More

    ಮಾನವೀಯ ಸಾಮರಸ್ಯವೇ ನಿಜವಾದ ಧರ್ಮ ; ನೀಲಗಲ್ ಡಾ.ಪಂಚಾಕ್ಷರಿ ಸ್ವಾಮೀಜಿ

    ದೇವದುರ್ಗ: ಒಬ್ಬರನ್ನೊಬ್ಬರು ಅರಿತು ಬದುಕುವುದೇ ನಿಜವಾದ ಧರ್ಮ. ಮಾನವೀಯತೆ, ಸಾಮಾಜಿಕ ಸಾಮರಸ್ಯ ಪ್ರತಿಯೊಂದು ಧರ್ಮದ ಮೂಲವಾಗಬೇಕು ಎಂದು ನೀಲಗಲ್ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಪಟ್ಟಣದ ಹಜರತ್ ಸೈಯದ್ ಜಹೀರುದ್ದೀನ್ ಪಾಷಾ ಖಾದ್ರಿ ದರ್ಗಾದಲ್ಲಿ ಆಯೋಜಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಇಸ್ಲಾಂ ಸೇರಿ ಎಲ್ಲ ಧರ್ಮಗಳೂ ಶಾಂತಿಯ ಸಂಕೇತವಾಗಿವೆ. ದೇಶದ ಹಲವೆಡೆ ಹಿಂದು-ಮುಸ್ಲಿಮರು ಐಕ್ಯತೆಯಿಂದ ಬದುಕುತ್ತಿದ್ದಾರೆ. ಇದಕ್ಕೆ ಇಲ್ಲಿ ನಡೆಯುತ್ತಿರುವ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು. ಮುಸ್ಲಿಂ ಮುಖಂಡ ಇಕ್ಬಾಲ್ ಸಾಬ್ ಮಾತನಾಡಿ, ಸೈಯದ್ ಜಹೀರ್ ಪಾಷಾ ಅವರು ಕೂಡ ಸಮಾಜದಲ್ಲಿ ಸಾಮಾರಸ್ಯ ಮೂಡಿಸಲು ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು.

    ನಂತರ 16 ಹಿಂದು ಜೋಡಿಗಳು ಹಾಗೂ ಇಬ್ಬರು ಮುಸ್ಲಿಂ ಜೋಡಿಗಳು ಅವರವರ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶ್ರೀ ಹಜರತ್ ಖಾಜಾ ಸೈಯದ್ ಷಾ ಸಾಹೇಬ್ ಫೀರ್ ಮಹ್ಮದ್ ಕಾರ್ಯಕ್ರಮ ಉದ್ಘಾಟಿಸಿದರು. ದರ್ಗಾದ ಶ್ರೀ ಸೈಯ್ಯದ್ ಜಹೀರ್ ಪಾಷಾ ತಾತನವರು ಸಾನ್ನಿಧ್ಯ ವಹಿಸಿದ್ದರು. ಇಲಕಲ್‌ನ ಶ್ರೀ ಹಜರತ್ ಸೈಯದ್ ಷಾ ಮುರ್ತುಜ್ ಖಾದ್ರಿ, ದೇವದುರ್ಗ ಶಿಖರಮಠದ ಕಪಿಲ ಸಿದ್ಧ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಮುಂಡರಗಿ ಸದಾಶಿವಯ್ಯ ತಾತ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts