More

    ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲೇ ಡೇಟಾ ಪೂರ್ತಿ ಖಾಲಿಯಾಗುತ್ತಿದೆಯೇ? ಡೇಟಾ ಬಳಕೆ ಕಡಿಮೆಯಾಗಲು ಹೀಗೆ ಮಾಡಿ..

    ಬೆಂಗಳೂರು: ವಾಟ್ಸ್​ಆ್ಯಪ್​ ಸದ್ಯ ಅತಿ ಹೆಚ್ಚು ಬಳಕೆಯಾಗುವ ಆ್ಯಪ್ ಎಂದೇ ಹೇಳಬಹುದು. ಆಡಿಯೋ ಕಾಲ್​, ವಿಡಿಯೋ ಕಾಲ್​ ಅವಕಾಶವೂ ಈ ಆ್ಯಪ್​ನಲ್ಲಿರುವುದರಿಂದಾಗಿ ಭಾರತದ ಅತಿ ಹೆಚ್ಚು ಜನರು ಈ ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಆದರೆ ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಡೇಟಾ ಖಾಲಿಯಾಗುತ್ತಿದೆ ಎನ್ನುವ ದೂರುಗಳೂ ಇವೆ. ಹಾಗಾದರೆ ಅದನ್ನು ಹೇಗೆ ನಿಯಂತ್ರಸಿಬೇಕು? ಮುಂದೆ ಓದಿ..

    ಮೊದಲನೆಯದಾಗಿ ನೀವು ಬಳಸುವ ವಾಟ್ಸ್​ಆ್ಯಪ್ ಅಪ್​ಡೇಟ್ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಿ. ನಂತರ ನಿಮ್ಮ ವಾಟ್ಸ್​ಆ್ಯಪ್​ ತೆರೆಯಿರಿ. ಅಲ್ಲಿ ಮೇಲೆ ಬಲ ಭಾಗಕ್ಕೆ ಕಾಣುವ ಮೂರು ಡಾಟ್​ಗಳ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ಸೆಟ್ಟಿಂಗ್ಸ್ ತೆರೆಯಿರಿ. ಅದರಲ್ಲಿ ಸ್ಟೋರೇಜ್ ಆ್ಯಂಡ್ ಡೇಟಾ ಆಯ್ಕೆಯನ್ನು ತೆರೆಯಿರಿ. ಆಗ ನಿಮಗೆ ಯೂಸ್ ಲೆಸ್ ಡೇಟಾ ಫಾರ್ ಕಾಲ್ಸ್​ ಎನ್ನುವ ಆಯ್ಕೆಯೊಂದು ಕಾಣುತ್ತದೆ. ಅದನ್ನು ಅಲೋ ಮಾಡಿ.

    ಈ ರೀತಿ ಮಾಡುವುದರಿಂದ ನಿಮ್ಮ ವಾಟ್ಸ್​ಆ್ಯಪ್​ನಲ್ಲಿ ಮಾಡಲಾಗುವ ವಾಯ್ಸ್​ ಮತ್ತು ವಿಡಿಯೋ ಕಾಲ್​ಗಳಿಗೆ ಕಡಿಮೆ ಡೇಟಾ ಬಳಕೆಯಾಗುತ್ತದೆ. ಆ್ಯಂಡ್ರಾಯ್ಡ್​ ಮತ್ತು ಐಒಎಸ್ ಬಳಕೆದಾರರಿಗೆ ಈ ಆಯ್ಕೆ ಇದೆ. (ಏಜೆನ್ಸೀಸ್)

    ಈ ವಾರ ಪ್ರಕಟವಾಗಲ್ಲ ಸಿಬಿಎಸ್​ಇ ರಿಸಲ್ಟ್​; ಅಂಕ ಸಲ್ಲಿಕೆಯಲ್ಲಿ ಶಾಲೆಗಳ ವಿಳಂಬ

    ಲೋಕೋಪಕಾರದ ಕೆಲಸಕ್ಕಾಗಿ ರಾಗಿಣಿ ದ್ವಿವೇದಿಗೆ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

    ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಾಯಿಯನ್ನು ಟ್ರಿಪ್​ ಕರೆದೊಯ್ದು ಅಂತಿಮ ಆಸೆ ಪೂರೈಸಿದ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts