More

    ಹುಬ್ಬಳ್ಳಿಯಲ್ಲಿ ಹೈ ಅಲರ್ಟ್​- ಬೆಳ್ಳಂಬೆಳಗ್ಗೆಯೇ ಫೀಲ್ಡಿಗೆ ಇಳಿದ್ರು ಪೊಲೀಸರು: ಲಾಕ್​ಡೌನ್ ನಿಯಮ ಪಾಲಿಸಿದವರು ಲಾಠಿ ರುಚಿ ಅನುಭವಿಸಿದ್ರು!

    ಹುಬ್ಬಳ್ಳಿ: ನಗರದ ಮುಲ್ಲಾ ಓಣಿಯ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ದೃಢವಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಎರಡನೇ ಪ್ರಕರಣ ದಾಖಲಾದಂತಾಗಿದೆ. ಅಲ್ಲದೇ ಹುಬ್ಬಳ್ಳಿಯಲ್ಲಿ ಹೈ ಅಲರ್ಟ್ ಜಾರಿಯಲ್ಲಿದ್ದು, ಪೊಲೀಸರು ಬೆಳ್ಳಂಬೆಳಗ್ಗೆಯೇ ಫೀಲ್ಡಿಗಿಳಿದರಲ್ಲದೆ, ಅನಾವಶ್ಯಕ ತಿರುಗಾಟದಲ್ಲಿದ್ದವರಿಗೆ ಲಾಠಿ ರುಚಿ ತೋರಿಸಿದ್ರು. ಹೊಸ ಪ್ರಕರಣ ಪತ್ತೆಯಾದ ಕಾರಣ ನಗರದಾದ್ಯಂತ ಕಂಟೇನ್ಮಂಟ್ ಪ್ರದೇಶವಾಗಿ ಘೋಷಣೆ ಯಾಗಿದೆ. ಆದಾಗ್ಯೂ, ಮೊಂಡುತನ ಪ್ರದರ್ಶಿಸುತ್ತಿರುವ ಸಾರ್ವಜನಿಕರ ಓಡಾಟ ನಿಯಂತ್ರಿಸಲು ಪೊಲೀಸರು ನಗರದ ಚೆನ್ನಮ್ಮ ವೃತ್ತದಲ್ಲಿ ಲಾಠಿ ರುಚಿ ತೋರಿಸುತ್ತಿದ್ದಾರೆ.

    ಜಿಲ್ಲಾಡಳಿತದ ಆದೇಶಕ್ಕೂ ಕಿಮ್ಮತ್ತು ನೀಡದೇ ಸಾರ್ವಜನಿಕರಿಗೂ, ಬೇಕಾಬಿಟ್ಟಿ ಓಡಾಡುವವರಿಗೂ ಲಾಠಿ ಏಟಿನ ರುಚಿಯ ಅನುಭವ ಬೆಳಗ್ಗೆಯಿಂದಲೇ ಆಗುತ್ತಿದೆ. ಬೈಕ್, ಆಟೋ ಸೇರಿದಂತೆ ಹಲವು ವಾಹನಗಳಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದವರಿಗೂ ಇದು ಅನುಭವಾಗಿದೆ.

    ಜಿಲ್ಲೆಯಲ್ಲಿ 2ನೇ ಕೊರೊನಾ ಪಾಸಿಟಿವ್ ಪ್ರಕರಣವಾಗಿದ್ದು, 2 ವಾರಗಳ ಹಿಂದೆ ಹೊಸ ಯಲ್ಲಾಪುರದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ ಆತ ಗುಣಮುಖರಾಗಿದ್ದರಿಂದ ನಿಟ್ಟುಸಿರು ಬಿಟ್ಟಿತ್ತು ಧಾರವಾಡ ಜಿಲ್ಲೆ. ಆದರೆ, ಈಗ ಹೊಸ ಪ್ರಕರಣ ದಾಖಲಾಗಿರುವ ಕಾರಣ ಎಲ್ಲೆಡೆ ಆತಂಕದ ಕಾರ್ಮೋಡ ಕವಿದಿದೆ. ಈಗ ಸೋಂಕು ದೃಢವಾಗಿರುವ ವ್ಯಕ್ತಿಗೆ ದೆಹಲಿಯ ನಂಟು ಇದ್ದು, ಆತನ ಜತೆ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿದ 16ಜನರಿಗೆ ಕ್ವಾರಂಟೈನ್ ಮಾಡಲಾಗಿದೆ. ಅದೇ ರೀತಿ, ಸೋಂಕಿತನ ಸಹೋದರನ ಕುರಿತ ವರದಿ ಇನ್ನಷ್ಟೇ ಬರಬೇಕಾಗಿದೆ. ಈ ಸಹೋದರರು ದೆಹಲಿ, ಆಗ್ರಾ, ಮುಂಬೈಗಳಲ್ಲಿ ಸುತ್ತಾಡಿ ಬಂದಿದ್ದರು. ಇಬ್ಬರೂ ನಗರದಲ್ಲಿ ಫೂಟ್​ವೇರ್ ವ್ಯಾಪಾರಸ್ಥರು.

    ಹೊಸ ಪ್ರಕರಣದ ಸೋಂಕಿತ ಪ್ರದೇಶ ಮುಲ್ಲಾ ಓಣಿಯಿಂದ 3 ಕಿ.ಮೀ. ಸುತ್ತಳತೆಯ ಪ್ರದೇಶಗಳು ಕಂಟೈನ್ಮೆಂಟ್ ಏರಿಯಾ ಎಂದು ಗುರುತಿಸಲ್ಪಟ್ಟಿವೆ. ಶೇ. 80 ರಷ್ಟು ಹುಬ್ಬಳ್ಳಿ ನಗರ ಕಂಟೈನ್ಮೆಂಟ್ ವ್ಯಾಪ್ತಿಗೆ ಬರುತ್ತಿದ್ದು, ಇಲ್ಲಿ ಸುಮಾರು 1,01,769 ಮನೆಗಳು ಹಾಗೂ 5,71,153 ಜನಸಂಖ್ಯೆ ಇದೆ. ಇದಲ್ಲದೆ, ಹು-ಧಾ ಮಹಾನಗರ ಪಾಲಿಕೆಯ 7 ವಲಯ ಕಚೇರಿಗಳು ಹಾಗೂ 36 ವಾರ್ಡ್ ಸೇರಿ 500ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಮುಲ್ಲಾ ಓಣಿಯ ಪ್ರದೇಶದಲ್ಲಿ ಪಾಲಿಕೆ ವತಿಯಿಂದ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆ ಮಾಡಲಾಗಿದ್ದು, ಕಂಟೈನ್ಮೆಂಟ್ ವಲಯದಲ್ಲಿ ಮುಂದಿನ ಆದೇಶದವರೆಗೆ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ತಪಾಸಣೆ ಕಾರ್ಯ ನಡೆಯುತ್ತಿದೆ. ಮೊದಲು 1 ಕಿ.ಮೀ. ಸುತ್ತಳತೆಯ ಪ್ರದೇಶಕ್ಕೆ ಪಾಲಿಕೆ ಆದ್ಯತೆ ನೀಡುತ್ತಿದ್ದು, ಪೊಲೀಸರಿಂದ ಬಿಗಿ ಬಂದೋಬಸ್ತ್ ಜನರ ಓಡಾಟ ಸ್ತಬ್ಧವಾಗಿದೆ. ಕರ್ತವ್ಯ ನಿರತ ಹಾಗೂ ಸರಕು ಸಾಗಣಿಕೆ ವಾಹಗಳನ್ನು ಹೊರತು ಪಡಿಸಿ ಉಳಿದೆಲ್ಲ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. 3 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಹಾಗೂ ಸಂಸ್ಥೆಯವರು ಆಹಾರ ಮತ್ತು ಇತರೇ ವಸ್ತುಗಳನ್ನು ವಿತರಿಸುವಂತಿಲ್ಲ.

    ವಿಜಯ್​ ಮಲ್ಯಗೆ ಸದ್ಯಕ್ಕೆ ಸಿಕ್ತು ರಿಲೀಫ್​!: ಲಂಡನ್​ ಕೋರ್ಟ್​ನಲ್ಲಿ ಏನಾಯಿತು ವಿಚಾರಣೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts