More

    “ಬೆಡ್​ ಇದ್ದಲ್ಲಿ ಯಾವ ಆಸ್ಪತ್ರೆಯೂ ಅಡ್ಮಿಷನ್ ನಿರಾಕರಿಸುವಂತಿಲ್ಲ” ; ಖಾಸಗಿ ಆಸ್ಪತ್ರೆ ವೆಚ್ಚ ಭರಿಸಲಿದೆ ಸರ್ಕಾರ !

    ಲಖನೌ : ಉತ್ತರ ಪ್ರದೇಶದಲ್ಲಿ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯು ಕರೊನಾ ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸದಂತೆ ಎಚ್ಚರಿಕೆ ವಹಿಸಲು ಸಿಎಂ ಯೋಗಿ ಆದಿತ್ಯನಾಥ್​ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಡ್​ ಲಭ್ಯವಿದ್ದಲ್ಲಿ ಯಾವ ಆಸ್ಪತ್ರೆಯೂ ಅಡ್ಮಿಷನ್ ನೀಡದೆ ರೋಗಿಗಳನ್ನು ವಾಪಸ್ ಕಳುಹಿಸುವ ಹಾಗಿಲ್ಲ ಎಂದು ಸಿಎಂ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್​ ಲಭ್ಯವಿಲ್ಲದಿದ್ದಲ್ಲಿ ರೋಗಿಯನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಬೇಕು. ಒಂದು ಪಕ್ಷ ಹೀಗೆ ಖಾಸಗಿ ಆಸ್ಪತ್ರೆಗೆ ಕಳುಹಿಸಲ್ಪಟ್ಟ ರೋಗಿಗೆ ಅಲ್ಲಿನ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲದಿದ್ದಲ್ಲಿ, ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಆಯುಷ್ಮಾನ್ ಭಾರತ್​ ಯೋಜನೆಯಡಿ ಅನುಮೋದಿಸಲ್ಪಟ್ಟ ದರಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹಣ ನೀಡಲಾಗುವುದು ಎಂದು ಸಿಎಂ ಆದಿತ್ಯನಾಥ್ ಹೇಳಿದ್ದಾರೆ. (ಏಜೆನ್ಸೀಸ್)

    ಐಸೋಲೇಷನ್​​ನಲ್ಲಿ ಬಿಜೆಪಿ ಸಚಿವ ಶಹನವಾಜ್​ ಹುಸೇನ್

    ಡಿಸ್ಕೋ ಡ್ಯಾನ್ಸ್​ ಸ್ಟೈಲಲ್ಲಿ ಮಾಸ್ಕ್​ ! ವೈರಲ್ ಆಗ್ತಿದೆ ಈ ಫೋಟೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts