More

    ಏಕದಿನ ವಿಶ್ವಕಪ್ 2023; ಕ್ರಿಕೆಟ್​ ದಿಗ್ಗಜನ ಹೆಸರಿನಲ್ಲಿರುವ ಈ ದಾಖಲೆಯನ್ನು ಸರಿಗಟ್ಟಲಿದ್ದಾರ ವಿರಾಟ್ ಕೊಹ್ಲಿ

    ಮುಂಬೈ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್​ ಟೂರ್ನಿಯು ಹಲವು ವಿಶೇಷತೆಗಳಿಂದ ಕೂಡಿದ್ದು, ಬುಧವಾರ ನಡೆಯಲಿರುವ ಮೊದಲ ನಾಕೌಟ್​ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್​ ತಂಡವು ಮುಖಾಮುಖಿಯಾಗಲಿದ್ದು, ಗುರುವಾರ ನಡೆಯಲಿರುವ 2ನೇ ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ.

    ಈ ಬಾರಿಯ ವಿಶೇಷವೇನೆಂದರೆ ವಿಶ್ವಕಪ್​ನಲ್ಲಿ ಈ ನಾಲ್ಕು ತಂಡದ ಆಟಗಾರರು ಅತಿ ಹೆಚ್ಚು ರನ್​ ಗಳಿಸಿದ ಬ್ಯಾಟ್ಸ್​ಮನ್​ಗಳಾಗಿ ಹೊರಹೊಮ್ಮಿದ್ದಾರೆ. ಈ ಬಾರಿ ವಿಶ್ವಕಪ್​ ಟೂರ್ನಿಯಲ್ಲಿ ನಾಲ್ವರು ಬ್ಯಾಟ್ಸ್​ಮನ್​ಗಳು 500ಕ್ಕೂ ಅಧಿಕ ರನ್​ ಗಳಿಸಿದ್ದಾರೆ. ಇದೀಗ ನಾಕೌಟ್​ ಪಂದ್ಯದಲ್ಲಿ ಈ ಐವರು ಆಟಗಾರರಿಗೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್ ಅವರ ಹೆಸರಿನಲ್ಲಿರುವ ದಾಖಲೆಯನ್ನು ಸರಿಗಟ್ಟುವ ಅವಕಾಶವನ್ನು ಹೊಂದಿದ್ದಾರೆ. ಆದರೆ, ಮುಖ್ಯವಾಗಿ ವಿರಾಟ್​ ಕೊಹ್ಲಿ ಎಲ್ಲರ ಹಾಟ್​ ಫೇವರಿಟ್​ ಎಂದು ಹೇಳಲಾಗಿದೆ.

    ಈಗಾಗಲೇ ಕ್ರಿಕೆಟ್​ ದಿಗ್ಗಜನ ಹೆಸರಿನಲ್ಲಿರುವ ದಾಖಲೆಯನ್ನು ಸರಿಗಟ್ಟಿರುವ ಕಿಂಗ್​ ಕೊಹ್ಲಿ ಇಂದು ನ್ಯೂಜಿಲೆಂಡ್​ ವಿರುದ್ಧ ನಡೆಯುವ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಮತ್ತೊಂದು ಮೈಲಿಗಲು ನಿರ್ಮಿಸಲು ಸಜ್ಜಾಗಿದ್ದಾರೆ. ಇಂದು ನ್ಯೂಜಿಲೆಂಡ್​ ವಿರುದ್ಧ ನಡೆಯುವ ಮೊದಲ ಸೆಮಿಫೈನಲ್​ ನಡೆಯಲಿದ್ದು, ಭಾರತ 2019ರ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಸಜ್ಜಾಗಿದೆ.

    Top Run Scorers

    ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಅವಹೇಳನ; ಪ್ರಿಯಾಂಕ ಗಾಂಧಿ, ಅರವಿಂದ್​ ಕೇಜ್ರಿವಾಲ್​ಗೆ ಶೋಕಾಸ್​ ನೋಟಿಸ್

    ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ 2003 ರ ವಿಶ್ವಕಪ್​ನಲ್ಲಿ ಬರೋಬ್ಬರಿ 673 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆ ಮುರಿಯಲು ಈ ಐವರು ಬ್ಯಾಟ್ಸ್​ಮನ್​ಗಳಿಗೆ ಅವಕಾಶ ಇದೇ. ಭಾರತದ ವಿರಾಟ್​ ಕೊಹ್ಲಿ (593), ಕ್ವಿಂಟನ್ ಡಿ ಕಾಕ್ (591), ರಚಿನ್ ರವೀಂದ್ರ (565), ರೋಹಿತ್​ ಶರ್ಮಾ (503), ಡೇವಿಡ್​ ವಾರ್ನರ್ (499) ರನ್​ ಗಳಿಸಿರುವ ಅಗ್ರ ಐವರು ಬ್ಯಾಟ್ಸ್​ಮನ್​ಗಳು.

    ಈ ಐವರು ಬ್ಯಾಟ್ಸ್​ಮನ್​ಗಳು ದಾಖಲೆ ಮುರಿಯಲು ಐವರು ಬ್ಯಾಟರ್​ಗಳಿಗೆ ಅವಕಾಶವಿದೆ. ಯಾರು ಎಷ್ಟು ರನ್​ಗಳಿಸಿದರೆ ಹೊಸ ವಿಶ್ವ ದಾಖಲೆ ನಿರ್ಮಾಣವಾಗಲಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ. ವಿರಾಟ್​ ಕೊಹ್ಲಿ (80), ಕ್ವಿಂಟನ್ ಡಿ ಕಾಕ್ (83), ರಚಿನ್ ರವೀಂದ್ರ (109), ರೋಹಿತ್ ಶರ್ಮಾ (171), ಡೇವಿಡ್ ವಾರ್ನರ್​ (175) ರನ್​ ಗಳಿಸಿದರೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಅವರ ಹೆಸರಿನಲ್ಲಿರುವ ದಾಖಲೆಯನ್ನು ಸರಿಗಟ್ಟಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts