More

    ರಾಣಿಪೇಟೆಯಲ್ಲಿ ದರೋಡೆ, ಮಹಿಳೆ ಕೊಲೆ ಪ್ರಕರಣದ ತನಿಖೆಗೆ ಮೂರು ತಂಡ: ಎಸ್ಪಿ ಡಾ.ಕೆ.ಅರುಣ್ ಮಾಹಿತಿ


    ಹೊಸಪೇಟೆ: ನಗರದ ರಾಣಿಪೇಟೆಯಲ್ಲಿ ಬಟ್ಟೆ ಖರೀದಿ ಸೋಗಿನಲ್ಲಿ ಶುಕ್ರವಾರ ಮನೆಗೆ ನುಗ್ಗಿದ ದುಷ್ಕರ್ಮಿಗಳು ದರೋಡೆ ನಡೆಸಿ ಮಹಿಳೆ ಕೊಲೆಗೈದ ಪ್ರಕರಣದ ತನಿಖೆಗೆ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿದೆ ಎಂದು ಎಸ್ಪಿ ಡಾ.ಕೆ.ಅರುಣ್ ಹೇಳಿದರು.

    ಇಲ್ಲಿಯವರೆಗೆ ಅಪರಾಧಿಗಳ ಯಾವುದೇ ಸಾಕ್ಷ್ಯಗಳು ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ನೇತೃತ್ವದಲ್ಲಿ ಪಟ್ಟಣ ಠಾಣೆ ಸಿಪಿಐ ಶ್ರೀನಿವಾಸ್, ಗ್ರಾಮೀಣ ಠಾಣೆ ಸಿಪಿಐ ಶ್ರೀನಿವಾಸ್ ಮೇಟಿ ಹಾಗೂ ಚಿತ್ತವಾಡ್ಗಿ ಠಾಣೆಯ ಜಯಪ್ರಕಾಶರನ್ನು ಒಳಗೊಂಡ ಮೂರು ತಂಡ ರಚಿಸಲಾಗಿದ್ದು, ತನಿಖೆ ನಡೆಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಮೃತಪಟ್ಟ ಭುವನೇಶ್ವರಿ ಅವರ ಸಹೋದರಿ ಶಿವಭೂಷಣ ಕೊಟ್ಟಿರುವ ದೂರಿನಂತೆ, ಗುರುವಾರ ಇಬ್ಬರು ಬಟ್ಟೆ ಖರೀದಿಗೆಂದು ಮನೆಗೆ ಬಂದಿದ್ದಾರೆ. ಹೆಚ್ಚಿನ ಬಟ್ಟೆ ಖರೀದಿಗೆ ಮರುದಿನ ಬರುವುದಾಗಿ ಹೇಳಿ ಶುಕ್ರವಾರ ಸಂಜೆ ಐದು ಜನ ಬಂದಿದ್ದಾರೆ. ಬಾಗಿಲು ಮುಚ್ಚಿ, ಇಬ್ಬರ ಬಾಯಿಗೆ ಬಟ್ಟೆ ತುರುಕಿ, ಮೂರು ಲಕ್ಷ ರೂ. ನಗದು, 100 ಗ್ರಾಂ. ಚಿನ್ನಾಭರಣ ದೋಚಿಕೊಂಡು ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.

    ಘಟನೆಯಲ್ಲಿ ಉಸಿರುಗಟ್ಟಿ ಭುವನೇಶ್ವರಿ (68) ಮೃತಪಟ್ಟಿದ್ದಾರೆ. ಶಿವಭೂಷಣ ಅವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಒಟ್ಟು ಐದು ಜನ ಬಂದು ಕೃತ್ಯ ಎಸಗಿದ್ದಾರೆ. ಎಲ್ಲರ ವಿರುದ್ಧ ಡಕಾಯಿತಿ, ಕೊಲೆ ಪ್ರಕರಣ ದಾಖಲಿಸಲಾಗಿದೆ. ಜನವಸತಿ ಪ್ರದೇಶದಲ್ಲಿ ಘಟನೆ ನಡೆದಿರುವುದರಿಂದ ಸುತ್ತಲಿನ ಜನರು ಆತಂಕಕ್ಕೆ ಒಳಗಾಗಿರುವುದು ಸಹಜ. ಎಲ್ಲ ಜನವಸತಿ ಪ್ರದೇಶಗಳಲ್ಲಿ ಪೊಲೀಸ್ ಬೀಟ್ ಹೆಚ್ಚಿಸಲಾಗುವುದು ಎಂದರು. ನವೆಂಬರ್‌ನಿಂದ ನಗರದ ಬಾಬು ಜಗಜೀವನರಾಮ್ ಭವನದಲ್ಲಿ ತಾತ್ಕಾಲಿವಾಗಿ ಎಸ್ಪಿ ಕಚೇರಿ ಆರಂಭವಾಗಲಿದೆ. ಮುಂದಿನ ವರ್ಷ ಪೂರ್ಣ ಪ್ರಮಾಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆರಂಭವಾಗಲಿದೆ ಎಂದು ತಿಳಿಸಿದರು. ಡಿವೈಎಸ್ಪಿ ವಿಶ್ವನಾಥ್‌ರಾವ್ ಕುಲಕರ್ಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts