More

    ಶರಣರ ವಿಚಾರ ಅರಿಯಲು ವಚನಗಳೇ ಆಧಾರ

    ಹುಲಸೂರು: ಅಮೆರಿಕ ಹಾಗೂ ಫ್ರಾನ್ಸ್ಗಿಂತಲೂ ಮೊದಲು ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ನೆಲದಲ್ಲಿ ಸಮಾನತೆ, ಸ್ವಾತಂತ್ರ್ಯಮನೋಭಾವ ಜತೆಗೆ ಮಹಿಳಾ ಸಮಾನತೆ ಕುರಿತು ಕ್ರಾಂತಿ ನಡೆದಿದೆ ಎಂದು ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ನುಡಿದರು.

    ಪಟ್ಟಣದ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ಶರಣ ವಿಜಯೋತ್ಸವ, ನಾಡಹಬ್ಬ, ಹುತಾತ್ಮ ದಿನ ನಿಮಿತ್ತ ಮಂಗಳವಾರ ರಾತ್ರಿ ಪೂರ್ವಭಾವಿ ಸಭೆ ನಡೆಸಿದ ಅವರು, ಮಹಿಳೆಯರು ಎಂದರೆ ಪರಮಾತ್ಮನ ಸಮ. ಶರಣರು ಮಹಿಳೆ-ಪುರುಷರನ್ನು ಸಮಾನವಾಗಿ ಕಾಣುತ್ತಿದ್ದರು. ಶರಣರ ತತ್ವಾದರ್ಶ, ವಿಚಾರಧಾರೆಗಳನ್ನು ಅರಿಯಲು ವಚನಗಳೇ ಅಧಾರ ಎಂದರು.

    ಲಿಂಗಾಯತ ಧರ್ಮೀಯರ ಮಹತ್ವದ ದಿನವಾದ ಶರಣರ ಹುತಾತ್ಮ ದಿನ ನಿಮಿತ್ತ ಅ.೧೫ರಿಂದ ೨೪ರವರೆಗೆ ಬಸವಕಲ್ಯಾಣದ ಹರಳಯ್ಯ ಗವಿಯಲ್ಲಿ ನಡೆಯುವ ಸಂಜೆ ೬ಕ್ಕೆ ಸಾಂಸ್ಕೃತಿಕ, ನಾಟಕ ಪ್ರದರ್ಶನ, ವಚನ ಸಂಗೀತ, ನೃತ್ಯ, ಭಜನೆ, ಕೋಲಾಟ, ಮಕ್ಕಳ ಸಂಸತ್ತು, ವಚನ ಚಿಂತನ ಸೇರಿ ಅನೇಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶರಣರ ವಿಚಾರಗಳನ್ನು ಜಗತ್ತಿನ ಜನರಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.

    ಗುರುಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕಲ್ಯಾಣ ಕ್ರಾಂತಿ ಮಹತ್ವದ ದಿನ. ಎಲ್ಲ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಭಾಗವಹಿಸಬೇಕು ಎಂದರು.

    ಶರಣೆ ನಿರ್ಮಲಾ ಶಿವಣಕರ, ಲಕ್ಷ್ಮೀ ಅಕ್ಕ, ಶಿವಕುಮಾರ ಬಿರಾದಾರ, ರವಿ ಕೋಳಕೂರ, ಆಕಾಶ ಖಂಡಾಳೆ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕುಡೆ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಪ್ರವೀಣ ಕಾಡಾದಿ, ಶಿವಲಿಂಗಯ್ಯ ಕನ್ನಾಡೆ, ಚಂದ್ರಶೇಖರ ತೊಗರಗೆ, ಶ್ರೀದೇವಿ ನಿಡೋದೆ, ರೇಖಾ ಕಾಡಾದಿ, ಜಗನಾಥ ಪಾಟೀಲ್, ಸಂಗಮೇಶ ಔಸೆ, ದತ್ತು, ಶಿವಕುಮಾರ, ಸಚಿನ್ ಕೌಟೆ ಇತರರಿದ್ದರು. ಆಕಾಶ ಖಂಡಾಳೆ ಸ್ವಾಗತಿಸಿದರು. ರಾಜಕುಮಾರ ತೊಂಡಾರೆ ನಿರೂಪಣೆ ಮಾಡಿದರು.

    ಶರಣ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ವಚನಗಳಲ್ಲಿ ಅದ್ಭುತ ಶಕ್ತಿ ಇದೆ. ಪ್ರತಿದಿನ ಬೆಳಗ್ಗೆ ಒಂದು ವಚನ ಓದಿ ಸಾರಾಂಶ ತಿಳಿದುಕೊಂಡರೆ ಜೀವನ ಸಾರ್ಥಕ.
    | ಪೂಜ್ಯ ಡಾ.ಗಂಗಾಂಬಿಕೆ ಅಕ್ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts