More

    ನಗರಸಭೆ ಕಡತಗಳ ನಾಪತ್ತೆ: ಮೂವರು ಅಮಾನತು

    ಮಾನೇಜರ್ ಕೃಷ್ಣ ಮೂರ್ತಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು

    ಹೊಸಪೇಟೆ: ಹೊಸಪೇಟೆ ನಗರಸಭೆಯಲ್ಲಿ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ವ್ಯವಸ್ಥಾಪಕ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿರುವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಕಚೇರಿ ವ್ಯವಸ್ಥಾಪಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಪೌರಾಡಳಿತ ನಿರ್ದೇಶನಾಲಯದ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

    ನಗರಸಭೆ ಸಿ ವೃಂದದಲ್ಲಿರುವ ವಾಲ್ ಮ್ಯಾನ್ ಹಾಗೂ ಅಭಿಲೇಖಾಲಯದ ಪ್ರಭಾರಿ ವಿಷಯ ನಿರ್ವಾಹಕ ಸುರೇಶ ಬಾಬು ಡಿ.ಎಸ್., ದ್ವಿತೀಯ ದರ್ಜೆ ಸಹಾಯಕ ಎಸ್.ಸುರೇಶ, ಪೌರಕಾರ್ಮಿಕ ಹಾಗೂ ಪ್ರಭಾರಿ ಕರವಸೂಲಿಗಾರ ಎಚ್.ಶಂಕರ್ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಆದರೆ, ಕರ್ನಾಟಕ ನಾಗರಿಕ ಸೇವಾ ನಿಯಮಕ್ಕೊಳಪಡುವ ನಗರಸಭೆ ವ್ಯವಸ್ಥಾಪಕ ಬಿ.ಕೃಷ್ಣಮೂರ್ತಿ ಅವರನ್ನು ಅಮಾನತುಗೊಳಿಸುವ ಅಧಿಕಾರ ತಮ್ಮ ವ್ಯಾಪ್ತಿಗೆ ಇರುವುದರಿಂದ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಪ್ರಕರಣದ ಹಿನ್ನೆಲೆ:
    ಕೆಲ ದಿನಗಳ ಹಿಂದೆ ನಗರಸಭೆ ಅಭಿಲೇಖಾಲಯದ ಪ್ರಭಾರಿ ವಿಷಯ ನಿರ್ವಾಹಕ ಸುರೇಶ ಬಾಬು ಡಿ.ಎಸ್. ಹೆಸರಲ್ಲಿ ಮುಖ್ಯಮಂತ್ರಿ ಸೇರಿದಂತೆ ವಿವಿಧ ಸಂಘಟನೆಗಳಿಗೆ ಪತ್ರ ಬರೆಯಲಾಗಿತ್ತು. ೬-೭ ತಿಂಗಳ ಹಿಂದೆ ಮಾಜಿ ಸಚಿವ ಆನಂದ ಸಿಂಗ್ ಸಂಬAಧಿಕರು ನಗರಸಭೆಯ ದಾಖಲೆ ಕೊಠಡಿಗೆ ಅಕ್ರಮವಾಗಿ ಪ್ರವೇಶಿಸಿ, ಸಿಸಿ ಕ್ಯಾಮರಾಗಳನ್ನು ಬಂದ್ ಮಾಡಿಸಿ, ಕಡತಗಳನ್ನು ಕದ್ದೊಯ್ದಿದ್ದಾರೆ. ಅವುಗಳನ್ನು ಮರಳಿ ತಂದಿಲ್ಲ ಎಂದು ದೂರಲಾಗಿತ್ತು.

    ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ದಾಖಲೆಗಳು ಇರುವಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ಪೌರಾಯುಕ್ತರು ಪ್ರದರ್ಶಿಸಿದರು. ಆಗ ಕೆಲ ಮಹತ್ವದ ಕಡತಗಳು ಲಭ್ಯವಿರಲಿಲ್ಲ. ಈ ಕುರಿತು ಶಿಕ್ಷೆಗೆ ಗುರಿಯಾದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ದಾಖಲೆಗಳನ್ನು ಒದಗಿಸದೇ, ತಪ್ಪು ಮಾಹಿತಿ ನೀಡುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಪೌರಾಯುಕ್ತರ ವರದಿಯನ್ನು ಆಧರಿಸಿ, ಕ್ರಮ ಜರುಗಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts