More

    ಮೀಸಲಾತಿಗಾಗಿ ಸರ್ಕಾರಕ್ಕೆ ಒತ್ತಾಯಿಸೋಣ

    ಹುನಗುಂದ: ಶಿಕ್ಷಣ, ಸಂಘಟನೆ ಮತ್ತು ಹೋರಾಟ ನಮ್ಮ ಸಮುದಾಯಕ್ಕೆ ಕಲಿಸುವ ಮಹಾದಾಸೆಯಿಂದ ಮೂರು ವರ್ಷಗಳಿಂದ ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಮಾಡುತ್ತಾ ಬರಲಾಗುತ್ತಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಶ್ರೀಗಳು ಹೇಳಿದರು.

    ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ 175 ತಾಲೂಕಿನ ವಾಲ್ಮೀಕಿ ಜನಾಂಗದವರು ಸೇರಬೇಕು. ಜನಸಂಖ್ಯೆಗೆ ಅನುಗುಣವಾಗಿ ನಮ್ಮ ಪಾಲಿನ ಶೇ.7.5 ಮೀಸಲಾತಿಯನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸೋಣ ಎಂದು ಹೇಳಿದರು.

    ಸಮಾಜದ ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಆರ್.ಜಿ. ಸನ್ನಿ ಮಾತನಾಡಿ, ಸಮುದಾಯ ಜನರನ್ನು ಧಾರ್ಮಿಕ ತಳಹದಿಯಲ್ಲಿ ಒಗ್ಗೂಡಿಸಿ ನಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಿರುವ ಶ್ರೀಗಳಿಗೆ ನಮ್ಮ ಸಮುದಾಯದ ಸಂಪೂರ್ಣ ಬೆಂಬಲ ಇದೆ ಎಂದರು.

    ವಾಲ್ಮೀಕಿ ಸೇವಾ ಸಮಿತಿಗೆ ಐದು ಜನರನ್ನು ಆಯ್ಕೆ ಮಾಡಲಾಯಿತು. ವಿ.ಮ.ಬ್ಯಾಂಕ್ ನಿರ್ದೇಶಕ ಸೋಮಶೇಖರ ಬಲಕುಂದಿ, ಶಿಕ್ಷಕ ವಿ.ಜಿ.ಗುಡದನ್ನವರ , ಎಸ್.ಬಿ. ಹೊಸಮನಿ, ಪ್ರಕಾಶ ಗುಳೇದಗುಡ್ಡ, ವಾಲ್ಮೀಕಿ ಯುವ ವೇದಿಕೆ ತಾಲೂಕು ಅಧ್ಯಕ್ಷ ಸಿದ್ದಪ್ಪ ಜಾಲಿಗಿಡದ, ಯಂಕನಗೌಡ ಗುಡದನ್ನವರ, ಆರ್.ಎಸ್.ಪೂಜಾರಿ, ವಜ್ರಪ್ಪ ಪೂಜಾರಿ, ಮೌನೇಶ ತಳವಾರ, ಸುರೇಶ ಗೌಡರ, ಶಂಕ್ರಪ್ಪ ತಳವಾರ, ಮಂಜು ಪೂಜಾರಿ, ಬಸವರಾಜ ಬಾಡವಾಳ, ಶಿಕ್ಷಕ ಎಚ್.ಟಿ. ರಂಗಾಪುರ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts