More

  ಆನಂದ ಸಿಂಗ್ ರಾಜೀನಾಮೆ ನಿಡಲಿ

  ಹೊಸಪೇಟೆ: ಸಚಿವ ಆನಂದ ಸಿಂಗ್ ಪ್ರತಿನಿಧಿಸುವ ಹೊಸಪೇಟೆಯಲ್ಲಿ ಜನರಿಗೆ ಕುಡಿವ ನೀರು ಒದಗಿಸಲಾಗುತ್ತಿಲ್ಲ. ಕಲುಷಿತ ನೀರು ಸೇವಿಸಿ ಮಹಿಳೆ ಮೃತಪಟ್ಟಿದ್ದು, 200 ಜನ ಅಸ್ವಸ್ಥರಾಗಿದ್ದಾರೆ. ನೈತಿಕತೆ ಇದ್ದರೆ ತಕ್ಷಣವೇ ಮಂತ್ರಿ ಸ್ಥಾನಕ್ಕೆ ಆನಂದ ಸಿಂಗ್ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

  ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಮಂಗಳವಾರ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದರು. ಐಎಸ್‌ಆರ್ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದ್ದರಿದ ರೈತರು, ದುಡಿವ ಜನರ ಅನ್ನ ಕಿತ್ತುಕೊಂಡಂತಾಗಿದೆ. ಕಬ್ಬು ಬೆಳೆಗಾರರಿಗೆ ನೆರವಾಗುತ್ತಿರುವ ಗಾಣಗಳನ್ನು ಸ್ಥಗಿತಗೊಳಿಸುವಂತೆ ಡಿಸಿ ಮೂಲಕ ನೋಟಿಸ್ ಕೊಡಿಸಿದ್ದಾರೆ. ಇಂಥವರು ಅಧಿಕಾರದಲ್ಲಿರಬೇಕಾ ಎಂದು ಪ್ರಶ್ನಿಸಿದರು.

  ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿತುಳುಕುತ್ತಿದೆ ಎಂಬುದಕ್ಕೆ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ವಿಡಿಯೋ ಸಾಕ್ಷಿಯಾಗಿದೆ. ಎಸ್.ಎಂ.ಕೃಷ್ಣಾ ಸರ್ಕಾರದಲ್ಲಿ ಕಕ 371 ಮೀಸಲಾತಿ ಒದಗಿಸುವ ಪ್ರಸ್ತಾವನೆಯನ್ನು ಅಂದಿನ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಸರಾಸಗಟಾಗಿ ತಿರಸ್ಕರಿಸಿದ್ದರು. ಆಗ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಎಲ್ಲಿದ್ದರು ? ಈ ಭಾಗದ ಜನರ ಬೇಡಿಕೆಗೆ ಯುಪಿಎ ಸರ್ಕಾರ ಸ್ಪಂದಿಸಿತು. ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದ್ದಷ್ಟೇ ಬಿಜೆಪಿ ಸರ್ಕಾರದ ಕೊಡುಗೆ ಎಂದರು.

  ಪರಸ್ಪರ ಮಾತನಾಡಿದ ಸಿದ್ದು-ಡಿಕೆಶಿ: ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಅಕ್ಕಪಕ್ಕದಲ್ಲೇ ಕುಳಿತಿದ್ದರೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರಸ್ಪರ ಮಾತನಾಡಲಿಲ್ಲ. ಆದರೆ, ತಮ್ಮ ಭಾಷಣದಲ್ಲಿ ಉಭಯ ನಾಯಕರು ಗೌರವ ಸೂಚಕವಾಗಿ ಪರಸ್ಪರರ ಹೆಸರುಗಳನ್ನು ಪ್ರಸ್ತಾಪಿಸಿದರು.

  ಬಡವರಿಗೆ ಮಾಸಿಕ 200 ಯೂನಿಟ್ ಉಚಿತ ವಿದ್ಯುತ್, ಗೃಹಿಣಿಯರಿಗೆ ಪ್ರತೀ ತಿಂಗಳು ಎರಡು ಸಾವಿರ ರೂ.ಗಳನ್ನು ಕಾಂಗ್ರೆಸ್‌ನಿಂದ ಘೋಷಿಸುತ್ತಿದ್ದಂತೆ ಬಿಜೆಪಿಯಲ್ಲಿ ನಡುಕ ಶುರುವಾಗಿದೆ. ನಾನು ಇಂಧನ ಸಚಿವನಾಗಿದ್ದಾಗ 21 ಸಾವಿರ ಮೆವಾ ಯೂನಿಟ್ ವಿದ್ಯುತ್ ಉತ್ಪಾದನೆ ಗುರುತಿಸಿ ಕೇಂದ್ರದ ಇಂಧನ ಇಲಾಖೆ ಪುರಸ್ಕಾರ ನೀಡಿದೆ. ನನ್ನ ಅವಧಿಯ ಸಾಧನೆ ಪ್ರಶ್ನಿಸುವ ಮುನ್ನ ಸಚಿವ ಆರ್. ಅಶೋಕಗೆ ಇದು ಗೊತ್ತಿರಲಿ.
  ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

  ಹೊಟ್ಟೆಪಾಡಿಗಾಗಿ ದೇಹ ಮಾರಿಕೊಳ್ಳುವವರನ್ನು ವೇಶ್ಯೆ ಎನ್ನುತ್ತೇವೆ. ತನ್ನ ಸ್ವಾರ್ಥಕಕಾಗಿ ಸರ್ಕಾರವನ್ನೇ ಬಲಿಕೊಟ್ಟು ಬಿಜೆಪಿ ಸೇರಿ, ಮಂತ್ರಿಯಾಗಿರುವ ಆನಂದ ಸಿಂಗ್ ಮತ್ತು 18 ಶಾಸಕರನ್ನು ಏನಂದು ಕರೆಯಬೇಕು ?
  ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ವಿಪಕ್ಷ ನಾಯಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts