೊಂಡು ಚರ್ಚೆ ಮಾಡಲಾಗಿದೆ. ಸದ್ಯ ರೈತರ ಮತ್ತು ನೀರು ಬಳಕೆದಾರರ ಸಂಘದ ಅಧ್ಯಕ್ಷರಿಂದ ಯೋಜನೆಯ ವಾಸ್ತವ ಸ್ಥಿತಿಯ ತಿಳಿದುಕೊಂಡಿದ್ದೇನೆ. ಯೋಜನೆಯ ತಾಂತ್ರಿಕ ಮತ್ತು ಇನ್ನಿತರ ದೋಷಗಳ ಕುರಿತು ಗಂಭೀರವಾಗಿ ಪರಿಗಣಿಸಿ ಸರ್ಕಾರಕ್ಕೆ ವರದಿ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಈ ಯೋಜನೆಯ ಯಶಸ್ವಿ ಬಗ್ಗೆ ಮಾಹಿತಿ ಪಡೆಯಲಾಗುವುದು. ಕಂಪನಿ ಸಿಬ್ಬಂದಿ ಮತ್ತು ರೈತರು ಜತೆಗೆ ನಮ್ಮ ವಾಲ್ಮಿ ಸಂಸ್ಥೆ ಸಹಯೋಗದಲ್ಲಿ ಪ್ರತಿ ಜೋನ್ ವೈಸ್ ರೈತರ ಸಭೆ ನಡೆಸಿ ರೈತರ ಭೂಮಿಗೆ ನೀರು ಹರಿಸುವ ಮಹತ್ವದ ಕಾರ್ಯವನ್ನು ಮಾಡೋಣ ಎಂದರು.

    ತಹಸೀಲ್ದಾರ್ ಬಸವರಾಜ ನಾಗರಾಳ, ವಾಲ್ಮಿ ಸಂಸ್ಥೆ ಇಂಜಿನಿಯರ್ ಬಸವರಾಜ ಬಂಡಿವಡ್ಡರ, ಕೆಬಿಜೆಎನ್‌ಎಲ್ ಇಂಜಿನಿಯರ್ ಟಿ. ಬಸವರಾಜ ಮತ್ತು ಸುರೇಶ ಕುಲಕರ್ಣಿ, ಮುಖಂಡರಾದ ಅಜ್ಜಪ್ಪ ನಾಡಗೌಡ, ಲಿಂಬಣ್ಣ ಮುಕ್ಕಣ್ಣವರ ನೀರು ಬಳಕೆದಾರರ ಸಂಘದ ಅಧ್ಯಕ್ಷರಾದ ಶೇಖರಪ್ಪ ಬಾದವಾಡಗಿ, ಎಸ್.ಸಂದಿಗವಾಡ, ಮಹೇಶ ಬೆಳ್ಳಿಹಾಳ, ಬಸವರಾಜ ಗೊಣ್ಣಾಗರ ಸೇರಿ ಅನೇಕರು ಇದ್ದರು.

    ಇಸ್ರೇಲ್ ಮಾದರಿ ಏಷ್ಯಾ ಖಂಡದ ಅತ್ಯಂತ ದೊಡ್ಡ ಹನಿ ನೀರಾವರಿ ಯೋಜನೆಯೂ ಕೇವಲ ಭಾಷಣದ ವಸ್ತುವಾಗಬಾರದು. ರೈತರ ಬದುಕನ್ನು ಹಸನಗೊಳಿಸುವ ಬಂಗಾರ ಚಿಂತನೆಯಾಗಬೇಕು. ಈ ಮಹತ್ವ ಪೂರ್ಣ ಯೋಜನೆಯ ತಾಂತ್ರಿಕ ಮತ್ತು ಸಾಮಾಜಿಕ ತೊಡಕುಗಳನ್ನು ನಿಮ್ಮೆಲ್ಲರ ಸಹಕಾರ ಹಾಗೂ ಸರ್ಕಾರದ ಮಾರ್ಗಸೂಚಿಯಂತೆ ವಾಲ್ಮಿ ಸಂಸ್ಥೆ ಬಗೆಹರಿಸಿ ರೈತರ ಜಮೀನಗಳಿಗೆ ನೀರು ತರುವ ಕಾರ್ಯ ಮಾಡಲಾಗುವುದು.
    ಬಸವರಾಜ ಬಂಡಿವಡ್ಡರ, ಇಂಜಿನಿಯರ್ ವಾಲ್ಮಿ ಸಂಸ್ಥೆ ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts