More

    ಹುಮನಾಬಾದ್ ತಹಸೀಲ್ದಾರ್ ಮೇಲಿನ ಹಲ್ಲೆ ಖಂಡಿಸಿ ಸಿಂಧನೂರಿನಲ್ಲಿ ಬೃಹತ್ ಪ್ರತಿಭಟನೆ

    ಸಿಂಧನೂರು: ಹುಮನಾಬಾದ್ ತಹಸೀಲ್ದಾರ್ ಪ್ರದೀಪಕುಮಾರ ಸೇರಿ ರಾಜ್ಯದಲ್ಲಿ ವೀರಶೈವ ಸಮುದಾಯದವರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳನ್ನು ಖಂಡಿಸಿ ತಾಲೂಕು ವೀರಶೈವ ಸಂಘ, ಜಂಗಮ ಸಮುದಾಯ ಹಾಗೂ ಸಮಸ್ತ ವೀರಶೈವ ಸಮುದಾಯ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿತು.

    ಹುಮನಾಬಾದ್ ತಹಸೀಲ್ದಾರ್ ಕರ್ತವ್ಯ ನಿರತರಾಗಿದ್ದ ಸಂದರ್ಭ ಹಲವರು ಅಮಾನುಷವಾಗಿ ಹಲ್ಲೆ ಮಾಡಿದ್ದು ಅಕ್ಷಮ್ಯ ಅಪರಾಧವಾಗಿದೆ. ಇದೇ ರೀತಿ ರಾಜ್ಯದಲ್ಲಿ ಕೂಡ ವೀರಶೈವ ಸಮುದಾಯದ ನೌಕರರ ಮೇಲೆ ನಿರಂತರ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ. ಸೂಕ್ತ ಕ್ರಮ ಇಲ್ಲದಿರುವುದರಿಂದ ಇಂಥ ಘಟನೆಗಳು ಮರುಕಳಿಸುತ್ತಿವೆ. ರಾಜ್ಯ ಸರ್ಕಾರ ಕೂಡಲೇ ತಹಸೀಲ್ದಾರ್ ಮೇಲಿನ ಹಲ್ಲೆ, ಇತರ ಹಲ್ಲೆ, ದೌರ್ಜನ್ಯಗಳನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಗುಂಡಾ ಕಾಯ್ದೆಯಡಿ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.

    ರಂಭಾಪುರಿ ಶಾಖಾಮಠದ ಸೋಮನಾಥ ಸ್ವಾಮೀಜಿ, ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ವೆಂಕಟಗಿರಿ ಕ್ಯಾಂಪ್‌ನ ಸದಾನಂದಸ್ವಾಮೀಜಿ, ಅಮರಯ್ಯಸ್ವಾಮಿ ಅಲಬನೂರು, ಶಾಸಕ ವೆಂಕಟರಾವ ನಾಡಗೌಡ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮರೇಗೌಡ ವಿರೂಪಾಪುರ, ಜಿಪಂ ಮಾಜಿ ಸದಸ್ಯರಾದ ಎನ್.ಶಿವನಗೌಡ ಗೊರೇಬಾಳ, ಬಾಬುಗೌಡ ಬಾದರ್ಲಿ, ಬಸವರಾಜ ಹಿರೇಗೌಡ್ರ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ವೀರಶೈವ ಸಮುದಾಯ ತಾಲೂಕು ಅಧ್ಯಕ್ಷ ಅಶೋಕಗೌಡ ಗದ್ರಟಗಿ, ವೀರಶೈವ ಮಹಸಭಾ ತಾಲೂಕು ಅಧ್ಯಕ್ಷ ಶಿವಕುಮಾರ ಜವಳಿ, ಎನ್.ಅಮರೇಶ, ಜಂಗಮ ಸಮುದಾಯ ಅಧ್ಯಕ್ಷ ಮಲ್ಲಿನಾಥಶಾಸ್ತ್ರಿ, ಹಂಪಯ್ಯಸ್ವಾಮಿ ರ‌್ಯಾವಿಹಾಳ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ವೀರಶೈವ ಸಮುದಾಯ ಯುವ ಘಟಕ ಅಧ್ಯಕ್ಷ ಶಿವರಾಜ ಪಾಟೀಲ್, ಬಸವರಾಜಸ್ವಾಮಿ ಹಸಮಕಲ್, ರವಿ ಹಿರೇಮಠ, ಸರಸ್ವತಿ ಪಾಟೀಲ್, ಮಮತಾ ಹಿರೇಮಠ, ಜೆ.ದೇವಿರಮ್ಮ, ದೊಡ್ಡನಗೌಡ ಕಲ್ಲೂರು, ಆದಿಬಸವರಾಜ ಇತರರಿದ್ದರು.

    ರ‌್ಯಾಲಿ: ಘಟನೆ ಖಂಡಿಸಿ 8 ಸಾವಿರಕ್ಕೂ ಅಧಿಕ ಸಂಖ್ಯೆಯ ವೀರಶೈವ ಸಮುದಾಯದ ರ‌್ಯಾಲಿ ಕುಷ್ಟಗಿ ರಸ್ತೆ ಮಾರ್ಗದ ಶ್ರೀ ಗಣೇಶ ದೇವಸ್ಥಾನದಿಂದ ಬಸವವೃತ್ತ, ಗಾಂಧಿ ಸರ್ಕಲ್‌ವರಗೆ ನಡೆಯಿತು. ರ‌್ಯಾಲಿಯುದ್ದಕ್ಕೂ ಹಲ್ಲೆ, ದೌರ್ಜನ್ಯಗಳ ವಿರುದ್ಧ ಆಕ್ರೋಶ ವ್ಯಕ ್ತವಾಯಿತು. ರ‌್ಯಾಲಿಯಲ್ಲಿ 8 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರೂ ಸಂಚಾರಕ್ಕೆ ವ್ಯತ್ಯಯವಾಗದಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts