More

    ರಾಮಾಯಣ ಮಹಾಕಾವ್ಯ ಎಲ್ಲರಿಗೂ ಸ್ಫೂರ್ತಿ

    ಹುಮನಾಬಾದ್: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಇಂದಿಗೂ ಭಾರತೀಯರಿಗೆ ಸ್ಫೂರ್ತಿ ಹಾಗೂ ಭಕ್ತಿಯ ಸಂಕೇತವಾಗಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

    ಪಟ್ಟಣದ ಕೋಳಿವಾಡ ಹಾಗೂ ವಾಂಜ್ರಿ ಬಡಾವಣೆಯಲ್ಲಿ ಶನಿವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಪ್ರತಿಮೆಗೆ ಪೂಜೆ ಸಲ್ಲಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಾಲ್ಮೀಕಿ ಒಬ್ಬ ಋಷಿ ಹಾಗೂ ಸಂಸ್ಕೃತ ಕವಿ. ಅಲ್ಲದೆ ರಾಮಾಯಣ ಮಹಾಕಾವ್ಯದ ಮಹಾಕವಿ. ಅವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಜೀವನ ಸಾಗಿಸಬೇಕೆಂದು ಎಂದು ಹೇಳಿದರು.

    ಹಳ್ಳಿಖೇಡ(ಕೆ) ವಾಡಿ ವಾಲ್ಮೀಕಿ ಆಶ್ರಮದ ಶ್ರೀ ದತ್ತಾತ್ರೇಯ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ಅಂಜುಮ್ ತಬಸುಮ್​ ಮಾತನಾದರು.

    ಗ್ರೇಡ್-೨ ತಹಸೀಲ್ದಾರ್ ಮಂಜುನಾಥ ಪಂಚಾಳ, ತಾಪಂ ಇಒ ಗೋವಿಂದ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಲಿಂಗರಾಜ ಅರಸ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಕುಮಾರ ಬಿರಾದರ, ಹಿಂದುಳಿದ ವರ್ಗಗಳ ಅಧಿಕಾರಿ ವಿಠ್ಠಲ್ ಸೇಡಂಕರ, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ, ಬಿಜೆಪಿ ಮಂಡಲ ಅಧ್ಯಕ್ಷ ಪ್ರಭಾಕರ ನಾಗರಾಳೆ, ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಸೀಗಿ, ಪ್ರಮುಖರಾದ ಸಂತೋಷ ಪಾಟೀಲ್, ಅಶೋಕ ಹಣಕುಣಿ, ಸಂತೋಷ ಸಂಗಮï, ಕಿಶೋರ ನಟ್ಟಿ, ಮಚಕುರಿ ಈರಪ್ಪ, ರಾಜಣ್ಣ ಪೋಲದಾಸ, ವಾಲ್ಮೀಕಿ ಪೋಲದಾಸ, ಶಿವರಾಜ ರಾಜೋಳೆ ಇತರರಿದ್ದರು.
    ಸಮಾಜದ ಮುಖಂಡ ನಾಗಭೂಷಣ ಸಂಗಮ ನಿರೂಪಣೆ ಮಾಡಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts