More

    ಪಿಪಿಪಿಯಲ್ಲಿ ಹುಬ್ಬಳ್ಳಿ ಟ್ರಕ್ ಟರ್ವಿುನಲ್

    ಹುಬ್ಬಳ್ಳಿ: ಹುಬ್ಬಳ್ಳಿ ಅಂಚಟಗೇರಿಯಲ್ಲಿ ಟ್ರಕ್ ಟರ್ವಿುನಲ್ ಕಮ್ ಲಾಜಿಸ್ಟಿಕ್ಸ್ ಪಾರ್ಕ್ ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)ದಡಿ ನಿರ್ವಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಡಿ. ದೇವರಾಜ ಅರಸು ಟ್ರಕ್ ಟರ್ವಿುನಲ್ ಅಧ್ಯಕ್ಷ ಡಿ.ಎಸ್. ವೀರಯ್ಯ ತಿಳಿಸಿದರು.

    ಅಂಚಟಗೇರಿಯಲ್ಲಿ ಉದ್ದೇಶಿತ ಟ್ರಕ್ ಟರ್ವಿುನಲ್ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಸಿದ್ಧಪಡಿಸಲಾಗಿರುವ ಪ್ರಸ್ತಾವನೆಗೆ ಟರ್ವಿುನಲ್​ನ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು. ನಂತರ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುವುದು. ಇದೇ ರೀತಿ ಮೈಸೂರು ನಂಜನಗೂಡು ರಸ್ತೆಯಲ್ಲಿ ಟ್ರಕ್ ಟರ್ವಿುನಲ್ ನಿರ್ವಣಕ್ಕೆ ಹಾಗೂ ಯಶವಂತಪುರ ಟ್ರಕ್ ಟರ್ವಿುನಲ್ ನವೀಕರಣ ಕಾಮಗಾರಿಗೆ ಪಿಪಿಪಿ ಮಾದರಿ ಅನುಸರಿಸಲಾಗುವುದು ಎಂದರು.

    ಪಿಪಿಪಿ ಮಾದರಿಗೆ ಸರ್ಕಾರ ಒಪ್ಪಿಗೆ ನೀಡಿದರೆ ತಕ್ಷಣ ಟೆಂಡರ್ ಪ್ರಕ್ರಿಯೆ ಜರುಗಿಸುತ್ತೇವೆ. ಇಲ್ಲವಾದಲ್ಲಿ ರಾಜ್ಯ ಬಜೆಟ್​ನಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರನ್ನು ಕೋರುತ್ತೇವೆ. ಹುಬ್ಬಳ್ಳಿ ಟ್ರಕ್ ಟರ್ವಿುನಲ್ ಕಮ್ ಲಾಜಿಸ್ಟಿಕ್ಸ್ ಪಾರ್ಕ್ ನಿರ್ವಣಕ್ಕೆ 228 ಕೋಟಿ ವೆಚ್ಚ ಬರಲಿದೆ ಎಂದು ಟೆಕ್ಸಮ್ ಸಂಸ್ಥೆ ಸಿದ್ಧಪಡಿಸಿದ ಕಾರ್ಯ ಸಾಧ್ಯತಾ ವರದಿಯಲ್ಲಿ ತಿಳಿಸಲಾಗಿದೆ. 2 ಸಾವಿರ ಟ್ರಕ್ ನಿಲುಗಡೆ ಸಾಮರ್ಥ್ಯದ ಲಾಜಿಸ್ಟಿಕ್ಸ್ ಪಾರ್ಕ್ ಇದಾಗಲಿದೆ ಎಂದು ತಿಳಿಸಿದರು.

    ಅಂಚಟಗೇರಿಯಲ್ಲಿ 56 ಎಕರೆ ಜಮೀನು ಮಂಜೂರಾಗಿದೆ. 4 ಎಕರೆ ಜಮೀನಿನ ತಕರಾರಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧಾರ ಕೈಗೊಳ್ಳಲಿದ್ದಾರೆ. ಉತ್ತಮ ಸಂಪರ್ಕ ರಸ್ತೆ, ಉಗ್ರಾಣ ಹಾಗೂ ಸಂಗ್ರಹ ವ್ಯವಸ್ಥೆ, ಕೋಲ್ಡ್ ಸ್ಟೋರೇಜ್, ಪೊಲೀಸ್ ಠಾಣೆ, ಪೆಟ್ರೋಲ್ ಬಂಕ್, ರೆಸ್ಟೋರೆಂಟ್, ಸ್ನಾನ-ಶೌಚಗೃಹ, ವಸತಿ ವ್ಯವಸ್ಥೆ, ಎಟಿಎಂ, ಮನೋರಂಜನಾ ಕೇಂದ್ರ, ಆಸ್ಪತ್ರೆ, ಇತ್ಯಾದಿ ಸೌಲಭ್ಯಗಳನ್ನೊಳಗೊಂಡ ಆಧುನಿಕ ಟ್ರಕ್ ಟರ್ವಿುನಲ್ ಇದಾಗಲಿದೆ ಎಂದು ವಿವರಿಸಿದರು.

    ಸುದ್ದಿಗೋಷ್ಠಿಯಲ್ಲಿ ಡಿ. ದೇವರಾಜ ಅರಸು ಟ್ರಕ್ ಟರ್ವಿುನಲ್ ನಿರ್ದೇಶಕ ಗೈಬುಸಾಬ ಹೊನ್ನ್ಯಾಳ, ಎಂಡಿ ಬಿ. ಪುರುಷೋತ್ತಮ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts