More

    ಪಡಿತರ ಚೀಟಿ ಕಳೆದು ಹೋಗಿದೆಯೇ?: ಮರಳಿ ಪಡೆಯಲು ಹೀಗೆ ಮಾಡಿ…

    ಬೆಂಗಳೂರು: ಎಪಿಎಲ್‌ ಮತ್ತು ಬಿಪಿಎಲ್‌ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಮತ್ತೆ ಆರಂಭವಾಗುವ ಸಾಧ್ಯತೆಯಿದ್ದು, ಈಗಾಗಲೇ ಜನರು ಬಿಪಿಎಲ್‌ ಪಡಿತರ ಚೀಟಿ ಮಾಡಿಸಿಕೊಳ್ಳಲು ಓಡಾಟ ಆರಂಭಿಸಿದ್ದಾರೆ. ಇನ್ನು ಪಡಿತರ ಚೀಟಿ ಕಳೆದುಕೊಂಡವರಿಗೂ ಆಹಾರ ಇಲಾಖೆ ಗುಡ್ ನ್ಯೂಸ್ ನೀಡಿದೆ.

    ಹೌದು, ಪಡಿತರ ಚೀಟಿ ಕಳೆದು ಹೋದವರಿಗೆ ಆಹಾರ ಇಲಾಖೆಯಿಂದ ಹೊಸ ಪಡಿತರ ಚೀಟಿ ಪಡೆಯಲು ಅವಕಾಶ ನೀಡಲಾಗಿದ್ದು, ರಾಜ್ಯದ ಜನತೆಗೆ ಸಹಾಯವಾಗುವ ರೀತಿಯಲ್ಲಿ ಯೋಜನೆ ಕೈಗೊಳ್ಳಲಾಗಿದೆ. ಒಂದು ವೇಳೆ ಪಡಿತರ ಚೀಟಿ ಕಳೆದು ಹೋದರೂ ನಕಲಿ ಪಡಿತರ ಚೀಟಿ ಪಡೆಯಬಹುದು.

    ನಕಲಿ ಪಡಿತರ ಚೀಟಿ ಪಡೆಯುವುದು ಹೇಗೆ?
    *ರಾಜ್ಯದ ಆಹಾರ ಇಲಾಖೆ ವೆಬ್​​​​​ಸೈಟ್ Http://ahara.kar.nic.in/ ಗೆ ಲಾಗಿನ್ ಆಗಬೇಕು.
    *ನಂತರ ನಕಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಬೇಕು.
    *ಮೊದಲು ಒಂದು ಫಾರ್ಮ್ ಓಪನ್ ಆಗುತ್ತದೆ.
    *ಫಾರ್ಮ್​​​​​​​ನಲ್ಲಿ ನಿಮ್ಮ ಹೆಸರು, ಪಡಿತರ ಚೀಟಿ, ಸಂಖ್ಯೆ ಮಾಹಿತಿ ನಮೂದಿಸಬೇಕು.
    *ಡಾಕ್ಯುಮೆಂಟ್ ನಕಲನ್ನು ಆಪ್ಲೋಡ್ ಮಾಡಬೇಕು.
    *ಅಪ್ಲೋಡ್ ಮಾಡಿದ ನಂತರ ಸಬ್ಮಿಟ್ ಮಾಡಬೇಕು
    *ಮಾಹಿತಿ ಸರಿಯಾಗಿದ್ದರೆ ಕೆಲವೇ ದಿನದಲ್ಲಿ ಪಡಿತರ ಚೀಟಿ ಲಭ್ಯ.
    ಬಹುತೇಕ ಮಂದಿ ಪಡಿತರ ಚೀಟಿ ಕಳೆದುಕೊಂಡಿದ್ದು, ಅಂತವರು ಇದನ್ನು ಸದುಪಯೋಗಪಡಿಸಿಕೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts