More

    ಮೂವರು ನೈಜಿರಿಯನ್​ ಪ್ರಜೆಗಳನ್ನು ಬಂಧಿಸಿದ್ದಕ್ಕೆ ದೆಹಲಿ ಪೊಲೀಸರ ಮೇಲೆ ಹಲ್ಲೆ ಯತ್ನಿಸಿದ 100ಕ್ಕೂ ನೈಜೀರಿಯನ್ನರು

    ನವದೆಹಲಿ: ವೀಸಾ ಅವಧಿ ಮುಗಿದರೂ ಇಲ್ಲಿಯೇ ಉಳಿದುಕೊಂಡಿದ್ದ ಮೂವರು ನೈಜಿರಿಯನ್​ ಪ್ರಜೆಗಳನ್ನು ಬಂಧಿಸಿದ್ದಕ್ಕೆ ದಕ್ಷಿಣ ದೆಹಲಿಯ ನೆಬ್ ಸರಾಯ್ ಪ್ರದೇಶದಲ್ಲಿ ಶನಿವಾರ ಆಫ್ರಿಕನ್ ಮೂಲದ ಸುಮಾರು 100 ಪ್ರಜೆಗಳು ದೆಹಲಿ ಪೊಲೀಸರನ್ನು ಸುತ್ತುವರೆದು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

    ನಾರ್ಕೋಟಿಕ್ಸ್ ಸೆಲ್ ತಂಡವು ಶನಿವಾರ ಮಧ್ಯಾಹ್ನ 2.30ಕ್ಕೆ ನೆಬ್ ಸರಾಯ್‌ ಪ್ರದೇಶದಲ್ಲಿರುವ ರಾಜು ಪಾರ್ಕ್‌ಗೆ ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡುವ ಪ್ರಕ್ರಿಯೆಗೆ ಹೋಗಿತ್ತು. ಈ ವೇಳೆ ವೀಸಾ ಅವಧಿ ಮುಗಿದ ಮೂವರು ನೈಜೀರಿಯನ್ ಪ್ರಜೆಗಳನ್ನು ಬಂಧಿಸಿದರು. ಇದೇ ಸಂದರ್ಭದಲ್ಲಿ ಆಫ್ರಿಕನ್ ಮೂಲದ 100ಕ್ಕೂ ಹೆಚ್ಚು ಜನರ ಗುಂಪು ಪೊಲೀಸರನ್ನು ಸುತ್ತುವರೆದು ಪೊಲೀಸ್ ಕಾರ್ಯಾಚರಣೆಗೆ ಅಡ್ಡಿಪಡಿಸಿತು.

    ಪೊಲೀಸರು ಮತ್ತು ನೈಜಿರಿಯನ್​ ಪ್ರಜೆಗಳ ನಡುವಿನ ಘರ್ಷಣೆ ವೇಳೆ ಬಂಧಿತ ಮೂವರಲ್ಲಿ ಇಬ್ಬರು ತಪ್ಪಿಸಿಕೊಂಡರು. ಆದರೆ ಇಬ್ಬರಲ್ಲಿ ಓರ್ವ ಆರೋಪಿಯಾದ 22 ವರ್ಷದ ಫಿಲಿಪ್ ಎಂಬುವನನ್ನು ಮತ್ತೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಇದಾದ ಬಳಿಕ ನೆಬ್ ಸರಯ್​ ಪೊಲೀಸ್ ಠಾಣೆಯ ಜಂಟಿ ತಂಡ ಮತ್ತು ನಾರ್ಕೋಟಿಕ್ಸ್ ಸ್ಕ್ವಾಡ್ ಸಂಜೆ 6:30 ಕ್ಕೆ ಮತ್ತೆ ರಾಜು ಪಾರ್ಕ್‌ಗೆ ಭೇಟಿ ನೀಡಿ, ಓರ್ವ ಮಹಿಳೆ ಸೇರಿದಂತೆ ನಾಲ್ವರು ನೈಜೀರಿಯನ್ನರನ್ನು ಬಂಧಿಸಿದ್ದಾರೆ.

    ಬಂಧನಕ್ಕೆ ಪ್ರತೀಕಾರವಾಗಿ ಆಫ್ರಿಕನ್ ಮೂಲದ 150 ರಿಂದ 200 ಜನರು ಮತ್ತೆ ಪೊಲೀಸ್ ತಂಡವನ್ನು ಸುತ್ತುವರೆದು, ಬಂಧಿತರನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಯಶಸ್ವಿಯಾದರು ಮತ್ತು ಅಪರಾಧಿಗಳನ್ನು ನೆಬ್ ಸರೈ ಪೊಲೀಸ್ ಠಾಣೆಗೆ ಕರೆತಂದು ಗಡಿಪಾರು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. (ಏಜೆನ್ಸೀಸ್)

    ಸ್ಯಾಂಟ್ರೋ ರವಿ ‘ಪಿಂಪ್’ ಮಾತ್ರವಲ್ಲ… ಬಗೆದಷ್ಟೂ ಬಯಲಾಗ್ತಿದೆ ಈತನ ಕರಾಳ ಮುಖ…

    ತಿಂಗಳಿಗೆ 6 ಸಾವಿರ ರೂ. ಪಿಂಚಣಿ ಕೊಡಿ: ಸರ್ಕಾರಕ್ಕೆ ಬೋಳು ತಲೆ ಪುರುಷರ ಸಂಘದ ಒತ್ತಾಯ

    ಇನ್ನೇನು ಅಂತ್ಯಕ್ರಿಯೆ ನಡೆಯಬೇಕೆನ್ನುವಷ್ಟರಲ್ಲಿ ಕಣ್ತೆರೆದ ವೃದ್ಧೆ! ಮತ್ತೆ ಬದುಕಿದ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts