More

    ವಿವಿಧ ವಸತಿ ಯೋಜನೆ 1.36 ಲಕ್ಷ ಲಾನುಭವಿಗಳ ಆಯ್ಕೆಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿ ಆದೇಶ

    ಬೆಂಗಳೂರು: ವಿವಿಧ ವಸತಿ ಯೋಜನೆಯಡಿ ಅನುಮೋದನೆ ಬಾಕಿ ಇರುವ ಮತ್ತು ಲಾನುಭವಿಗಳ ಆಯ್ಕೆ ಆಗದಿರುವ 1.36 ಲಕ್ಷ ಲಾನುಭವಿಗಳ ಆಯ್ಕೆಗೆ ಸರ್ಕಾರ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದೆ.

    ವಸತಿ ಇಲಾಖೆಯಲ್ಲಿ 2021-22, 2022-23ನೇ ಸಾಲಿಗೆ ಹೆಚ್ಚುವರಿಯಾಗಿ ಮಂಜೂರು ಮಾಡಿರುವ ಮನೆಗಳ ಪೈಕಿ ಆನ್‌ಲೈನ್‌ನಲ್ಲಿ ನಿಗದಿಪಡಿಸಿರುವ ಗುರಿಗೆ ಎದುರಾಗಿ ಲಾನುಭವಿಗಳು ಆಯ್ಕೆಯಾಗಿ ವಿವಿಧ ಲಾಗಿನ್ ಹಂತದಲ್ಲಿ ಅನುಮೋದನೆ ಆಗದಿರುವ ಮತ್ತು ಇನ್ನೂ ಲಾನುಭವಿಗಳು ಆಯ್ಕೆಯಾಗದೇ ಬಾಕಿ ಇರುವ 1,35,976 ಮನೆಗಳಿಗೆ ಲಾನುಭವಿಗಳನ್ನು ಆಯ್ಕೆ ಮಾಡಿ ಡೇಟಾ ಎಂಟ್ರಿ ಮಾಡಲು ಮತ್ತು ಅನುಮೋದನೆ ಪಡೆದುಕೊಳ್ಳಲು ನ.30,2023ರ ವರೆಗೆ ಕಾಲಾವಕಾಶ ನೀಡಿ ಆದೇಶಿಸಲಾಗಿದೆ.

    2021-22ನೇ ಸಾಲಿಗೆ ರಾಜ್ಯ ಪುರಷ್ಕೃತ ಯೋಜನೆಗಳಾದ ಬಸವ ವಸತಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆಗಳಿಗೆ ಗುರಿ ನಿಗದಿಪಡಿಸಲಾಗಿತ್ತು. ಜತೆಗೆ ಹೆಚ್ಚುವರಿ ಮನೆ ಮಂಜೂರು ಕೂಡ ಮಾಡಲಾಗಿತ್ತು. ಆದರೆ 1.36 ಲಕ್ಷ ಮನೆಗಳ ಅನುಮೋದನೆ ಬಾಕಿ ಉಳಿದಿತ್ತು. ಈಗ ಈ ಯೋಜನೆಯಡಿ ಹೆಚ್ಚುವರಿ ಗುರಿಗೆ ಎದುರಾಗಿ ಲಾನುಭವಿಗಳನ್ನು ಆಯ್ಕೆ ಮಾಡಲು ಗಡುವು ವಿಸ್ತರಿಸಿ ವಸತಿ ಇಲಾಖೆ ಆದೇಶ ಹೊರಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts