More

    ಬಸವಣ್ಣನವರ ವಚನಗಳು ಜ್ಞಾನ ಹೆಚ್ಚಿಸುವ ಭಂಡಾರ

    ಹೊಸಪೇಟೆ: ರಾಜ್ಯ ಸರ್ಕಾರ ಬಸವಣ್ಣನನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಹೊಸಪೇಟೆಯ ಬಸವೇಶ್ವರ ವೃತ್ತದಲ್ಲಿ ವೀರಶೈವ-ಲಿಂಗಾಯತ ಸಮಾಜದಿಂದ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು.

    ಇದನ್ನೂ ಓದಿ: ಹೊಸಪೇಟೆ ನಗರಸಭೆ ನೌಕರರ ಅಘೋಷಿತ ಮುಷ್ಕರ?

    ಕನ್ನಡ ವಿವಿಯ ಪ್ರಾಧ್ಯಪಕ ಡಾ.ಕೆ.ರವೀಂದ್ರನಾಥ ಮಾತನಾಡಿ, ವಿಶ್ವಗುರು ಬಸವಣ್ಣ ಅವರಿಗೆ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ಬಸವ ಅನುಯಾಯಿಗಳಿಗೆ ಸಂತಸ ತಂದಿದೆ. ಸಮ ಸಮಾಜ ನಿರ್ಮಾಣ, ಮಹಿಳೆಯರಿಗೂ ಸಮಾನತೆ, ಜಾತಿ ವ್ಯವಸ್ಥೆ ವಿರುದ್ಧ ವಚನ ಸಾಹಿತ್ಯದ ಮೂಲಕ ಅರಿವು ಮೂಡಿಸಿದ ಮಹಾಶರಣ ಬಸವಣ್ಣ. ಅವರ ವಚನಗಳು ಸರ್ವರಿಗೂ ಅರಿವು ಹೆಚ್ಚಿಸುವ ಜ್ಞಾನ ಭಂಡಾರವಾಗಿವೆ. ಬಸವಣ್ಣನವರ ವಚನಗಳನ್ನು ಓದಿ ಅರ್ಥೈಸಿಕೊಂಡರೆ, ಸಮಾಜದಲ್ಲಿನ ಅಂಧತ್ವ, ಮೌಢ್ಯಾಚರಣೆ, ತಾರತಮ್ಯ ಹೋಗಲಾಡಿಸಲು ಸಾಧ್ಯ. ಬಸವಣ್ಣನವರ ವಚನ ಸಂದೇಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಮೂಲಕ ಸಮ ಸಮಾಜಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

    ಮುಖಂಡ ಸಾಲಿಸಿದ್ದಯ್ಯಸ್ವಾಮಿ ಮಾತನಾಡಿ, ಬಸವಣ್ಣನವರ ಚಿಂತನೆಗಳ ಈಗಲು ಜೀವಂತವಾಗಿವೆ. ರಾಜ್ಯದಲ್ಲಿ ಬಸವ ತತ್ವದಂತೆ ಜೀವನ ರೂಪಿಸಿಕೊಂಡರೆ ಕಲ್ಯಾಣ ಕರ್ನಾಟಕವಾಗಲಿದೆ. ಎಲ್ಲರೂ ಒಗ್ಗಟ್ಟಾಗಿ ಸಮಾಜದ ಏಳ್ಗೆಗೆ ಮುಂದಾಗಬೇಕು ಎಂದರು.

    ಪ್ರಮುಖರಾದ ಡಾ.ಮಹಾಬಲೇಶ್ವರ ರೆಡ್ಡಿ, ಉಪನ್ಯಾಸಕ ಬಸವರಾಜ, ಬಸವಕಿರಣ, ಕಾಶಿನಾಥಯ್ಯ, ಚಂದ್ರಶೇಖರ, ಮಧುರಚನ್ನಶಾಸ್ತ್ರಿ, ಬಿ.ಜಿ.ಈಶ್ವರಪ್ಪ, ರೇವಣಸಿದ್ದಪ್ಪ, ಮಾನಳ್ಳಿ ಬಸವರಾಜ, ಅಂಬನಗೌಡ, ಮಲ್ಲೇಶಪ್ಪ, ಕಾಶಿನಾಥ, ಸೋದವಿರೂಪಾಕ್ಷ ಗೌಡ, ಜಂಗಮಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts