More

    ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ನಡೆಸಲು ಹಿಂದೂಗಳಿಗೆ ಕೋರ್ಟ್​ ಅನುಮತಿ

    ವಾರಣಾಸಿ: ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂ ಸಮುದಾಯಕ್ಕೆ ಬಹುದೊಡ್ಡ ಗೆಲವು ಸಿಕ್ಕಿದೆ. ಬರೋಬ್ಬರಿ 31 ವರ್ಷಗಳ ಬಳಿಕ ವಾರಣಾಸಿ ನ್ಯಾಯಾಲಯ ಮೊಹರು ಮಾಡಿದ ನೆಲಮಾಳಿಗೆಯಲ್ಲಿ ಪೂಜೆ ಮತ್ತು ಪ್ರಾರ್ಥನೆ ಮಾಡಲು ಹಿಂದೂಗಳಿಗೆ ಅನುಮತಿ ನೀಡಿದೆ. ಏಳು ದಿನಗಳಲ್ಲಿ ಪೂಜೆ ಆರಂಭವಾಗಲಿದೆ ಎನ್ನಲಾಗಿದೆ.

    ಇದನ್ನೂ ಓದಿ:ಕ್ರಿಕೆಟಿಗ ಮಯಾಂಕ್​ ಅಗರ್ವಾಲ್‌ ಆರೋಗ್ಯದಲ್ಲಿ ಚೇತರಿಕೆ

    ಈ ಪ್ರಕರಣವು ಸೋಮನಾಥ ವ್ಯಾಸ್ ಅವರ ನೆಲಮಾಳಿಗೆಗೆ ಸಂಬಂಧಿಸಿದೆ, ಅಲ್ಲಿ ಅವರ ಕುಟುಂಬವು 1993 ರವರೆಗೆ ಪೂಜೆಯನ್ನು ಮಾಡುತ್ತಿತ್ತು. ಆದರೆ, ರಾಜ್ಯ ಸರ್ಕಾರದ ಆದೇಶದ ನಂತರ, ನೆಲಮಾಳಿಗೆಯಲ್ಲಿ ಪೂಜೆಯನ್ನು ನಿಲ್ಲಿಸಲಾಯಿತು.

    ಇತ್ತ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ಕುರಿತು ಎಎಸ್‌ಐ ಸಮೀಕ್ಷಾ ವರದಿ ಪರಿಗಣಿಸಲು ಯೋಗ್ಯವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಬುಧವಾರ ಹೇಳಿದ್ದು ಮುಸ್ಲಿಂ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿದೆ.

    ಏತನ್ಮಧ್ಯೆ, ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಮುಚ್ಚಿದ ಪ್ರದೇಶದಲ್ಲಿ ಕಂಡುಬಂದಿದೆ ಎಂದು ಹೇಳಲಾದ ‘ಶಿವಲಿಂಗ’ದ ಸ್ವರೂಪ ಮತ್ತು ಸಂಬಂಧಿತ ಲಕ್ಷಣಗಳನ್ನು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡುವಂತೆ ಹಿಂದೂ ಮಹಿಳಾ ಫಿರ್ಯಾದಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

    ಮೈತ್ರಿಕೂಟಕ್ಕೆ INDIA ಹೆಸರು ವಿರೋಧಿಸಿದ್ದೆ: ಸಿಎಂ ನಿತೀಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts