More

    ಹಂಪಿ ನಮ್ಮ ದೇಶದ ಹಿರಿಮೆ: ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಬಣ್ಣನೆ

    ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ನಮ್ಮ ದೇಶದ ಹಿರಿಮೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಬಣ್ಣಿಸಿದರು.

    ಹಂಪಿ ಸ್ಮಾರಕಗಳನ್ನು ವೀಕ್ಷಿಸಿದ ಬಳಿಕ ಶನಿವಾರ ಅಭಿಪ್ರಾಯ ಹಂಚಿಕೊಂಡರು. ಕಲೆ, ಶಿಲ್ಪಕಲೆ, ಶಿಕ್ಷಣಕ್ಕೆ ವಿಜಯನನಗರ ಅರಸರು ಒತ್ತು ನೀಡಿದ್ದರು. ಇದಕ್ಕೆ ಸ್ಮಾರಕಗಳೇ ಸಾಕ್ಷಿ. ಮುತ್ತು-ರತ್ನಗಳನ್ನು ಬೀದಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ ಆ ದಿನಗಳು ಸುವರ್ಣಯುಗವೇ ಆಗಿತ್ತು. ಶ್ರೀಕೃಷ್ಣದೇವರಾಯ ಒಳ್ಳೆಯ ಆಡಳಿತಗಾರ. ಸುಲ್ತಾನರ ದಾಳಿಯಿಂದ ಸಾಮ್ರಾಜ್ಯವನ್ನು ರಕ್ಷಿಸುವ ಜತೆಗೆ ಜೀರ್ಣೋದ್ಧಾರ ಕಾರ್ಯ ಮಾಡಿದ್ದರು. ಇಂಥ ಸಾಮ್ರಾಜ್ಯದ ಗತ ವೈಭವದ ಕುರಿತು ಇಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು. ಕೇಂದ್ರ ಪುರಾತತ್ವ ಇಲಾಖೆ ಉತ್ತಮ ರೀತಿಯಲ್ಲಿ ಸಂರಕ್ಷಿಸುತ್ತಿದೆ ಎಂದರು.

    ಕಮಲಾಪುರದಿಂದ ಬೆಳಗ್ಗೆ ಕುಟುಂಬ ಸಮೇತರಾಗಿ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದ ಉಪರಾಷ್ಟ್ರಪತಿ, ನಂತರ ಕಮಲ ಮಹಲ್, ಸಾಸಿವೆಕಾಳು ಗಣಪ, ಕಡಲೆಕಾಳು ಗಣಪ, ರಥ ಬೀದಿ, ವಿಜಯ ವಿಠ್ಠಲ ದೇವಸ್ಥಾನ, ಕಲ್ಲಿನ ರಥ, ಸಪ್ತಸ್ವರ ಮಂಟಪ ವೀಕ್ಷಿಸಿ, ಇಲ್ಲಿನ ಶಿಲ್ಪಕಲೆಗೆ ಮನಸೋತರು. ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದರು. ಸ್ಮಾರಕಗಳ ವೀಕ್ಷಣೆ ಬಳಿಕ ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದರು. ಸಂಜೆ ಹೋಟೆಲ್ ಬಳಿ ಆಯೋಜಿಸಿದ್ದ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಆ.22 ರಂದು ಬೆಳಗ್ಗೆ ಹುಬ್ಬಳ್ಳಿಗೆ ತೆರಳಲಿದ್ದಾರೆ.

    ಶಿಲ್ಪಕಲೆಗಳಿಗೆ ಮನಸೋತರು

    ಹಂಪಿ ನಮ್ಮ ದೇಶದ ಹಿರಿಮೆ: ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಬಣ್ಣನೆ
    ಹಂಪಿಯ ಶಿಲ್ಪಕಲೆ, ಸ್ಮಾರಕಗಳಿಗೆ ಎಂ.ವೆಂಕಯ್ಯ ನಾಯ್ಡು ಹಾಗೂ ಕುಟುಂಬ ಸದಸ್ಯರು ಮನಸೋತರು. ವಿರೂಪಾಕ್ಷೇಶ್ವರ ದೇವಸ್ಥಾನ, ಕಮಲ ಮಹಲ್, ವಿಜಯವಿಠ್ಠಲ ದೇವಸ್ಥಾನದ ಆವರಣದಲ್ಲಿ ನೆಲಕ್ಕೆ ಕೆಂಪು ಹಾಸು ಹಾಕಿ, ವೀಕ್ಷಿಸಲು ಕೇಂದ್ರ ಪುರಾತತ್ವ ಇಲಾಖೆ ವ್ಯವಸ್ಥೆ ಮಾಡಿತ್ತು. ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿನ ಆನೆಯಿಂದ ಹೂವಿನ ಹಾರ ಹಾಕಿಸಿಕೊಂಡು ಕುಟುಂಬ ಸದಸ್ಯರು ಸಂತಸಪಟ್ಟರು. ವಿರೂಪಾಕ್ಷೇಶ್ವರನ ಜತೆ ತಾಯಿ ಭುವನೇಶ್ವರಿ ದೇವಿ ದರ್ಶನ ಪಡೆದರು. ನಂತರ ನಡೆದ ಸ್ಮಾರಕಗಳ ವೀಕ್ಷಣೆ ಸಂದರ್ಭ ವಿಶೇಷ ಮಾರ್ಗದರ್ಶಕರು ವಿವರ ನೀಡಿದರು. ವಾರಾಂತ್ಯ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಹಂಪಿ ವೀಕ್ಷಣೆಗೆ ಪ್ರವಾಸಿಗರಿಗೆ ನಿಬರ್ಂಧಿಸಲಾಗಿದೆ. ಎಲ್ಲಿ ನೋಡಿದರೂ ಪೊಲೀಸರ ಸರ್ಪಗಾವಲಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts