More

    ಬೆಳಗುತ್ತಿಯಲ್ಲಿ ಮನೆಗೋಡೆ ಕುಸಿತ

    ನ್ಯಾಮತಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ಇಡಿ ರಾತ್ರಿ ನಿರಂತರ ಮಳೆ ಸುರಿದಿದ್ದು, ಬೆಳಗುತ್ತಿಯಲ್ಲಿ ಒಂದು ಮನೆ ಗೋಡೆಗೆ ಭಾಗಶಃ ಹಾನಿವುಂಟಾಗಿದೆ ಎಂದು ತಹಸೀಲ್ದಾರ್ ಆರ್.ವಿ. ಕಟ್ಟಿ ತಿಳಿಸಿದ್ದಾರೆ.

    ಮಂಗಳವಾರ ಎಂದಿನಂತೆ ಶಾಲೆಗಳ ನಡೆದವು. ಮಳೆ, ಮೋಡ ಕವಿದ ವಾತಾವರಣ, ಶೀತಗಾಳಿ ಮುಂದುವರಿದಿದೆ.

    ಹೆಚ್ಚಾದ ಮದ್ರಾಸ್ ಐ

    ನಿರಂತರ ಮಳೆ, ಚಳಿ ವಾತಾವರಣ ಹಿನ್ನ್ನೆಲೆಯಲ್ಲಿ ತಾಲೂಕಿನ ಕೆಲ ಭಾಗಗಳಲ್ಲಿ ಕಂಜೆಕ್ಟಿವೈಟಿಸ್ (ಮದ್ರಾಸ್ ಐ) ಕಾಣಿಸಿಕೊಂಡಿರುವುದಾಗಿ ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರೇಣುಕಾನಂದ ಮೆಣಸಿನಕಾಯಿ ತಿಳಿಸಿದ್ದಾರೆ.

    ಮಳೆಗಾಲದಲ್ಲಿ ಈ ರೋಗಲಕ್ಷಣ ಸಾಮಾನ್ಯವಾಗಿದ್ದು, ನಿರಂತರ ಮಳೆಯಿಂದ ಬಿಸಿಲು ಇಲ್ಲದ ಕಾರಣ ತೇವಾಂಶ ಹೆಚ್ಚಾಗಿ, ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಅವರು ಹೇಳಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts