More

    ಏಕದಿನ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಮಿಚೆಲ್ ಮಾರ್ಷ್ ದರ್ಪ! : ಟೀಮ್ ಇಂಡಿಯಾ ಮಾಜಿ ನಾಯಕನ ನೋಡಿ ಕಲಿಯಿರಿ ಎಂದ ಕ್ರಿಕೆಟ್ ಪ್ರೇಮಿಗಳು

    ಬೆಂಗಳೂರು: ದಾಖಲೆಯ ಆರನೇ ಬಾರಿಗೆ ಏಕದಿನ ಕ್ರಿಕೆಟ್ ವಿಶ್ವ ಚಾಂಪಿಯನ್ ಎನಿಸಿಕೊಂಡ ಆಸ್ಟ್ರೇಲಿಯಾ ತಂಡದ ಆಟಗಾರ ಮಿಚೆಲ್ ಮಾರ್ಷ್ ಅವರ ಸಂಭ್ರಮಾಚರಣೆಯ ವರ್ತನೆ ಭಾರೀ ವಿವಾದಕ್ಕೆ ಗುರಿಯಾಗಿದೆ. ಆರಂಭಿಕ ಪಂದ್ಯಗಳಲ್ಲಿ ಟ್ರಾವಿಸ್ ಹೆಡ್ ಗೈರಿನಲ್ಲಿ ಆಸೀಸ್ ಪರ ಉತ್ತಮ ಪ್ರದರ್ಶನ ತೋರಿದ್ದ ಮಾರ್ಷ್ ೈನಲ್ ಗೆದ್ದ ಸಂಭ್ರಮಾಚರಣೆಯಲ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಟ್ರೋಫಿ ಮೇಲೆ ಕಾಲಿಟ್ಟು ಒಂದು ಕೈನಲ್ಲಿ ಬಿಯರ್ ಬಾಟಲ್ ಹಿಡಿದು ಪೋಸ್ ನೀಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳ ಕಣ್ಣು ಕೆಂಪಾಗಿಸಿದೆ.

    https://x.com/mufaddal_vohra/status/1726444308335939699?s=20

    ತಲೆ ಮೇಲೆ ಎತ್ತಿ ಹಿಡಿಯುವ ಕಪ್ ಅನ್ನು ಕಾಲಿನಲ್ಲಿ ತುಳಿದು ಅವಮಾನ ಮಾಡಿದ್ದಾರೆ. ಇದು ದುರಂಹಕಾರದ ಪರಮಾವಧಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಟ್ರೋಫಿ ಜಯಿಸಿಯೂ ಆಸ್ಟ್ರೇಲಿಯಾ ತಂಡ ಸೋಲು ಅನುಭವಿಸಿದೆ. ಒಂದು ವೇಳೆ ಭಾರತ ತಂಡ ಚಾಂಪಿಯನ್ ಎನಿಸಿದ್ದರೆ ಟ್ರೋಫಿಯನ್ನು ಮೊದಲು ದೇವಾಲಯಕ್ಕೆ ತೆಗೆದುಕೊಂಡು ಹೋಗುತ್ತಿದ್ದರು ಎಂದಿದ್ದಾರೆ. ಮಿಚೆಲ್ ಮಾರ್ಷ್ ಅವರ ತಂದೆ ಜ್ೆ ಮಾರ್ಷ್ 1987ರ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು. 1983ರಲ್ಲಿ ಭಾರತ ವಿಶ್ವ ಚಾಂಪಿಯನ್ ಎನಿಸಿದಾಗ ಅಂದಿನ ನಾಯಕ ಕಪಿಲ್ ದೇವ್ ಟ್ರೋಫಿಯನ್ನು ತಲೆಯ ಮೇಲೆ ಇಟ್ಟುಕೊಂಡಿರುವ ಚಿತ್ರವೂ ವೈರಲ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts