More

    ವಿದ್ಯುತ್ ದರ ಏರಿಕೆ ಆದೇಶ ಸರ್ಕಾರ ಹಿಂಪಡೆಯಲಿ: ಡಿವೈಎಫ್‌ಐ ಹೊಸಪೇಟೆ ತಾಲೂಕು ಘಟಕ ಒತ್ತಾಯ

    ಹೊಸಪೇಟೆ: ಸರ್ಕಾರ ವಿದ್ಯುತ್ ದರ ಏರಿಕೆ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಫೆಡರೇಷನ್ (ಡಿವೈಎಫ್‌ಐ) ಪದಾಧಿಕಾರಿಗಳು ನಗರದ ಜೆಸ್ಕಾಂ ಜೆಇ ತಿಪ್ಪೇಸ್ವಾಮಿಗೆ ಸೋಮವಾರ ಮನವಿ ಸಲ್ಲಿಸಿದರು.

    ಸಾಮಾನ್ಯ ಕುಟುಂಬಗಳೂ ತಿಂಗಳಿಗೆ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಭರಿಸಬೇಕಾದ ಸ್ಥಿತಿ ಉಂಟಾಗಿದೆ. ಅದರಲ್ಲೂ ಕರೊನಾ ಹಾವಳಿಯಿಂದ ಜನತೆ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದಾರೆ. ಕರೊನಾ ಎರಡನೇ ಅಲೆಯ ನಿರ್ವಹಣೆ ಭಾಗವಾಗಿ ರಾಜ್ಯ ಸರ್ಕಾರ ಯಾವುದೇ ಪ್ರಾಯೋಗಿಕ ಸಿದ್ಧತೆ ಇಲ್ಲದೆ ಸತತ ಎರಡು ತಿಂಗಳಿಗೂ ಹೆಚ್ಚು ಕಾಲ ಲಾಕ್‌ಡೌನ್ ವಿಧಿಸಿ ಜನರನ್ನು ಮನೆಯೊಳಗಡೆ ಕೂಡಿ ಹಾಕಿದೆ. ಇದರಿಂದ ದುಡಿಮೆಯ ಅವಕಾಶಗಳು ಪೂರ್ಣವಾಗಿ ಕಸಿದಿದ್ದು, ಜೀವನ ನಿರ್ವಹಣೆಗಾಗಿ ಪರದಾಡುವಂತಾಗಿದೆ.

    ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರದ ಅಧೀನದಲ್ಲಿರುವ ವಿದ್ಯುತ್, ಕುಡಿವ ನೀರಿನ ಬಿಲ್ ಹಾಗೂ ನಗರಸಭೆ ತೆರಿಗೆಯನ್ನು ಸರ್ಕಾರ ಸ್ವಯಂ ಪ್ರೇರಣೆಯಿಂದ ಮನ್ನಾ ಮಾಡಬೇಕಿತ್ತು. ಆದರೆ ಲಾಕ್‌ಡೌನ್ ಅವಧಿಯಲ್ಲಿಯೂ ವಿದ್ಯುತ್ ದರ ಏರಿಸಿರುವುದು ಖಂಡನೀಯ ಎಂದರು. ಸಂಘಟನೆ ತಾಲೂಕು ಉಪಾಧ್ಯಕ್ಷ ಕಿನ್ನಾಳ್ ಹನುಮಂತ, ಪ್ರಮುಖರಾದ ಬಂಡೆ ತಿರುಕಪ್ಪ, ಅಲ್ತಾಫ್, ಪವನಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts