More

    ಹಂಪಿ ಉತ್ಸವದಲ್ಲಿ ಜಕಣಾಚಾರಿಗೆ ಇರಲಿ ಆದ್ಯತೆ: ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಹೇಳಿಕೆ

    ಹೊಸಪೇಟೆ: ವಾಸ್ತುಶಾಸ್ತ್ರ, ಶಿಲ್ಪ ಕಲೆಯನ್ನೇ ಪ್ರಧಾನವನ್ನಾಗಿಸಿಕೊಂಡು ಆಯೋಜಿಸುವ ಹಂಪಿ ಉತ್ಸವದಲ್ಲಿ ವಿಶ್ವಕರ್ಮ ಸಮಾಜ ಮತ್ತು ಸ್ವಾಮೀಜಿಗಳಿಗೆ ಆದ್ಯತೆ ದೊರೆಯದಿದ್ದರೆ, ಮುಂದಿನ ಚುನಾವಣೆಯಲ್ಲಿ ನೀವೇ ನಿರ್ಧರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಹೇಳಿದರು.

    ಜಿಲ್ಲಾಡಳಿತ, ಜಿಪಂ ಹಾಗೂ ಹೊಸಪೇಟೆ ನಗರಸಭೆ ಆಶ್ರಯದಲ್ಲಿ ನಗರದ ಡಾ.ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಳುವ ಸರ್ಕಾರಗಳು ಆಚರಿಸುತ್ತಿರುವ ಶ್ರೀಕೃಷ್ಣ ದೇವರಾಯ ವಂಶಸ್ಥರನ್ನು ಪ್ರಧಾನವನ್ನಾಗಿಸಿಕೊಂಡು ಹಂಪಿ ಉತ್ಸವ ಆಚರಿಸುತ್ತಿಲ್ಲ. ಈ ಉತ್ಸವದಲ್ಲಿ ಶಿಲ್ಪಕಲೆ, ವಾಸ್ತು ಶಿಲ್ಪವೇ ಪ್ರಧಾನವಾಗಿದೆ. ಅಮರ ಶಿಲ್ಪಿಗೆ ಮಹತ್ವ ನೀಡಬೇಕು ಎಂದರು.

    ಕನ್ನಡ ವಿವಿ ಪ್ರಾಧ್ಯಾಪಕ ಪ್ರೊ.ವಾಸುದೇವ ಬಡಿಗೇರ ಮಾತನಾಡಿ, ವಿಶ್ವಕರ್ಮ ಸಮಾಜದ ಕಲೆ ಎಲ್ಲ ಸಮುದಾಯಗಳ ಧಾರ್ಮಿಕ, ಸಾಂಸ್ಕೃತಿಕ ಭಾಗವಾಗಿದೆ ಎಂಬುದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ. ಇಂಥಹ ಸಮಾಜಕ್ಕೆ ಅಸ್ತಿತ್ವವೇ ಇಲ್ಲ ಎಂಬುದು ವಿಷಾದನೀಯ ಎಂದರು.

    ವಿಶ್ವಕರ್ಮ ಜಗದ್ಗುರು ಪೀಠ ಅರೆಮದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ವಿಭೂಷಿತ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಡಾ.ಜಿ.ಬಿ.ಹಂಸನ ಅದಾಚಾರ್ಯ, ವಿಜಯಕುಮಾರ ಬಡಿಗೇರ, ನಾಗರಾಜ ಪತ್ತಾರ್, ಜಿಲ್ಲೆಯ ವಿವಿಧ ತಾಲೂಕಿನ ಅಧ್ಯಕ್ಷರಾದ ವೀರಭದ್ರಪ್ಪ ಆಚಾರ್ಯ, ಬಸವರಾಜ ಬಡಿಗೇರ, ಬಿ.ಮಾನಪ್ಪ, ಬಿ.ಕೊಟ್ರೇಶ ಆಚಾರ್ಯ, ಕೆ.ವೀರಣ್ಣ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts