More

    ಆ ಗ್ರಾಮದಲ್ಲಿ ನಡೆದಿತ್ತು 3 ಗೌರವ ಹತ್ಯೆ, ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

    ನವದೆಹಲಿ: ಉತ್ತರ ಪ್ರದೇಶದ ಸಂಭಾಲ್​ ಜಿಲ್ಲೆಯ ಗ್ರಾಮವೊಂದರಲ್ಲಿ ಮೂರು ಗೌರವ ಹತ್ಯೆಗಳು ನಡೆದಿದ್ದರೂ ತುಂಬಾ ದಿನಗಳವರೆಗೂ ಅದು ಯಾರಿಗೂ ಗೊತ್ತಾಗಿರಲಿಲ್ಲ. ಆದರೆ, ಕೊಲೆಗಾರರು ಮಾಡಿದ ಒಂದು ಯಡವಟ್ಟು ಇದೀಗ ಅವರ ಗುಟ್ಟನ್ನು ಬಯಲು ಮಾಡಿದೆ.

    ಆಗಿದ್ದೇನೆಂದರೆ, ಆ ಗ್ರಾಮದ ಬಂಟಿ ಎಂಬಾತನ ಮದುವೆ ನಿಗದಿಯಾಗಿತ್ತು. ಆದರೂ ಆತ ತಾನು ಪ್ರೀತಿಸುತ್ತಿದ್ದ ತನ್ನ ದೂರದ ಸಂಬಂಧಿ ಸುಖಿಯಾ ಎಂಬ ಹುಡುಗಿಯೊಂದಿಗೆ ಪರಾರಿಯಾಗಿದ್ದ. ಈ ವಿಷಯ ತಿಳಿದ ಸುಖಿಯಾಳ ಅಣ್ಣ ವಿನೀತ್​ ಓಡಿಹೋದ ಜೋಡಿಗಾಗಿ ಹುಡುಕುತ್ತಲೇ ಇದ್ದ.

    ಜುಲೈ 1ರಂದು ಸುಖಿಯಾ ಮತ್ತು ಬಂಟಿ ಹೊಲವೊಂದರಲ್ಲಿ ಅಡಗಿಕೊಂಡಿರುವುದು ಗೊತ್ತಾಯಿತು. ತಕ್ಷಣವೇ ತನ್ನ ಮೂವರು ಸ್ನೇಹಿತರೊಂದಿಗೆ ಅಲ್ಲಿಗೆ ಹೋದ ವಿನೀತ್​, ತನ್ನ ಸಹಚರರ ಜತೆಗೂಡಿ ಉಸಿರುಗಟ್ಟಿಸಿ ಅವರಿಬ್ಬರನ್ನೂ ಹತ್ಯೆ ಮಾಡಿದ್ದರು. ಬಳಿಕ ಹತ್ತಿರದಲ್ಲಿದ್ದ ಮರವೊಂದಕ್ಕೆ ಹಗ್ಗದ ಕುಣಿಕೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಬಿಂಬಿಸಿದ್ದರು. ಹತ್ಯೆಗೆ ಸಹಕರಿಸಿದ್ದಕ್ಕಾಗಿ ವಿನೀತ್​ ತನ್ನ ಸ್ನೇಹಿತರಿಗೆ 2.5 ಲಕ್ಷ ರೂಪಾಯಿ ಕೊಟ್ಟಿದ್ದ.

    ಇದನ್ನು ಕಂಡವರಿಗೆ ಯಾರಿಗೂ ಅನುಮಾನ ಬಂದಿರಲಿಲ್ಲ. ಇಬ್ಬರೂ ಪ್ರೀತಿಸುತ್ತಿದ್ದರು. ಬಂಟಿಯ ಮದುವೆ ಬೇರೆ ನಿಗದಿಯಾಗಿತ್ತು. ಬೇರೆಯಾಗಲು ಇಷ್ಟವಿಲ್ಲದೆ ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದೇ ಎಲ್ಲರೂ ಮಾತನಾಡಿಕೊಂಡರು.

    ಇದನ್ನೂ ಓದಿ: ಗಂಗಾನದಿಗೆ ಎಸೆಯಲಾಗುತ್ತಿದೆಯಾ ಕೊವಿಡ್​-19ನಿಂದ ಮೃತಪಟ್ಟವರ ಶವಗಳನ್ನು? ಏನಿದು ಫೋಟೋಗಳು?

    ಆದರೆ, ಹುಡುಗಿಯ ಮತ್ತೊಬ್ಬ ಸಹೋದರ ಕುಲದೀಪ್​ ತನ್ನ ಅಣ್ಣ ವಿನೀತ್​ ಮತ್ತು ಆತನ ಸಹಚರರ ಕೃತ್ಯವನ್ನು ಕಣ್ಣಾರೆ ಕಂಡಿದ್ದ. ಈ ವಿಷಯ ವಿನೀತ್​ಗೆ ಗೊತ್ತಾಯಿತು. ಒಂದು ವಾರದ ಬಳಿಕ ಕುಲದೀಪ್​ನನ್ನೂ ಉಪಾಯವಾಗಿ ಅದೇ ಹೊಲಕ್ಕೆ ಕರೆದೊಯ್ದು, ಉಸಿರುಗಟ್ಟಿಸಿ ಹತ್ಯೆ ಮಾಡಿ, ಮರದ ಕೊಂಬೆಗೆ ನೇಣಿನ ಕುಣಿಕೆ ಕಟ್ಟಿ ಶವವನ್ನು ನೇತಾಕಿ ಪರಾರಿಯಾಗಿದ್ದರು.

    ಈ ಬಾರಿ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರಿಗೆ ಇದು ಆತ್ಮಹತ್ಯೆಯಲ್ಲ, ಹತ್ಯೆ ಎಂಬುದು ಖಚಿತಪಟ್ಟಿತು. ಹಾಗಾಗಿ ಆರೋಪಿಗಳಿಗಾಗಿ ತಲಾಷ್​ ಆರಂಭಿಸಿದಾಗ ಈ ಹಿಂದೆ ಇದೇ ಜಾಗದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸುಖಿಯಾಳ ಅಣ್ಣ ವಿನೀತ್​ ಬಗ್ಗೆ ಅನುಮಾನ ಮೂಡಿತು.

    ಆತನನ್ನು ಕರೆದೊಯ್ದು ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡ ಎನ್ನಲಾಗಿದೆ. ಕುಟುಂಬದ ಗೌರವ ಕಾಪಾಡಲು ಈ ಕೃತ್ಯ ಎಸಗಿದ್ದಾಗಿ ಹೇಳಿದ ಎನ್ನಲಾಗಿದೆ. ಇದೀಗ ಆತ ಹಾಗೂ ಆತನ ಸಹಚರರು ಕಂಬಿಯ ಹಿಂದೆ ಸರಿದಿದ್ದಾರೆ.

    ಕೋವಿಡ್​-19 ಪಿಡುಗಿನಿಂದಾಗಿ ಒಡೆಯುತ್ತಿವೆ ಹೃದಯಗಳು, ಇದಕ್ಕೆ ಸೋಂಕು ಕಾರಣವಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts