More

    ಅಪರಾಧ ತಡೆಯಲು ಹೊಯ್ಸಳಕ್ಕೆ ಹೊಸ ಹುರುಪು! ದಕ್ಷತೆ ಹೆಚ್ಚಿಸಲು ತಯಾರಿ

    ಬೆಂಗಳೂರು : ಸಾರ್ವಜನಿಕರಿಂದ ದೂರುಗಳು ಬಂದಾಗ ಮಾತ್ರ ಹೊಯ್ಸಳ ವಾಹನಗಳು ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿವೆ. ಈ ನಡುವೆ, ಸರಗಳ್ಳತನ, ಸುಲಿಗೆ, ದರೋಡೆಯಂತಹ ಪ್ರಕರಣ ತಪ್ಪಿಸಲು ಹೊಯ್ಸಳ ಹಾಗೂ ಚೀತಾ ವಾಹನ ಸಿಬ್ಬಂದಿಗೆ ಚುರುಕು ಮುಟ್ಟಿಸಿ, ಎಲ್ಲ ಪ್ರದೇಶಗಳಲ್ಲೂ ಕಣ್ಗಾವಲಿಡಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ವ್ಯವಸ್ಥೆ ರೂಪಿಸಲು ಮುಂದಾಗಿದ್ದಾರೆ.

    ನಗರದಲ್ಲಿ ಒಟ್ಟು 272 ಹೊಯ್ಸಳ ವಾಹನಗಳು, 232 ಚೀತಾ ಬೈಕ್‌ಗಳು ಗಸ್ತು ತಿರುಗುತ್ತಿವೆ. ಹೊಯ್ಸಳ ಬೀಟ್ ವ್ಯವಸ್ಥೆಯನ್ನು ಇಷ್ಟು ವರ್ಷಗಳ ಕಾಲ ಆಯಾ ಪೊಲೀಸ್ ಠಾಣಾಧಿಕಾರಿಗಳೇ ನಿಯಂತ್ರಿಸುತ್ತಿದ್ದರು. ಹೊಸ ವ್ಯವಸ್ಥೆಯಲ್ಲಿ ಪೊಲೀಸ್ ಕಮೀಷನರ್ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್‌ನಿಂದಲೇ ನಿಗಾ ವಹಿಸಲಾಗುತ್ತದೆ.

    ಇದನ್ನೂ ಓದಿ: ಸಿಎಂ ಬಿಎಸ್​ವೈ ಸ್ಥಾನ ವಹಿಸುವ ಬಗ್ಗೆ ಪ್ರಹ್ಲಾದ್​ ಜೋಶಿ ಹೇಳಿದ್ದೇನು?

    ಗಸ್ತಿನಲ್ಲಿರುವ ಸಿಬ್ಬಂದಿ ಕಾರ್ಯನಿರ್ವಹಣೆ ಬಗ್ಗೆ ಪ್ರತಿದಿನ ವರದಿ ನೀಡುವಂತೆ ಸಾಫ್ಟ್​ವೇರ್ ಅಪ್‌ಡೇಟ್ ಮಾಡಲಾಗುತ್ತಿದೆ. ಹೊಯ್ಸಳದಲ್ಲಿ ಈಗಾಗಲೇ ಜಿಪಿಎಸ್ ಅಳವಡಿಸಲಾಗಿದ್ದು, ಭೌಗೋಳಿಕ ಪ್ರದೇಶಗಳ ಆಧಾರದ ಮೇರೆಗೆ ಆಯಾ ಠಾಣೆಯ ಸರಹದ್ದು ಗುರುತಿಸುವ ಹಾಗೇ ಜಿಯೋ ಫೆನ್ಸಿಂಗ್ ಮಾಡಿ ಸಾಫ್ಟ್​ವೇರ್‌ನಲ್ಲಿ ಅಳವಡಿಸುವ ಕೆಲಸ ನಡೆಯುತ್ತಿದೆ. ಇದರಿಂದ ಹೊಯ್ಸಳ ಪೊಲೀಸರಿಗೆ ಗಸ್ತು ತಿರುಗಲು ಅನುಕೂಲವಾಗಲಿದೆ.

    ಪೊಲೀಸರು ಗಸ್ತು ತಿರುಗದೆ ಒಂದೇ ಕಡೆ ಹೊಯ್ಸಳ ಇರುವುದು ಕಂಡುಬಂದರೆ ಜಿಪಿಎಸ್ ಸಿಸ್ಟಂನಲ್ಲಿ ಎಚ್ಚರಿಕೆ ಬರುವ ಅಲರ್ಟ್ ವ್ಯವಸ್ಥೆ ಸಿದ್ದಪಡಿಸಲಾಗುತ್ತಿದೆ. ತಮಗೆ ನೀಡಿರುವ ಏರಿಯಾಗಳಲ್ಲಿ ಸದಾ ಕಾಲ ಗಸ್ತು ತಿರುಗಬೇಕು. ತುರ್ತು ಸಂದರ್ಭ ಹೊರತುಪಡಿಸಿ 10 ನಿಮಿಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಹೊಯ್ಸಳ ಇರುವಂತಿಲ್ಲ. ನೀಡಲಾಗಿರುವ ಬೀಟ್‌ನಲ್ಲಿ ಏನಾದರೂ ಅಪರಾಧ ಪ್ರಕರಣ ನಡೆದರೆ ಆಯಾ ಪೊಲೀಸರನ್ನೇ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

    ರೌಡಿಗಳ ಹಾವಳಿ ನಿಯಂತ್ರಿಸಲು ಭಾರಿ ‘ತಲೆ’ ಉಪಯೋಗಿಸಿದ ಗೃಹ ಇಲಾಖೆ; ಬೆಂಗಳೂರು ಪೊಲೀಸ್ ಇತಿಹಾಸದಲ್ಲೇ ಇದು ಮೊದಲು!

    ಪಾರ್ಕಿಂಗ್​ ಜಗಳದಿಂದ ನಡೆದೇ ಹೋಯ್ತು ದುರಂತ! ಸೆಕ್ಯುರಿಟಿ ಗಾರ್ಡ್ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts