More

    ನಿಯಮ ಮೀರಿದರೆ ಶಿಸ್ತು ಕ್ರಮ: ಈದ್ ಮಿಲಾದ್, ವಾಲ್ಮೀಕಿ ಜಯಂತಿ ಶಾಂತಿಸಭೆಯಲ್ಲಿ ಡಿಎಸ್ಪಿ ವಿಶ್ವನಾಥರಾವ್ ಕುಲ್ಕರ್ಣಿ ಎಚ್ಚರಿಕೆ

    ಹೊಸಪೇಟೆ: ಮನುಕುಲಕ್ಕೆ ಶಾಂತಿ ಸಂದೇಶ ಮತ್ತು ಧರ್ಮದ ಹಾದಿ ತೋರಿದ ದಾರ್ಶನಿಕರ ಜಯಂತಿಗಳನ್ನು ಸೌಹಾರ್ದದಿಂದ ಆಚರಿಸಬೇಕು ಎಂದು ಡಿಎಸ್ಪಿ ವಿಶ್ವನಾಥರಾವ್ ಕುಲ್ಕರ್ಣಿ ಹೇಳಿದರು.

    ಈದ್ ಮಿಲಾದ್ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ಟೌನ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಈ ವರ್ಷ ಈದ್ ಮಿಲಾದ್ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಒಟ್ಟೊಟ್ಟಿಗೆ ಬಂದಿರುವುದು ವಿಶೇಷ. ಈ ಹಬ್ಬಗಳ ಆಚರಣೆ ವೇಳೆ ಪರಸ್ಪರ ಸಹಕಾರ, ಪ್ರೀತಿ, ಸ್ನೇಹ, ಭ್ರಾತೃತ್ವ ಮೆರೆಯಬೇಕು ಎಂದು ಸಲಹೆ ನೀಡಿದರು.

    ಸುಪ್ರೀಂಕೋರ್ಟ್ ಆದೇಶದಂತೆ ಡಿಜೆ ಬಳಕೆಗೆ ಅವಕಾಶ ಇಲ್ಲ. ರಾತ್ರಿ 10ಗಂಟೆ ವರೆಗೆ ಮೈಕ್ ಹಚ್ಚಲು ಅವಕಾಶ ಇದೆ. ಅದಕ್ಕೂ ಮೀರಿ ಮೊಳಗಿಸಿದರೆ, ಧ್ವನಿವರ್ಧಕ ವಶಕ್ಕೆ ಪಡೆದು ಆಯೋಜಕರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಸೈಲನ್ಸರ್ ತೆಗೆದು ಬೈಕ್ ಓಡಿಸಿದರೆ ಕೇಸ್ ದಾಖಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಬಳಿಕ ವಿವಿಧ ಸಮುದಾಯಗಳ ಮುಖಂಡರು ಮಾತನಾಡಿದರು. ಪ್ರಮುಖರಾದ ನಾಸೀರ್ ಹುಸೇನ್, ರಾಮಾಲಿ, ವಾಲ್ಮೀಕಿ ಸಮಾಜದ ಕಟಗಿ ಜಂಬಯ್ಯ ನಾಯಕ, ಪಿ.ವೆಂಕಟೇಶ್, ಗುಜ್ಜಲ ಗಣೇಶ, ಯಲ್ಲಾಲಿಂಗ, ತಳವಾರ ರಮೇಶ, ಶ್ರೀನಿವಾಸ, ವೆಂಕಟೇಶ, ಕಂಪ್ಲಿ ಲಕ್ಷ್ಮಣ, ಎನ್.ಕಣಿವೆಪ್ಪ, ಸುರೇಶ, ಅಶೋಕ, ಡಿ.ನಾಗರಾಜ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts