More

    ಕೃಷಿ ಪಂಪ್‌ಸೆಟ್ ಬಳಕೆ ಬೆಳಗಾವಿ ಫಸ್ಟ್

    ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
    ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬಳಸುವಲ್ಲಿ ಬೆಳಗಾವಿ ಜಿಲ್ಲೆಯ ರೈತರು ಮೊದಲ ಸ್ಥಾನದಲ್ಲಿದ್ದಾರೆ. ಹೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳ ರೈತರು 2023ರ ಏಪ್ರಿಲ್‌ನಿಂದ ಜುಲೈವರೆಗೆ 4 ತಿಂಗಳಲ್ಲಿ ನೀರಾವರಿ ಕೃಷಿ ಪಂಪ್‌ಸೆಟ್‌ಗಳಿಗೆ 3,195.18 ಮಿಲಿಯನ್ ಯೂನಿಟ್ ವಿದ್ಯುತ್ ಬಳಸಿದ್ದಾರೆ. ಇದರ ಬಿಲ್ 2,792.46 ಕೋ.ರೂ. ಆಗಿದೆ. ಇದರ ಪೈಕಿ ರಾಜ್ಯ ಸರ್ಕಾರ ಹೆಸ್ಕಾಂಗೆ 1,594.25 ಕೋ.ರೂ. ಸಬ್ಸಿಡಿ ಹಣ ಪಾವತಿಸಿದೆ.
    ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಾದ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕಳೆದ ವರ್ಷ 2022ರ ಏಪ್ರಿಲ್‌ನಿಂದ 23ರ ಮಾರ್ಚ್‌ವರೆಗೆ ರೈತರು 6,476.23 ಮಿಲಿಯನ್ (ದಶಲಕ್ಷ) ಯೂನಿಟ್ ವಿದ್ಯುತ್ ಬಳಸಿದ್ದು, ಅದರ ಬಿಲ್ 4,838.88 ಕೋ.ರೂ. ಆಗಿದೆ. ಇದರ ಪೈಕಿ ರಾಜ್ಯ ಸರ್ಕಾರ 4,822.67 ಕೋ.ರೂ. ಸಬ್ಸಿಡಿ ಹಣ ಬಿಡುಗಡೆ ಮಾಡಿದೆ. 16.21 ಕೋ.ರೂ. ಬಾಕಿ ಇದೆ.
    ಕಳೆದ ವರ್ಷ ಬೆಳಗಾವಿ ಜಿಲ್ಲೆಯ ರೈತರು 2,633.26 ಮಿಲಿಯನ್ ಯೂನಿಟ್ (ಎಂಯು) ವಿದ್ಯುತ್ ಬಳಸಿದ್ದು, ಇದರ ಬಿಲ್ 1,962.71 ಕೋ. ರೂ. ಆಗಿದೆ. ಬಾಗಲಕೋಟೆ ರೈತರು 1,473.93 ಎಂಯು, 1,095.85 ಕೋ.ರೂ., ವಿಜಯಪುರ 1,408.55 ಎಂಯು, 1,055.70 ಕೋ.ರೂ., ಹಾವೇರಿ 570.95 ಎಂಯು, 429.15 ಕೋ.ರೂ., ಉತ್ತರ ಕನ್ನಡ 154.60 ಎಂಯು, 116.34 ಕೋ.ರೂ., ಗದಗ 127.26 ಎಂಯು, 94.86 ಕೋ.ರೂ., ಧಾರವಾಡ 107.68 ಎಂಯು, 84.27 ಕೋ.ರೂ. ಬಿಲ್ ಆಗಿದೆ.
    ಪ್ರಸಕ್ತ ವರ್ಷ: ಪ್ರಸಕ್ತ ವರ್ಷವೂ ಬೆಳಗಾವಿ ಜಿಲ್ಲೆಯ ರೈತರೇ ಕೃಷಿಗೆ ವಿದ್ಯುತ್ ಬಳಸುವಲ್ಲಿ ಮುಂದಿದ್ದಾರೆ. ಬೆಳಗಾವಿ ಜಿಲ್ಲೆ ರೈತರು 1,138.38 ಎಂಯು ವಿದ್ಯುತ್ ಬಳಸಿದ್ದು, 1,142.78 ಕೋ.ರೂ. ಬಿಲ್, ಬಾಗಲಕೋಟೆ 729.41 ಎಂಯು, 634.61 ಕೋ.ರೂ., ವಿಜಯಪುರ 618.81 ಎಂಯು, 541.86 ಕೋ.ರೂ., ಹಾವೇರಿ 314.12 ಎಂಯು, 282.12 ಕೋ.ರೂ., ಉತ್ತರ ಕನ್ನಡ 83.92 ಎಂಯು 74.89 ಕೋ.ರೂ., ಧಾರವಾಡ 68.12 ಎಂಯು, 61.28 ಕೋ.ರೂ., ಗದಗ 62.42 ಎಂಯು, 54.92 ಕೋ.ರೂ. ಬಿಲ್ ಆಗಿದೆ.

    ಕಳೆದ ವರ್ಷ ಹೆಸ್ಕಾಂ ವ್ಯಾಪ್ತಿಯ ರೈತರು ಐಪಿ ಸೆಟ್‌ಗಳಿಗೆ ಬಳಿಸಿದ ವಿದ್ಯುತ್ ಬಿಲ್ ಪೈಕಿ 16.21 ಕೋ. ರೂ. ಬಾಕಿ ಇದೆ. ರಾಜ್ಯ ಸರ್ಕಾರ ಇದನ್ನು ಬಾಕಿ ಉಳಿಸಿಕೊಂಡಿದೆ. ಅನುದಾನದ ಲಭ್ಯತೆ ನೋಡಿಕೊಂಡು ಹೆಸ್ಕಾಂಗೆ ಹಳೆಯ ಬಾಕಿ ಹಣ ಪಾವತಿಸಲಿದೆ.
    ಪ್ರಕಾಶ ಪಾಟೀಲ
    ನಿರ್ದೇಶಕ, ಹಣಕಾಸು ಹೆಸ್ಕಾಂ

    ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿರುವುದು ರೈತರಿಗೆ ತುಂಬಾ ಅನುಕೂಲವಾಗಿದೆ. ನಮ್ಮದು 10 ಎಕರೆ ಜಮೀನಿದೆ. ಅದರಲ್ಲಿ 2 ಬೋರ್‌ವೆಲ್‌ಗಳಿವೆ. ಪ್ರತಿವರ್ಷ ಕಬ್ಬು, ಗೋವಿನಜೋಳ ಮತ್ತು ಉಳ್ಳಾಗಡ್ಡಿ ಬೆಳೆ ಬೆಳೆಯುತ್ತೇನೆ.
    ರಮೇಶ ಪಾಟೀಲ ಯರಗಟ್ಟಿ, ಬೆಳಗಾವಿ ಜಿಲ್ಲೆ ರೈತ

    ರೈತರು ಬಳಸುವ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವುದು ರೈತರು ನಿರಂತರವಾಗಿ ಬೆಳೆ ಬೆಳೆಯಲು ಸಹಾಯಕವಾಗಿದೆ. ಈ ವರ್ಷ ಎಲ್ಲೆಡೆ ಮಳೆ ಕೊರತೆ ಇದೆ. ಹೀಗಾಗಿ, ನಿಗದಿತ ವಿದ್ಯುತ್‌ಅನ್ನು ನಿತ್ಯ ರೈತರಿಗೆ ಪೂರೈಸಬೇಕು. ಇದರಿಂದ ಇರುವ ಬೆಳೆಯನ್ನಾದರೂ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
    ನಿಜಗುಣಿ ಕೆಲಗೇರಿ
    ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ

    ರೈತರು ಬಳಸುತ್ತಿರುವ ನೀರಾವರಿ ಪಂಪ್‌ಸೆಟ್‌ಗಳ (ಐಪಿ) ವಿವರ
    ಜಿಲ್ಲೆ 2022-23 2023-24
    ಐಪಿ ಸೆಟ್ ಐಪಿ ಸೆಟ್
    ಧಾರವಾಡ — 38,607 38,842
    ಗದಗ — 42,480 42,808
    ಹಾವೇರಿ — 1,10,458 1,11,814
    ಉತ್ತರ ಕನ್ನಡ — 86,192 87,058
    ಬೆಳಗಾವಿ — 3,68,825 3,70,363
    ಬಾಗಲಕೋಟೆ– 1,59,341 1,60,244
    ವಿಜಯಪುರ — 2,17,622 2,19,072

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts