More

    ಅಪಾರ ಪ್ರಮಾಣದ ಗೋವಿನಜೋಳ, ಹತ್ತಿ ಬೆಂಕಿಗಾಹುತಿ

    ಸವಣೂರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಉಂಟಾದ ಬೆಂಕಿಯು, 47 ಎಕರೆ ಜಮೀನಿನಲ್ಲಿ ಬೆಳೆದ ಗೋವಿನಜೋಳ ಹಾಗೂ 35ಕ್ವಿಂಟಾಲ್ ಹತ್ತಿ ಫಸಲನ್ನು ಆಪೋಸನ ಪಡೆದಿದೆ. ಜತೆಗೆ 200 ಸ್ಪಿಂಕ್ಲರ್ ಪೈಪ್​ಗಳೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕರಗಿಹೋದ ಘಟನೆ ತಾಲೂಕಿನ ಹತ್ತಿಮತ್ತೂರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.

    ಹತ್ತಿಮತ್ತೂರ ಗ್ರಾಮದ, ತಾಪಂ ಸದಸ್ಯ ಬಸವರಾಜ ಕೋಳಿವಾಡ ಹಾಗೂ ಅವರ ತಂದೆ ಚಂದ್ರಶೇಖರ ಕೋಳಿವಾಡ ಅವರ 35 ಎಕರೆ ಮತ್ತು ಪ್ರಮೋದ ಚೂರಿ, ಮಹಲಿಂಗಪ್ಪ ಚೂರಿ, ಮಲ್ಲಪ್ಪ ಚೂರಿ ಸೇರಿ 12 ಎಕರೆ ಜಮೀನಿನಲ್ಲಿ ಬೆಳೆದಿದ್ದ ಗೋವಿನಜೋಳ ತೆನೆಗಳ ರಾಶಿ ಒಟ್ಟಿದ್ದರು. ಅದೆಲ್ಲವೂ ಬೆಂಕಿಗೆ ಆಹುತಿಯಾಗಿದೆ. ಅಲ್ಲದೆ, ಬಸವರಾಜ ಕೋಳಿವಾಡ ಅವರ ಹೊಲದಲ್ಲಿನ ಗೋದಾಮಿಗೆ ಬೆಂಕಿ ವ್ಯಾಪಿಸಿ 200 ಸ್ಪಿಂಕ್ಲರ್ ಪೈಪ್, 35 ಕ್ವಿಂಟಾಲ್ ಹತ್ತಿ ಸಂಪೂರ್ಣ ಸುಟ್ಟಿದೆ. ಹೊಲದಲ್ಲಿನ ನೂರಾರು ಸಾಗವಾನಿ, ತೆಂಗಿನಮರಗಳಿಗೂ ಹಾನಿಯಾಗಿದೆ.

    ಸವಣೂರ ಅಗ್ನಿ ಶಾಮಕ ದಳದ ಜಿಲ್ಲಾ ಅಧಿಕಾರಿ ಸೋಮಶೇಖರ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts