More

    ವಿಕ್ರಮ್ ವೇದಾ ರೀಮೇಕ್ನಿಂದ ಹೃತಿಕ್ ಔಟ್?

    ಮುಂಬೈ: “ವಿಕ್ರಮ್​ ವೇದಾ’ ಎಂಬ ತಮಿಳು ಚಿತ್ರ ಬಿಡುಗಡೆಯಾಗಿ ನಾಲ್ಕು ವರ್ಷಗಳೇ ಆಗಿವೆ. ಯಾವಾಗ ಚಿತ್ರ ಹಿಟ್​ ಆಯಿತೋ, ಆಗ ಹಿಂದಿಯಲ್ಲಿ ಈ ಚಿತ್ರವನ್ನು ರೀಮೇಕ್​ ಮಾಡುವ ಮಾತು ಶುರುವಾಯಿತು. ಆಮೀರ್​ ಖಾನ್​ ಮತ್ತು ಸೈ್​ ಅಲಿ ಖಾನ್​ ಅಭಿನಯದಲ್ಲಿ ಚಿತ್ರ ತಯಾರಾಗುತ್ತಿರುವ ಸುದ್ದಿಯಾಯಿತು. ಆಮೇಲೆ ಏನೋ ಆಗಿ, ಆಮೀರ್​ ಖಾನ್​ ಚಿತ್ರತಂಡದಿಂದ ಹೊರಬಿದ್ದರು. ಅವರ ಬದಲಿಗೆ ಹೃತಿಕ್​ ರೋಶನ್​ ನಟಿಸುತ್ತಾರೆ ಎಂದು ಸುದ್ದಿಯಾಯಿತು. ವಿಜಯ್​ ಸೇತುಪತಿ ಪಾತ್ರಕ್ಕೆ ಆಮೀರ್​ಗಿಂತ ಹೃತಿಕ್​ ಹೆಚ್ಚು ಸೂಕ್ತ ಎಂದು ಎಲ್ಲರೂ ಖುಷಿಯಾಗಿರುವಾಗಲೇ, ಹೃತಿಕ್​ ಈ ಚಿತ್ರದಿಂದ ಔಟ್​ ಆಗಿರುವ ಸುದ್ದಿಯೊಂದು ಬಂದಿದೆ.

    ಇದನ್ನೂ ಓದಿ: ಒಕ್ಕೂಟದ 3 ಸಾವಿರ ಕಾರ್ಮಿಕರಿಗೆ ರೇಷನ್ ಕಿಟ್ ವಿತರಿಸಲು ಉಪ್ಪಿ ತೀರ್ಮಾನ

    ಹೌದು, “ವಿಕ್ರಮ್​ ವೇದಾ’ ಚಿತ್ರದಲ್ಲಿ ಹೃತಿಕ್​ ನಟಿಸುಸುವುದು ಸಂಶಯ ಎಂಬ ಸುದ್ದಿ ಬಾಲಿವುಡ್​ ಅಂಗಳದಲ್ಲಿ ಕೇಳಿಬರುತ್ತಿದೆ. ಅದಕ್ಕೆ ಕಾರಣವೂ ಇದೆ. ಪ್ರಮುಖವಾಗಿ ಹೃತಿಕ್​ ಈ ವರ್ಷ “ೈಟರ್​’ ಎಂಬ ಚಿತ್ರದಲ್ಲಿ ನಟಿಸಲಿದ್ದು, ಮುಂದಿನ ವರ್ಷದ ಏಪ್ರಿಲ್​ನಲ್ಲಿ “ಕ್ರಿಶ್​ 4′ ಚಿತ್ರದಲ್ಲಿ ನಟಿಸಬೇಕಿತ್ತು. ಎರಡೂ ಚಿತ್ರಗಳ ಮಧ್ಯದ ಒಂದೆರೆಡು ತಿಂಗಳುಗಳ ಗ್ಯಾಪ್​ನಲ್ಲಿ “ವಿಕ್ರಂ ವೇದಾ’ ಚಿತ್ರದ ರೀಮೇಕ್​ನಲ್ಲಿ ನಟಿಸಬೇಕಿತ್ತು. ಹೀಗಿರುವಾಗ ಅವರಿಗೆ ವೆಬ್​ಸೀರೀಸ್​ನಲ್ಲಿ ನಟಿಸುವ ಆರ್​ ಬಂದಿದೆ.

    ಇದನ್ನೂ ಓದಿ: ಬಿಗ್​ಬಾಸ್ ಮುಗೀತು.. ಪ್ರಸಾರ ಮುಗಿದಿಲ್ಲ..!

    “ದಿ ನೈಟ್​ ಮ್ಯಾನೇಜರ್​’ನ ಹಿಂದಿ ಅವತರಣಿಕೆಯಾದ ಈ ವೆಬ್​ಸೀರೀಸ್​ನಲ್ಲಿ ಹೃತಿಕ್​ ನಟಿಸುವುದಕ್ಕೆ ಉತ್ಸುಕರಾಗಿದ್ದಾರೆ. ಬೇರೆ ಡೇಟ್ಸ್​ ಇಲ್ಲದ ಕಾರಣ, “ವಿಕ್ರಂ ವೇದಾ’ ರೀಮೇಕ್​ ಬದಲು ಈ ವೆಬ್​ಸೀರೀಸ್​ನಲ್ಲಿ ಯಾಕೆ ನಟಿಸಬಾರದು ಎಂದು ಗೆಳೆಯರ ಹಿತವಚನ, ಹೃತಿಕ್​ಗೂ ಸರಿ ಎನಿಸಿದೆ. ಹಾಗಾಗಿ, ಅವರು “ವಿಕ್ರಂ ವೇದಾ’ ಬಿಟ್ಟು, ಈ ವೆಬ್​ಸೀರೀಸ್​ ಒಪ್ಪಿಕೊಳ್ಳುವುದಕ್ಕೆ ಮುಂದಾಗಿದ್ದಾರಂತೆ. ಈ ಬಗ್ಗೆ ಅವರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬರದಿದ್ದರೂ, “ವಿಕ್ರಂ ವೇದಾ’ ಚಿತ್ರದ ರೀಮೇಕ್​ನಿಂದ ಬಹುತೇಕ ಔಟ್​ ಎಂದು ಹೇಳಲಾಗುತ್ತಿದೆ.

    ಒಂದು ವಾರಕ್ಕಿಂತ ಹೆಚ್ಚು ಕಾಲ ಇನ್ಸ್ಟಾಗ್ರಾಂನಲ್ಲಿ ಇರುವ ನಂಬಿಕೆ ಇಲ್ಲ: ಕಂಗನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts