More

    ಮೈಸೂರಿನಲ್ಲಿ ಮನೆ ಕಳವು : 6.64 ಲಕ್ಷ ರೂ. ದೋಚಿದ ಕಳ್ಳರು

    ಮೈಸೂರು: ನಗರದ ದಟ್ಟಗಳ್ಳಿ ಸಮೀಪದ ಸೋಮನಾಥನಗರದ ಮನೆಯೊಂದರ ಬಾಗಿಲಿನ ಲಾಕ್ ತೆಗೆದು ಒಳ ನುಗ್ಗಿದ ಕಳ್ಳರು 6.64 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ರೂ. ನಗದನ್ನು ದೋಚಿದ್ದಾರೆ.

    ಸೋಮನಾಥನಗರ ನಿವಾಸಿ ಪಿ.ಮಂಜುನಾಥ್ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮಂಜುನಾಥ್ ಕೊಳ್ಳೇಗಾಲದಲ್ಲಿರುವ ಅತ್ತೆ ಮನೆಗೆ ಮೇ 12 ರಂದು ತೆರಳಿದ್ದ ಸಂದರ್ಭ ಈ ಕಳವು ನಡೆದಿದೆ. ಕಳವು ಮಾಹಿತಿ ಸಿಗಬಾರದು ಎಂಬ ಕಾರಣಕ್ಕೆ ಮನೆಯ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳನ್ನು ಜಖಂ ಮಾಡಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts