More

    ಹಂಪಿಯ ಐತಿಹಾಸಿಕ ಸ್ಮಾರಕದ ಮಂಟಪ ಕುಸಿತ

    ಹೊಸಪೇಟೆ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಲ್ಲಿನ ವಿಶ್ವವಿಖ್ಯಾತ ಹಂಪಿಯಲ್ಲಿ ಪುರಾತನ ಪ್ರಸಿದ್ಧ ದೇವಾಲಯವೊಂದರ ಮಂಟಪ ಕುಸಿದಿದೆ.

    ಕಮಲಾಪುರದಿಂದ ಹಂಪಿಗೆ ತೆರಳುವ ಮಾರ್ಗ ಮಧ್ಯದಲ್ಲಿರುವ ನೆಲಸ್ತರದ ಶಿವ ದೇವಾಲಯದಲ್ಲಿರುವ ಪ್ರಸನ್ನ ವಿರೂಪಾಕ್ಷ ದೇಗುಲದ ಮಂಟಪ ಕುಸಿದಿದೆ. ಮೂರು ಕಂಬಳು ನೆಲಕ್ಕುರುಳಿದ್ದು, ಮಣ್ಣಿನ ತಡೆಗೋಡೆಯೂ ಕುಸಿದು ಬಿದ್ದಿದೆ. ಇದರಿಂದಾಗಿ ದೇವಸ್ಥಾನ ವೀಕ್ಷಣೆಗೆ ಬರುವ ಪ್ರವಾಸಿಗರು ನಿರಾಸೆಯಿಂದಲೇ ಹಿಂದಿರುಗುವಂತಾಗಿದೆ.

    ಇದು ಕ್ರಿ.ಶಕ 14ನೇ ಶತಮಾನಕ್ಕೆ ಸೇರಿದ್ದು, ಪ್ರಸನ್ನ ವಿರೂಪಾಕ್ಷ ಎಂದು ಶಾಸನಗಳಲ್ಲಿ ಉಲ್ಲೇಖಿಸಿದೆ. ಅಲ್ಲದೇ, ಕೆಲ ವರ್ಷಗಳಿಂದ ಹಂಪಿಯಲ್ಲಿ ಒಂದಿಲ್ಲೊಂದು ಮಂಟಪ, ಸ್ಮಾರಕಗಳು ನೆಲಕ್ಕುರುಳುತ್ತಿವೆ. ಆದರೂ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಮಾರಕ ಮತ್ತು ಐತಿಹಾಸಿಕ ದೇವಸ್ಥಾನಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts