More

    ಸೆಮಿಫಿನಾಲೆಯಲ್ಲಿ ವಿರಾಟ್​ ಕೊಹ್ಲಿ-ರೋಹಿತ್​ ಶರ್ಮಾ ಅನಪೇಕ್ಷಿತ ದಾಖಲೆ; ಕುಖ್ಯಾತಿ ಅಳಿಸಲು ಸ್ಟಾರ್‌ಗಳಿಗೆ ಬಿಗ್ ಚಾನ್ಸ್

    ಮುಂಬೈ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್​ ಟೂರ್ನಿಯು ಈ ಬಾರಿ ಹಲವು ವಿಶೇಷತೆಗಳಿಂದ ಹೆಚ್ಚು ಸದ್ದು ಮಾಡುತ್ತಿದ್ದು, ಇಂದು (ನವೆಂಬರ್ 15) ಮೊದಲ ನಾಕೌಟ್​ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್​ ತಂಡವನ್ನು ಎದುರಿಸಲಿದೆ. ಲೀಗ್​ ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮಿಫಿನಾಲೆ ಪ್ರವೇಶಿಸಿರುವ ಭಾರತ ನ್ಯೂಜಿಲೆಂಡ್​ ವಿರುದ್ಧ ಸೆಮಿಫಿನಾಲೆಯಲ್ಲಿ ಗೆದ್ದು ತನ್ನ ಹಳೆಯ ಸೇಡನ್ನು ತೀರಿಸಿಕೊಳ್ಳಲು ಸಜ್ಜಾಗಿದೆ.

    ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಹಿಂದೆ ಕ್ರಿಕೆಟ್​ ದಿಗ್ಗಜರ ಹೆಸರಿನಲ್ಲಿದ್ದ ದಾಖಲೆಗಳನ್ನು ಅಳಿಸಿ ಹಾಕುತ್ತಿದ್ದು, ಈ ಇಬ್ಬರು ಆಟಗಾರರು ವಿಶ್ವಕಪ್​ ಸೆಮಿಫಿನಾಲೆಯಲ್ಲಿ ಕಳಪೆ ದಾಖಲೆ ಹೊಂದಿರುವುದು ಬೇಸರದ ಸಂಗತಿ. ಈ ಬಾರಿ ಸಮತೋಲಿತ ತಂಡದೊಂದಿಗೆ ಕಣಕ್ಕಿಳಿದಿರುವ ಟೀಂ ಇಂಡಿಯಾಗೆ ಮಧ್ಯಮ ಕ್ರಮಾಂಕವೇ ದೊಡ್ಡ ಬಲ ಎಂದೇ ಹೇಳಲಾಗಿದೆ. ಆದರೆ, ಈ ಇಬ್ಬರು ಆಟಗಾರರು ಅನಪೇಕ್ಷಿತ ದಾಖಲೆ ತಂಡವನ್ನು ಚಿಂತೆಗೀಡು ಮಾಡಿದೆ.

    ಹಾಲಿ ವಿಶ್ವಕಪ್​ ಆವೃತ್ತಿಯಲ್ಲಿ ಉತ್ತಮ ಫಾರ್ಮ್​ನಲ್ಲಿರುವ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಆಡಿರುವ 9 ಪಂದ್ಯಗಳಿಂದ 500ಕ್ಕೂ ಅಧಿಕ ರನ್​ ಗಳಿಸುವ ಮೂಲಕ ಅಧಿಕ ರನ್​ ಸ್ಕೋರರ್​ಗಳಾಗಿದ್ದಾರೆ. ಆಶ್ವರ್ಯಕರ ವಿಚಾರ ಏನೆಂದರೆ ಕೊಹ್ಲಿ ಅಥವಾ ರೋಹಿತ್​ ಶರ್ಮಾ ಅವರಾಗಲಿ ವಿಶ್ವಕಪ್​ ಸೆಮಿಫಿನಾಲೆಯಲ್ಲಿ ಕಡಿಮೆ ಮೊತ್ತಕ್ಕೆ ಔಟಾಗಿದ್ದು, ಹೆಚ್ಚಿನ ರನ್​ ಗಳಿಸಲು ವಿಫಲರಾಗಿದ್ದಾರೆ.

    Virat Rohit

    ಇದನ್ನೂ ಓದಿ: ಏಕದಿನ ವಿಶ್ವಕಪ್ 2023; ಕ್ರಿಕೆಟ್​ ದಿಗ್ಗಜನ ಹೆಸರಿನಲ್ಲಿರುವ ಈ ದಾಖಲೆಯನ್ನು ಸರಿಗಟ್ಟಲಿದ್ದಾರ ವಿರಾಟ್ ಕೊಹ್ಲಿ

    ಕೊಹ್ಲಿ ಅವರ ಹಿಂದಿನ ಸೆಮಿಫೈನಲ್ ಸ್ಕೋರ್‌ಗಳಲ್ಲಿ 2011 ರಲ್ಲಿ ಪಾಕಿಸ್ತಾನದ ವಿರುದ್ಧ 9, 2015 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 1 ಮತ್ತು 2019 ರಲ್ಲಿ ನ್ಯೂಜಿಲೆಂಡ್ ವಿರುದ್ಧ 1 ರನ್​ ಗಳಿಸಿದ್ದಾರೆ. ವಿಚಿತ್ರ ಏನೆಂದರೆ ಮೂರು ಬಾರಿಯೂ ವಿರಾಟ್​ ಕೊಹ್ಲಿ ಔಟಾಗಿರುವುದು ಎಡಗೈ ಸ್ಪಿನ್ನರ್​ ಅಥವಾ ವೇಗಿಗಳಿಗೆ ಎಂಬುದು ವಿಶೇಷ.

    ಇದಲ್ಲದೆ ರೋಹಿತ್​ ಶರ್ಮಾ ಕೂಡ 2015 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 34 ಮತ್ತು 2019 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕೇವಲ 1 ರನ್ ಗಳಿಸಿದರು, ನಿರ್ಣಾಯಕ ನಾಕೌಟ್ ಪಂದ್ಯಗಳಲ್ಲಿ ಎಡಗೈ ವೇಗಿಗಳಿಗೆ ರೋಹಿತ್​ ಶರ್ಮಾ ವಿಕೆಟ್​ ಒಪ್ಪಿಸಿರುವುದು ದುರದೃಷ್ಟಕರವಾಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫಿನಾಲೆಯಲ್ಲಿ ಕೊಹ್ಲಿ ಮತ್ತು ರೋಹಿತ್​ ಈ ಅನಪೇಕ್ಷಿತ ದಾಖಲೆಯನ್ನು ಮುರಿದು ಹೊರ ಬರುತ್ತಾರ ಎಂದು ಕಾದು ನೋಡಬೇಕಿದೆ.

    ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಹಿಂದಿನ ಸೆಮಿಫೈನಲ್​ಗಳಲ್ಲಿ ಎಡಗೈ ವೇಗಿಗಳಿಗೆ ಹೆಚ್ಚಿನ ವಿಕೆಟ್​ ಒಪ್ಪಿಸಿದ್ದಾರೆ. ಮುಂಬರುವ ಪಂದ್ಯದಲ್ಲಿ ಅವರು ಜಯಿಸಬೇಕಾದ ನಿರ್ದಿಷ್ಟ ಸವಾಲನ್ನು ಎತ್ತಿ ತೋರಿಸಿದ್ದಾರೆ. ಸೆಮಿಫೈನಲ್​ನಲ್ಲಿ ಈ ಇಬ್ಬರು ಆಟಗಾರರ ಮೇಲಿನ ನಿರೀಕ್ಷೆ ಹೆಚ್ಚಾಗಿದ್ದು, ತಂಡಕ್ಕೆ ಗಮನಾರ್ಹ ಕೊಡುಗೆಯನ್ನು ನಿರೀಕ್ಷಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts