More

    ನಾಯಕ ಸಮುದಾಯಕ್ಕೆ ಸೂಕ್ತ ಸ್ಥಾನ ನೀಡಿ

    ಚಳ್ಳಕೆರೆ: ರಾಜ್ಯದಲ್ಲಿ 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಾಯಕ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಎಲ್ಲ ಹಂತದಲ್ಲೂ ಸೂಕ್ತ ಸ್ಥಾನ ನೀಡಬೇಕು ಎಂದು ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.

    ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಫೆ. 8 ಮತ್ತು 9ರಂದು ನಡೆಯಲಿರುವ ವಾಲ್ಮೀಕಿ ಜಾತ್ರೆ ಅಂಗವಾಗಿ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಜಾತ್ರಾ ಮಹೋತ್ಸವದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.

    ಪುಣ್ಯಾನಂದ ಸ್ವಾಮೀಜಿಗಳ 16 ನೇ ಪುಣ್ಯಾರಾಧನೆ, ಪ್ರಸ್ತುತ ಸ್ವಾಮೀಜಿಗಳ 15 ನೇ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

    ಬಹುವರ್ಷಗಳ ಮೀಸಲಾತಿಗಾಗಿ ಸುಮಾರು 251 ದಿನ ಧರಣಿ ಮಾಡಿದ್ದರ ಪ್ರತಿಫಲವಾಗಿ, ಸಿಎಂ ಬೊಮ್ಮಾಯಿ ಬೇಡಿಕೆ ಈಡೇರಿಸುವುದಾಗಿ ತಿಳಿಸಿದ್ದಾರೆ. ಈ ಮೀಸಲಾತಿ ಹೆಚ್ಚಳವನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಬಳಸಿಕೊಳ್ಳಬೇಕು ಎಂದರು.

    ತಹಸೀಲ್ದಾರ್ ಎನ್. ರಘುಮೂರ್ತಿ, ಸಮುದಾಯದ ಹಿರಿಯ ಮುಖಂಡ ಎಚ್.ಎಂ. ಮಲ್ಲಪ್ಪ ನಾಯಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ, ಸೂರನಾಯಕ, ಎಲ್‌ಐಸಿ ತಿಪ್ಪೇಸ್ವಾಮಿ, ಚನ್ನಂಗಿ ರಂಗಸ್ವಾಮಿ, ಸಿ.ಟಿ. ವೀರೇಶ್, ಟಿ.ಜೆ. ತಿಪ್ಪೇಸ್ವಾಮಿ, ರಾಜಣ್ಣ, ಎಂ. ಚೇತನ್‌ಕುಮಾರ್, ದೊರೆ ನಾಗರಾಜ, ಸೂರ್ಯಪ್ರಭಾ, ಕೆಇಬಿ ನಾಗರಾಜ, ಸ್ವಪ್ನ ಲೋಕೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts