More

    ನೇಣು ಬಿಗಿದ ಸ್ಥಿತಿಯಲ್ಲಿ ಗೃಹಣಿ ಶವ ಪತ್ತೆ

    ರಾಯಚೂರು: ನಗರದ ಸಂತೋಷಿ ಸರೋವರ ಲಾಡ್ಜ್‌ನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಉತ್ತರ ಪ್ರದೇಶ ಮೂಲಕದ ಕಾರ್ಮಿಕನ ಪತ್ನಿಯ ಶವ ಬುಧವಾರ ಪತ್ತೆಯಾಗಿದೆ.
    ಉತ್ತರ ಪ್ರದೇಶದ ನಗಾಲಬಾರಿ ಜಿಲ್ಲೆ ಅತ್ರಾಸ್ ಗ್ರಾಮದ ಸೋನಿ ಗಂಡ ಅವಿನಾಶ (23) ಮೃತ ಮಹಿಳೆಯಾಗಿದ್ದಾಳೆ. ಪತಿ ಅವಿನಾಶ ಲಾಡ್ಜ್‌ನಲ್ಲಿ ಸಿಹಿ ತಿಂಡಿ ತಯಾರಿಸುವ ಕೆಲಸ ಮಾಡುತ್ತಿದ್ದು, ಕಳೆದ 20 ದಿನಗಳ ಹಿಂದೆ ಸೋನಿ ಗಂಡು ಮಗುವಿಗೆ ಜನನ ನೀಡಿದ್ದರು.
    ಮಹಿಳೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪತಿ ಅವಿನಾಶ ಕೆಲಸ ಮುಗಿಸಿ ಕೊಠಡಿಗೆ ಹೋಗಿ ನೋಡಿದಾಗ ಸೋನಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ಎಸ್ಪಿ ಬಿ.ನಿಖಿಲ್, ಡಿವೈಎಸ್ಪಿ ಸತ್ಯನಾರಾಯಣರಾವ್, ಸಿಪಿಐ ನಾಗರಾಜ ಮೇಖಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪತಿ ಅವಿನಾಶನ ವಿಚಾರಣೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts