More

    ತುಂಗಭದ್ರಾ ಜಲಾಶಯ ಭರ್ತಿಗೆ 10 ಅಡಿ ಬಾಕಿ; ಜಲಾಶಯಕ್ಕೆ 88270 ಕ್ಯೂ. ಒಳ ಹರಿವು

    | ಒಟ್ಟು 105.788 ಪೈಕಿ 80.549 ಟಿಎಂಸಿ ಅಡಿ ಸಂಗ್ರಹ

    ಹೊಸಪೇಟೆ: ತುಂಗಭದ್ರಾ ಜಲಾಶಯದ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಸದ್ಯ 80.549 ಟಿಎಂಸಿ ನೀರು ಸಂಗ್ರಹವಾಗಿದೆ.

    ಒಟ್ಟು 133 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಹೂಳು ತುಂಬಿಕೊಂಡಿದ್ದರಿಂದ ನೀರಿನ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಅಡಿಗೆ ಕುಸಿದಿದೆ. ಆ ಪೈಕಿ ಭಾನುವಾರು ಬೆಳಗ್ಗೆ 8 ಗಂಟೆ ವರೆಗೆ 80.549 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಗರಿಷ್ಠ ಮಟ್ಟ 1633.00 ಅಡಿಗಳಿದ್ದು, ಇಂದಿನ ನೀರಿನ ಮಟ್ಟ 1626.22 ಅಡಿಯಷ್ಟಿದೆ. ಒಳಹರಿವು 88270 ಕ್ಯೂಸೆಕ್ ಇದ್ದು, 221 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.

    ಜಲಾಶಯ ಒಟ್ಟು 116 ಅಡಿ ಎತ್ತರವಿದ್ದು, 106 ಅಡಿಗೆ ನೀರು ತಲುಪಿ, ಭರ್ತಿಯಾಗಲು 10 ಅಡಿ ಬಾಕಿಯಿದೆ. ಜಲಾಶಯದ ಮೇಲ್ಭಾಗದ ಜಲಾನಯನ ಪ್ರದೇಶ ಮತ್ತು ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ 3- 4 ದಿನಗಳಿಂದ ಸರಾಸರಿ 8 ರಿಂದ 10 ಟಿಎಂಸಿ ನೀರು ಹರಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts