More

    ಬಾಹ್ಯಾಕಾಶದಲ್ಲಿ ಹೋಟೆಲ್; ಆರ್ಬಿಟಲ್ ಅಸೆಂಬ್ಲಿ ಕಾರ್ಪೋರೇಷನ್​ ಸಿದ್ಧತೆ

    ಕ್ಯಾಲಿಫೋರ್ನಿಯಾ: ಜಗತ್ತಿನ ಮೊದಲ ಬಾಹ್ಯಾಕಾಶ ಹೋಟೆಲ್ 2027ರಿಂದ ಕಾರ್ಯಾಚರಣೆ ಶುರು ಮಾಡಲಿದೆ. ಭೂಮಿಯಿಂದ 400 ಕಿ.ಮೀ. ಮೇಲಕ್ಕೆ ಬಾಹ್ಯಾಕಾಶದ ಕೆಳ ಕಕ್ಷೆಯಲ್ಲಿ 2025ರಲ್ಲಿ ಈ ಹೋಟೆಲ್ ನಿರ್ಮಾಣ ಕಾರ್ಯ ಶುರುವಾಗಲಿದೆ ಎಂದು ಆರ್ಬಿಟಲ್ ಅಸೆಂಬ್ಲಿ ಕಾರ್ಪೆರೇಷನ್ ತಿಳಿಸಿದೆ. 2025ರಲ್ಲಿ ಬಾಹ್ಯಾಕಾಶದಲ್ಲಿ ಕೆಳ ಭೂ ಕಕ್ಷೆಯಲ್ಲಿ ವೋಯೋಜರ್ ಸ್ಟೇಶನ್ ನಿರ್ವಿುಸುವ ಯೋಜನೆ ಹಾಕಿಕೊಳ್ಳಲಾಗಿದೆ. ಬೃಹತ್ ತಿರುಗುವ ಚಕ್ರಕ್ಕೆ ವೈಯಕ್ತಿಕ ಪಾಡ್​ಗಳನ್ನು ಜೋಡಿಸಿ ಈ ಹೋಟೆಲ್ ನಿರ್ವಿುಸಲಾಗುತ್ತದೆ. ಇದರಲ್ಲಿ 400 ಜನರಿಗೆ ಉಳಿದುಕೊಳ್ಳಲು ಸೌಕರ್ಯ ಏರ್ಪಡಿಸಲಾಗುತ್ತದೆ. ಚಕ್ರದ ಆಕ್ಸಲ್​ಗೆ ಎಕ್ಸ್ ಮಾದರಿಯಲ್ಲಿ ಬೇರೆ ಬೇರೆ ಪ್ರದೇಶಗಳನ್ನು ಜೋಡಿಸಲಾಗುತ್ತದೆ. ಹೋಟೆಲ್​ನಲ್ಲಿ ಥೀಮ್್ಡ ರೆಸ್ಟೋರೆಂಟ್, ಹೆಲ್ತ್ ಸ್ಪಾ, ಸಿನಿಮಾ ಹಾಲ್, ಜಿಮ್ ಲೈಬ್ರರಿ, ಕನ್ಸರ್ಟ್ ವೆನ್ಯೂ, ಭೂ ವೀಕ್ಷಣಾ ಲಾಂಜ್, ಬಾರ್ ಒಳಗೊಂಡಿರುತ್ತದೆ. ಸಿಬ್ಬಂದಿ ಕ್ವಾರ್ಟರ್ಸ್ ಕೂಡ ಗಗನ ನೌಕೆಯಲ್ಲಿ ಇರಲಿದೆ.

    ನಿರ್ಮಾಣಕ್ಕೆ ರೋಬಾಟ್: ವೋಯೇಜರ್ ಅಥವಾ ಗಗನ ನೌಕೆಯ ಚೌಕಟ್ಟನ್ನು ನಿರ್ವಿುಸುವುದಕ್ಕೆ ರೋಬಾಟ್ ಸಿದ್ಧಪಡಿಸಲಾಗಿದೆ. ಇದಕ್ಕೆ ಸ್ಟಾರ್ ಎಂದು ನಾಮಕರಣ ಮಾಡಲಾಗಿದೆ. ಬಾಹ್ಯಾಕಾಶದ ಕೆಳ ಭೂಕಕ್ಷೆಯಲ್ಲಿ ಗುರುತ್ವಾಕರ್ಷಣ ಶಕ್ತಿಯ ಪರೀಕ್ಷೆ ನಡೆಸಿದ ಬಳಿಕ ಗಗನ ನೌಕೆ ನಿರ್ಮಾಣ ಕಾರ್ಯ ಶುರುವಾಗಲಿದೆ.

    ಗಗನ ನೌಕೆಗೆ ಕೃತಕ ಗುರುತ್ವಾರ್ಷಣೆ: ಕೆಳ ಭೂ ಕಕ್ಷೆಯಲ್ಲಿ ನಿರ್ಮಾಣ ಗೊಳ್ಳಲಿರುವ ಗಗನ ನೌಕೆಗೆ ಕೃತಕ ಗುರುತ್ವಾರ್ಷಣೆ ಒದಗಿಸುವ ಚಿಂತನೆ ಇದೆ. ಹಾಗೆ ಮಾಡಿದರೆ ಮಾತ್ರವೇ ಚಂದ್ರನ ಮಾದರಿಯಲ್ಲಿ ಭೂಮಿಗೆ ಅದು ಪ್ರದಕ್ಷಿಣೆ ಮಾಡಲಿದೆ. ಗುರುತ್ವಾಕರ್ಷಣೆ ಮತ್ತು ಇತರೆ ಬಾಹ್ಯಾಕಾಶ ಸ್ಥಿತಿಗತಿಗಳ ಅಧ್ಯಯನ ಬಳಿಕ ಗಗನ ನೌಕೆ ನಿರ್ಮಾಣ ಕಾರ್ಯ ಶುರುವಾಗಲಿದೆ ಎಂದು ಆರ್ಬಿಟಲ್ ಅಸೆಂಬ್ಲಿ ತಿಳಿಸಿದೆ.

    ವಿಶೇಷತೆ

    ಭೂಮಿಗೆ ಪ್ರದಕ್ಷಿಣೆ ಹಾಕುವ ಗಗನ ನೌಕೆಯೇ ಹೋಟೆಲ್. ಪ್ರತಿ 90 ನಿಮಿಷಕ್ಕೆ ಒಮ್ಮೆ ಭೂಮಿಗೆ ಸುತ್ತು ಬರಲಿದೆ. ಖಾಸಗಿ ವಿಲ್ಲಾ ಅಥವಾ ಮಾಡ್ಯೂಲ್ ಖರೀದಿಸುವಂತೆ ಈ ಹೋಟೆಲ್​ನಲ್ಲಿ 2012 ಮೀಟರ್ ಪಾಡ್​ಗಳನ್ನು ಖರೀದಿಸಬಹುದು. ಅಲ್ಲಿ ಹೆಲ್ತ್ ಸ್ಪಾ ಮುಂತಾದ ಸೇವಾ ಉದ್ಯಮವನ್ನೂ ಶುರು ಮಾಡಬಹುದು.

    ಯಾರ ಚಿಂತನೆ ಇದು…

    ನಾಸಾ ಅಪೊಲೋ ಕಾರ್ಯಕ್ರಮದ ಆರ್ಕಿಟೆಕ್ಟ್ ಆಗಿದ್ದ ವರ್ನ್ಹೆರ್ ವೋನ್ ಬ್ರೌನ್ ಎಂಬುವವರ ಕಲ್ಪನೆಯ ಕೂಸು ಇದು. 1950ರಲ್ಲೇ ಚಕ್ರಾಕಾರದ ಪ್ರದಕ್ಷಿಣೆ ಹಾಕುವ ಮಾನವ ವಸತಿಯನ್ನು ಬಾಹ್ಯಾಕಾಶದಲ್ಲಿ ನಿರ್ವಿುಸುವ ಪರಿಕಲ್ಪನೆಯನ್ನು ಇವರು ಪ್ರತಿಪಾದಿಸಿದ್ದರು. ಇದೇ ಮಾದರಿಯ ವೋಯೇಜ್ ಸ್ಟೇಶನ್ ಕಲ್ಪನೆ ಬೃಹತ್ ಮಟ್ಟದಲ್ಲಿ 2012ರಲ್ಲಿ ಗೇಟ್ ವೇ ಫೌಂಡೇಷನ್​ನಿಂದ ಪ್ರಸ್ತಾವಿಸಲ್ಪಟ್ಟಿತ್ತು. ಆರ್ಬಿಟಲ್ ಅಸೆಂಬ್ಲಿ ಕಾರ್ಪೆರೇಷನ್ ಅನ್ನು 2018ರಲ್ಲಿ ಹುಟ್ಟುಹಾಕಿತು.

    ಇದು ಮುಂದೆ ಕೈಗಾರಿಕಾ ಕ್ರಾಂತಿ ಆಗಲಿದೆ. ವೋಯೇಜರ್​ನ ಪಾಡ್​ಗಳನ್ನು ಗೇಟ್ ವೇ ಫೌಂಡೇಷನ್ ಖರೀದಿಸಲಿದ್ದು, ಅವುಗಳ ನಿರ್ವಹಣೆ ನೋಡಿಕೊಳ್ಳಲಿದೆ.

    | ಜಾನ್ ಬ್ಲಿನ್​ಕೋವ್, ಗೇಟ್ ವೇ ಫೌಂಡೇಶನ್ ಸಂಸ್ಥಾಪಕ

    ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮ ಅವರ ಈ ಫೋಟೋ!

    ಅವಳಿಗೆ ಈಗ ತಾನು ಹೆಂಗಸಂತಲೇ ಅನಿಸುತ್ತಿಲ್ಲವಂತೆ!; ಉಲ್ಟಾ ಹೊಡೆಯಿತು ಸೌಂದರ್ಯಚಿಕಿತ್ಸೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts