More

    ಕೆಲಸ ಕಾಯಂ, ಕನಿಷ್ಠ ವೇತನಕ್ಕೆ ಒತ್ತಾಯ

    ಹೊಸಪೇಟೆ: ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೇರಪಾವತಿ ಪೌರ ಕಾರ್ಮಿಕರನ್ನು ಕಾಯಂಗೊಳಿಸಿ ಹಾಗೂ ಕಾರ್ಮಿರಿಗೆ 31 ಸಾವಿರ ರೂ. ಕನಿಷ್ಠ ವೇತವನ್ನು ನಿಗದಿ ಪಡಿಸಿ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ೋಷಿಸುವಂತೆ ಸಮಾನತೆ ಯೂನಿಯನ್- ಕರ್ನಾಟಕ ಹೊಸಪೇಟೆ ಘಟಕ ಒತ್ತಾಯಿಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಜಮಾವಣೆಗೊಂಡ ಪೌರಕಾರ್ಮಿಕರು, ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿದರು.

    ಸಂಘಟನೆಯ ರಾಜ್ಯ ಸಂಚಾಲಕ ರಾಮಚಂದ್ರ ಮಾತನಾಡಿ, 40 ಸಾವಿರ ಪೌರಕಾರ್ಮಿಕರು, ಒಳಚರಂಡಿ ಕಾರ್ಮಿಕರು ಮತ್ತು ಕಸದ ವಾಹನ ಚಾಲಕರನ್ನು ಕಾಯಂಗೊಳಿಸುವಂತೆ 5 ವರ್ಷಗಳಿಂದ ಹೋರಾಟ ಮಾಡುತ್ತ ಬಂದರೂ ಸರ್ಕಾರ ಪೌರ ಕಾರ್ಮಿಕರ ಬದುಕಿಗೆ ಬೆಳಕಾಗುತ್ತಿಲ್ಲ. ವಯಸ್ಸಿನ ಮಿತಿಯಿಲ್ಲದೆ ಎಲ್ಲ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಈ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಪ್ರತಿ 5 ವರ್ಷಗಳಿಗೊಮ್ಮೆ ಕನಿಷ್ಠ ವೇತನ ದರ ಬದಲಾವಣೆಯಾಗಬೇಕೆಂಬ ನಿಯಮವಿದ್ದರೂ ಅನುಷ್ಠಾನಗೊಂಡಿಲ್ಲ. ಪೌರಕಾರ್ಮಿಕರು ಹಾಗೂ ಯುಜಿಡಿ ಕಾರ್ಮಿಕರು (ಒಳಚರಂಡಿ) ಕಸದ ವಾಹನ ಚಾಲಕರಿಗೆ ಕನಿಷ್ಠ ವೇತನ ನಿಗದಿಪಡಿಸುವಂತೆ ಕಾರ್ಮಿಕರ ಇಲಾಖೆಗೆ ಸೂಚನೆ ನೀಡಬೇಕು. ಉಪಾಹಾರ, ಊಟದ ಭತ್ಯೆ ಹೆಚ್ಚಿಸಬೇಕು. ಪೌರಕಾರ್ಮಿಕರ ಹಾಗೂ ಅವಲಂಬಿತರ ಸಾಮಾಜಿಕ ಕಲ್ಯಾಣಕ್ಕಾಗಿ ಪ್ರತ್ಯೇಕ ನಿಧಿ ಸ್ಥಾಪಿಸಬೇಕು. ಸ್ವಚ್ಛತೆಗೆ ಮತ್ತು ಸಂಬಂದಿಸಿದ ಎಲ್ಲ ಕಾರ್ಮಿಕರಿಗೆ ನಿವೇಶನ ಹಾಗೂ ವಸತಿ ನೀಡಬೇಕು.

    ಪೌರಕಾರ್ಮಿಕರ ಕಾಲನಿಗಳ ಅಭಿವೃದ್ಧಿಗೆ ಒತ್ತು ನೀಡಬೇಕು. 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ 10 ಲಕ್ಷ ನೀಡಬೇಕು. ಮರಣಹೊಂದಿರುವ ಪೌರಕಾರ್ಮಿಕರ ಕುಟುಂಬದವರಿಗೆ ಕೆಲಸ ನೀಡಬೇಕು. ರಾಜ್ಯದ ಎಲ್ಲ ಸಫಾಯಿ ಕರ್ಮಚಾರಿಗಳು ಮತ್ತು ಅವಲಂಬಿತರಿಗೆ ಗುರುತಿನ ಚೀಟಿ ನೀಡಬೇಕೆಂದು ಆಗ್ರಹಿಸಿ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಎಚ್.ಶ್ರೀನಿವಾಸಲು, ಮಂಜುನಾಥ, ಗುರುಪ್ರಸಾದ, ಹೊನ್ನೂರ, ಶ್ರೀನಿವಾಸಲು, ಜಂಬಯ್ಯ, ಚಿನ್ನ ಮಾರೆಣ್ಣ, ಪರಶುರಾಮ, ವೆಂಕಟೇಶ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts