More

    23 ಗಂಟೆ ಉಪವಾಸ ಮಾಡಿದ ಹೃತಿಕ್​; ಹಾಗೆ ಮಾಡೋದ್ರಿಂದ ಏನೆಲ್ಲ ಆಗುತ್ತೆ ಗೊತ್ತಾ?

    ವಯಸ್ಸು ನಾಲ್ವತ್ತರ ಮೇಲಾದರೂ, ಬಾಲಿವುಡ್​ ನಟ ಹೃತಿಕ್​ ರೋಷನ್​ ಈಗಲೂ ಫಿಟ್​ನೆಸ್​ ಐಕಾನ್​. ಜಿಮ್​, ವ್ಯಾಯಾಮ, ಆಹಾರ ಪದ್ಧತಿ ಹೀಗೆ ಎಲ್ಲವನ್ನೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಇಂದಿಗೂ ಫಿಟ್​ ಆಗಿದ್ದಾರೆ. ಅವರ ಫಿಟ್​ನೆಸ್​ ರಹಸ್ಯವನ್ನು ತಿಳಿದುಕೊಳ್ಳುವ ಕುತೂಹಲವೂ ಬಹುತೇಕರಲ್ಲಿದೆ. ಅಂಥವರಿಗೆ ಟಿಪ್ಸ್ ಕೊಟ್ಟಿದ್ದಾರೆ ಹೃತಿಕ್​. ಅದೇ ಉಪವಾಸ! ಹೌದು, ಸುದೀರ್ಘ 23 ಗಂಟೆಗಳ ಕಾಲ ದ್ರವ ಪದಾರ್ಥಗಳನ್ನು ಹೊರತುಪಡಿಸಿದರೆ, ಬೇರೇನೂ ಸೇವಿಸಿಲ್ಲವಂತೆ ಹೃತಿಕ್​. ಕಳೆದ ಹಲವು ವರ್ಷಗಳಿಂದ ತಿಂಗಳಲ್ಲಿ ಹಲವು ಬಾರಿ ಉಪವಾಸ ಮಾಡುವ ಅವರು, ಆ ಕಾರಣಕ್ಕೆ ಇಂದಿಗೂ ಫಿಟ್​ ಆಗಿದ್ದಾರಂತೆ.

    ಇದನ್ನೂ ಓದಿ: ಪ್ರೌಡ್ ಆಫ್​ ಅನುಷ್ಕಾ … ಹೆಂಡತಿಯ ಬಗ್ಗೆ ವಿರಾಟ್‌ಗೇಕೆ ಹೆಮ್ಮೆ?

    ವಾರಕ್ಕೊಮ್ಮೆ ಉಪವಾಸ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಗೊತ್ತಿರುವ ವಿಚಾರವೇ. ಭಾರತದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅದನ್ನು ಪಾಲಿಸುತ್ತಲೇ ಬರುತ್ತಾರೆ. ಹಾಗಾದರೆ, ಹಾಗೆ ಉಪವಾಸ ಮಾಡುವುದರಿಂದ ದೇಹದಲ್ಲಾಗುವ ಬದಲಾವಣೆಗಳೇನು? ಯಾಕೆ ಉಪವಾಸ ಮಾಡಬೇಕು ಎಂಬುದಕ್ಕೆ ಇಲ್ಲಿ ಒಂದಷ್ಟು ಅಂಶಗಳಿವೆ ಓದಿ.

    ಉಪವಾಸ ಮಾಡುವುದರಿಂದ ಆಗುವ ಪ್ರಯೋಜನಗಳಿವು..

    1. ರಕ್ತದೊತ್ತಡ ಹತೋಟಿಯಲ್ಲಿರುತ್ತದೆ
    2. ಉರಿಯೂತದ ನಿವಾರಣೆಗೆ ಉಪವಾಸ ಅನುಕೂಲಕಾರಿ
    3. ಪದೇಪದೆ ಎದುರಾಗುವ ಅಸ್ವಸ್ಥತೆ, ಸುಸ್ತು ತಡೆಯುತ್ತದೆ
    4. ಪಚನಕ್ರಿಯೆಗೆ ಬೂಸ್ಟ್ ನೀಡುತ್ತದೆ
    5. ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ
    6. ದೇಹದಲ್ಲಿ ಶೇಖರಣೆ ಆದ ಬೇಡದ ಕೊಬ್ಬಿನ ಅಂಶವನ್ನು ಕರಗಿಸುತ್ತದೆ

    ಆಲಿಯಾ ಕೂದಲನ್ನು ಚಾಪ್‌ಚಾಪ್ ಮಾಡಿದ ಪ್ರೀತಿಪಾತ್ರರು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts