More

    ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಾಲ್‌ಟಿಕೆಟ್ ನೀಡದ ಖಾಸಗಿ ಶಾಲೆಗಳು: ಕ್ರಮಕ್ಕೆ ಜೆಡಿಎಸ್ ಮುಖಂಡರ ಒತ್ತಾಯ

    ಹೊಸಪೇಟೆ: ಪೂರ್ಣ ಪ್ರಮಾಣದ ಶುಲ್ಕ ಭರಿಸದಿದ್ದರೆ ಎಸ್ಸೆಸ್ಸೆಲ್ಸಿ ಹಾಲ್‌ಟಿಕೆಟ್ ನೀಡಲ್ಲ ಎನ್ನುತ್ತಿರುವ ಕೆಲ ಖಾಸಗಿ ಶಾಲೆಗಳ ವಿರುದ್ಧ ಕ್ರಮವಹಿಸುವಂತೆ ಒತ್ತಾಯಿಸಿ ಜೆಡಿಎಸ್ ತಾಲೂಕು ಘಟಕದ ಮುಖಂಡರು ಶನಿವಾರ ಬಿಇಒ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಬಸವರಾಜ್‌ಗೆ ಮನವಿ ಸಲ್ಲಿಸಿದರು.

    ಕೆಲ ಖಾಸಗಿ ಶಾಲೆಗಳಲ್ಲಿ ಪೂರ್ಣ ಪ್ರಮಾಣದ ಶುಲ್ಕ ಪಾವತಿಸದ ಮಕ್ಕಳನ್ನು ಆನ್‌ಲೈನ್ ತರಗತಿಯಿಂದ ಹೊರಗಿರಿಸುವ ಕೆಲಸವಾಗುತ್ತಿದೆ. ಬಹುತೇಕ ಬಡ ಹಾಗೂ ಮಧ್ಯಮ ವರ್ಗದ ಜನರು ಮಕ್ಕಳ ಭವಿಷ್ಯ ರೂಪಿಸುವ ಉದ್ದೇಶದಿಂದ ಸಾಲ ಮಾಡಿ ಶುಲ್ಕ ಕಟ್ಟುತ್ತಿದ್ದಾರೆ.ಕೆಲ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಸೂಲಿ ಮಾಡುವ ಮೂಲಕ ಪಾಲಕರನ್ನು ವಂಚಿಸುತ್ತಿವೆ. ಈಗ ಹಾಲ್‌ಟಿಕೆಟ್ ನೀಡಲು ನಿರಾಕರಿಸುತ್ತಿವೆ. ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಕೃಷ್ಣ, ಸಮೀರ್ ಮೆಹಬೂಬ್, ಆಲಂ ಬಾಷಾ, ನವೀನ್, ವಿನೋದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts